ಜಿಲ್ಲಾಮಟ್ಟದ ದಸರಾ ಮಹಿಳಾ (ಪೈಕಾ) ಕ್ರೀಡಾಕೂಟಕ್ಕೆ ಚಾಲನೆ

0
2

 ಬೆಳಗಾವಿ: ಸೆಪ್ಟೆಂಬರ್: 14:ವಿದ್ಯಾರ್ಥಿಗಳನ್ನು ಅಂತರರಾಷ್ಟ್ತ್ರೀಯ ಮಟ್ಟದ ಕ್ರೀಡಾಪಟುಗಳನ್ನಾಗಿ ರೂಪಿಸುವ ದಿಸೆಯಲ್ಲಿ ಅವರಿಗೆ ಕ್ರೀಡೆಯ ಮಹತ್ವದ ಬಗ್ಗೆ ಅವಶ್ಯಕ ಮಾರ್ಗದರ್ಶನ ನೀಡಬೇಕೆಂದು ಕ್ರೀಡಾ ತರಬೇತಿದಾರರಿಗೆ ಹಾಗೂ ಅಧಿಕಾರಿಗಳಿಗೆ ಸಂಸದರಾದ. ಸುರೇಶ ಅಂಗಡಿ ಅವರು ಸಲಹೆ ನೀಡಿದ್ದಾರೆ.

ನಗರದ ಸಿ.ಪಿ.ಎಡ್. ಕಾಲೇಜು ಮೈದಾನದಲ್ಲಿಂದು ಜಿಲ್ಲಾಮಟ್ಟದ ದಸರಾ/ ಮಹಿಳಾ (ಪೈಕಾ) ಕ್ರೀಡಾಕೂಟವನ್ನು ಕ್ರೀಡಾಪಟುಗಳಿಂದ ಕ್ರೀಡಾ ಜ್ಯೌತಿ ಸ್ವೀಕರಿಸಿ ಪಾರಿವಾಳಗಳನ್ನು ಹಾರಿಬಿಡುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಆರೋಗ್ಯವಂತ ಸದೃಢ ಯುವಕರು ಸದೃಢ ರಾಷ್ಟ್ತ್ರದ ಪ್ರತೀಕವಾಗಿರುತ್ತಾರೆ. ಕಾರಣ ಯುವಕರಲ್ಲಿ ಕ್ರೀಡಾ ಮಹತ್ವದ ಬಗ್ಗೆ ಅರಿವನ್ನು ಮೂಡಿಸುವ ಜೊತೆಗೆ ಅವರನ್ನು ಅಂತರರಾಷ್ಟ್ತ್ರೀಯ ಮಟ್ಟದ ಕ್ರೀಡಾಪಟುಗಳನ್ನಾಗಿ ರೂಪಿಸಿ ಜಿಲ್ಲೆಯ ಹಾಗೂ ರಾಷ್ಟ್ತ್ರದ ಕೀರ್ತಿ ಬೆಳೆಗಿಸಲು ತರಬೇತಿದಾರರು ಹಾಗೂ ಅಧಿಕಾರಿಗಳು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.

ಕ್ರೀಡಾಕೂಟಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೆಚ್ಚಿನ ಅನುದಾನವನ್ನು ಒದಗಿಸುತ್ತಿದ್ದು, ಕ್ರೀಡಾಕೂಟಗಳು ಶಿಸ್ತು ಬದ್ಧವಾಗಿ ಹಾಗೂ ಅಚ್ಚುಕಟ್ಟಾಗಿ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದ ಅವರು ಬೆಳಗಾವಿ ಜಿಲ್ಲೆಯಿಂದ ಹಾಕಿ ಕ್ರೀಡಾಕೂಟದಲ್ಲಿ ಅಂತರರಾಷ್ಟ್ತ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಕ್ರೀಡಾಪಟುಗಳನ್ನು ಸ್ಮರಿಸಿದ ಅವರು ವಿದ್ಯಾರ್ಥಿಗಳು ಸಹ ತಮ್ಮ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಕ್ರೀಡಾಕೂಟಗಳಲ್ಲಿ ಆಸಕ್ತಿಯಿಂದ ಭಾಗವಹಿಸಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ಕ್ರೀಡಾಧ್ವಜಾರೋಹಣ ನೆರವೇರಿಸಿದರು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಬೆಳಗಾವಿ ಉತ್ತರ ಶಾಸಕ ಫಿರೋಜ ಶೇಠ ಅವರು ವಿದ್ಯಾರ್ಥಿಗಳಿಗೆ ಕ್ರೀಡಾಕೂಟಗಳು ತಮ್ಮ ಭವಿಷ್ಯ ರೂಪಿಸಲು ಸುವರ್ಣ ಅವಕಾಶ ನೀಡಿದಂತಾಗಿರುತ್ತದೆ. ಅದರಲ್ಲಿಯೂ ಜಿಲ್ಲಾಮಟ್ಟ, ವಿಭಾಗಮಟ್ಟದಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿ ಅಂತರರಾಷ್ಟ್ತ್ರೀಯ ಮಟ್ಟದ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಉಪಮಹಾಪೌರ ಧನರಾಜ ಗವಳಿ, ಸಮಾಜ ಕಲ್ಯಾಣ ಅಧಿಕಾರಿ ಶ್ರೀಮತಿ. ಉಮಾ ಸಾಲಿಗೌಡರ, ಮಹಾನಗರಪಾಲಿಕೆ ಸದಸ್ಯ ಪಟವೇಗಾರ ಉಪಸ್ಥಿತರಿದ್ದರು. ಪ್ರಭಾರ ಯುವ ಜನಸೇವಾ ಹಾಗೂ ಕ್ರೀಡಾಧಿಕಾರಿಪ್ರಕಾಶ ಹರಗಾಪೂರಕರ ಸ್ವಾಗತಿಸಿದರು. ವ್ಯವಸ್ಥಾಪಕರಾದ ಆರ್.ಎಸ್. ಕಣಬರ್ಗಿ ಕಾರ್ಯಕ್ರಮ ನಿರ್ವಹಿಸಿದರು. ಎಂ.ಪಿ. ಮರನೂರ ವಂದಿಸಿದರು. ಕ್ರೀಡಾಪಟು ಕು. ಬಸವರಾಜ ಹಿರೇಮಠ ಪ್ರತಿಜ್ಞಾವಿಧಿ ಬೋಧಿಸಿದರು. ಕುಮಾರಿ. ಶ್ರೇಯಾ ದೇಶಪಾಂಡೆ, ಫರೀನ ಶೇಖ್, ಮೇಘನಾ ಸರ್ದೇಸಾಯಿ ಹಾಗೂ ಪೂನಮ್ ಕೋಳೆ ಕ್ರೀಡಾಜ್ಯೌತಿಯನ್ನು ಸಂಸದರಿಗೆ ಹಸ್ತಾಂತರಿಸಿದರು.

loading...