ಜಾಗತಿಕ ತಾಪಮಾನ: ಡೊನಾಲ್ಡ್ ಟ್ರಂಪ್ ನುಡಿದ ಭವಿಷ್ಯ..!!

0
8

ವಾಷಿಂಗ್ಟನ್:- ಹವಾಮಾನ ವೈಪರೀತ್ಯದ ಕುರಿತು ವಿಜ್ಞಾನಿಗಳ ಗ್ರಹಿಕೆ ಮತ್ತು ಅಧ್ಯಯನದ ಬಗ್ಗೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅನುಮಾನ ವ್ಯಕ್ತಪಡಿಸಿದ್ದಾರೆ.

ಜಾಗತಿಕ ತಾಪಮಾನ ಸಹ ಶೀಘ್ರದಲ್ಲಿಯೇ ತಣ್ಣಗಾಗಲಿದೆ ಎಂದೂ ಹೊಸ ಭವಿಷ್ಯ ನುಡಿದಿದ್ದಾರೆ.ಸಂವಾದವೊಂದರಲ್ಲಿ ಮಾತನಾಡಿರುವ ಡೊನಾಲ್ಡ್ ಟ್ರಂಪ್, ಜಾಗತಿಕ ವಾತಾವರಣ ಶೀಘ್ರ ತಣ್ಣಗಾಗಲಿದೆ ಕಾದು ನೋಡಿ, ಬಹುಶಃ ಇದು ವಿಜ್ಞಾನಕ್ಕೆ ಸರಿಯಾಗಿ ತಿಳಿದಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ .

ವಾತಾವರಣದ ಬದಲಾವಣೆಯನ್ನು ನೀವು ಗಮನಿಸಬೇಕು ಎಂದು ಹೇಳಿದ್ದಾರೆ ಕ್ಯಾಲಿಫೋರ್ನಿಯಾ ಮತ್ತು ಒರೆಗಾವ್ ನಲ್ಲಿನ ಕಾಳ್ಗಿಚ್ಚಿನ ಪ್ರಕೋಪಕ್ಕೆ ಅರಣ್ಯವನ್ನು ಸೂಕ್ತವಾಗಿ ನೋಡಿಕೊಳ್ಳದಿರುವುದೇ ಕಾರಣ ಎಂದರು.
ಉರುಳಿದ ಮರಗಳು ಕೆಲವು ಸಮಯದಲ್ಲಿಯೇ ಬಹಳ ಒಣಗಿ ಹೋಗಿ ಬೆಂಕಿ ಕಡ್ಡಿಯಂತಾಗಿರುತ್ತವೆ. ಅವು ಸ್ಫೋಟಗೊಳ್ಳಬಹುದು. ಹಾಗೆಯೇ ಎಲೆಗಳು ಕೂಡ. ನೆಲದಲ್ಲಿ ಒಣಗಿದ ಎಲೆಗಳಿದ್ದರೆ ಬೆಂಕಿಗೆ ತುಪ್ಪ ಸುರಿದಂತೆ ಎಂದೂ ಟ್ರಂಪ್ ತಿಳಿಸಿದ್ದಾರೆ.

loading...