ಜಿಪಂ ಸದಸ್ಯರು ಸೇರಿ ಹಲವು ತಾಲೂಕು ಪಂಚಾಯ್ತಿ ಸದಸ್ಯರು ಶೀಘ್ರ ಜೆಡಿಎಸ್ ಸೇರ್ಪಡೆ

0
620

.ಕನ್ನಡಮ್ಮ ಸುದ್ದಿ

ಬೆಳಗಾವಿ : 25 ಕಾಗತಿ ಜಿಲ್ಲಾ ಪಂಚಾಯ್ತಿ ಸದಸ್ಯ ಶಿದಗೌಡ ಸುಣಗಾರ, ಸೇರಿದಂತೆ ಹಲವಾರು ಜನ ಶೀಘ್ರವೇ ಜೆಡಿಎಸ್ ಸೇರಲಿದ್ದಾರೆ ಎಂದು ತಿಳಿದು ಬಂದಿದೆ. ಕಾಗತಿ ಗ್ರಾಮ ಯಮಕನಮರ್ಡಿ ಮೀಸಲು ಕ್ಷೇತ್ರವಾದ್ದರಿಂದ ಪಕ್ಕದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಶಿದಗೌಡ ಸುಣಗಾರ , ಈಗಾಗಲೇ ಗ್ರಾಮೀಣ ಕ್ಷೇತ್ರದಲ್ಲಿ ತಮ್ಮ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಜಿಪಂ ಸದಸ್ಯರು ಆಗಿರುವ ಶಿದಗೌಡ ಸುಣಗಾರ ಹಿಂದೆ ,ಲಕ್ಷ್ಮಿ ಹೆಬ್ಬಾಳಕರ ಅವರ ವಿರುದ್ಧ ಬಂಡಾಯವಾಗಿ ಸ್ಪರ್ದೇ ಮಾಡಿದ್ದ ಆನಂದಸ್ವಾಮಿ ಗಡ್ಡದೇವರಮಠ ಹಾಗೂ ಮಾಜಿ ಸಚಿವ ಸತೀಶ ಜಾರಕಿಹೊಳಿ ಇದ್ದಾರೆಂಬುದು ಸ್ಪಷ್ಟ . ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜೆಡಿಎಸ್ ಮುಖಂಡ ಶ್ರೀಶೈಲ ಫಡಗಲ್ , ಶಿದಗೌಡ ಸುಣಗಾರ ಸೇರಿದಂತೆ ಇಬ್ಬರು ಜಿಪಂ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡ ಬಸವರಾಜ ಮೇಳೆದ , ತಾಪಂ ಸದಸ್ಯರು ಸೇರಿ ಹಲವಾರು ಜನ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಶೀಘ್ರದಲ್ಲಿಯೇ ಜೆಡಿಎಸ್ ಸೇರಲಿದ್ದಾರೆ ಎಂದು ತಿಳಿಸಿದರು.

loading...