ಜಿಲ್ಲೆಯ ಸಮಸ್ಯೆಗಳ ನಿವಾರಣೆಗೆ ಪ್ರಯತ್ನ: ಪರುಳೇಕರ್

0
9

 

ಕಾರವಾರ: ಜಿಲ್ಲೆಯಲ್ಲಿ ಈ ಹಿಂದೆ ಸಮಾಜಸೇವೆಯ ಮೂಲಕ ಬಡವರಿಗೆ ಅನೇಕ ರೀತಿಯ ಸಹಾಯ ಮಾಡಿದ್ದಲ್ಲದೇ,ಇನ್ನು ಮುಂದೆ ಚುನಾವಣೆಯಲ್ಲಿ ಗೆದ್ದರೆ ಜಿಲ್ಲೆಯ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೆÃನೆ ಎಂದು ಕರ್ನಾಟಕ ರಾಷ್ಟç ಸಮಿತಿ ಬೆಂಬಲಿತ ಪಕ್ಷೆÃತರ ಅಭ್ಯರ್ಥಿ ಕುಂದಾಬಾಯಿ ಪರುಳೇಕರ ಹೇಳಿದರು.
ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ರಾಜ್ಯ ಮತ್ತು ಉತ್ತರ ಕನ್ನಡ ಜಿಲ್ಲೆಯ ಕಾನೂನು ಸೇವೆ ಪ್ರಾಧಿಕಾರದಲ್ಲಿ ೩೬ ವರ್ಷಗಳ ತನಕ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದೆÃನೆ. ನಿವೃತ್ತಿ ಬಳಿಕ ಪತಿ ಸದಾನಂದ ಭಂಡಾರಿ ಜೊತೆ ಸೇರಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು, ಬಡಬಗ್ಗರಿಗೆ, ದೀನದಲಿತರಿಗೆ, ಅಂಗವಿಕಲರಿಗೆ, ಹರಿಜನ, ಗಿರಿಜನರಿಗೆ , ವಿಶೇಷವಾಗಿ ಮಹಿಳೆಯರಿಗೆ ಉಚಿತ ಸೇವೆ ನೀಡುತ್ತಾ ಬಂದಿದ್ದೆÃನೆ. ಲಕ್ಷಾಂತರ ಜನರು ನನ್ನಿಂದ ಸೇವೆ ಪಡೆದಿದ್ದಾರೆ. ಬ್ರಷ್ಟಾಚಾರ ವಿರೋಧಿ ಹೋರಾಟನೂ ಮಾಡಿರುವುದರಿಂದ ಜಿಲ್ಲೆಯ ಜನ ನನ್ನನ್ನು ಮತ ನೀಡಿ ಆರಿಸುತ್ತಾರೆ ಎಂಬ ಭರವಸೆ ಇದೆ ಎಂದರು. ಬಳಿಕ ಅಭಿವೃದ್ಧಿ ಕುರಿತು ಮುನ್ನೊÃಟ ಹೊಂದಿದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಕಾರವಾರದಿಂದ ಹೈಚರ್ಚ್ ತನಕ, ಅಲ್ಲಿಂದ ಬಂದರಿನವರೆಗೆ ಸಾಗಿರುವ ಕೋಣೆನಾಲಾ ಕಾಲುವೆಯನ್ನು ಸ್ವಚ್ಚಗೊಳಿಸಿ ಸೇತುವೆ ನಿರ್ಮಾಣ ಮಾಡಲಾಗುವುದು. ವಾಹನ ಹಾಗೂ ಮನುಷ್ಯರ ಓಡಾಟಕ್ಕೆ ಪ್ರತ್ಯೆÃಕವಾಗಿ ರಸ್ತೆ ನಿರ್ಮಿಸಲಾಗುವುದು. ಕಾರವಾರ-ಅಂಕೋಲಾ ಕ್ಷೆÃತ್ರದ ಮಹಿಳೆಯರ ಸಮಸ್ಯೆ ಬಗೆಹರಿಸಲು ಕಾರವಾರ ಮತ್ತು ಅಂಕೋಲಾದಲ್ಲಿ ಮಹಿಳೆಯರ ಅನುಕೂಲಕ್ಕಾಗಿ ಸಭಾ ಭವನ ಕಟ್ಟಡ ನಿರ್ಮಾಣಕ್ಕಾಗಿ ಪ್ರಯತ್ನಿಸಲಾಗುವುದು. ಸಭಾ ಭವನ ಕಟ್ಟಡದಲ್ಲಿಯೇ ಮಹಿಳೆಯರ ಸಮಸ್ಯೆ ಬಗೆಹರಿಸಲು ಶ್ರಮಿಸಲಾಗುವುದು. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕೆಎಸ್‌ಆರ್‌ಸಿಟಿ ಬಸ್ ನಿಲ್ದಾಣಗಳಲ್ಲಿನ ಪುರುಷ ಮತ್ತು ಮಹಿಳೆಯರ ಶೌಚಾಲಯಗಳನ್ನು ಜನರಿಗೆ ಉಚಿತವಾಗಿ ಬಳಸಲು ಅನುವು ಮಾಡಿಕೊಡಲಾಗುವುದು. ಜಿಲ್ಲೆಯ ಪ್ರತಿ ಮನೆಯೂ ಕಡ್ಡಾಯವಾಗಿ ಶೌಚಾಲಯ ಹೊಂದಿ ಬಹಿರ್ದೆಸೆ ಮುಕ್ತ ಸ್ವಚ್ಚ ಜಿಲ್ಲೆಯನ್ನಾಗಿ ಮಾಡಲಾಗುವುದು. ಸರಕಾರಿ ಕಚೇರಿಗಳನ್ನು ಲಂಚ ಮುಕ್ತ ಕಚೇರಿಯನ್ನಾಗಿಸಲಾಗುವುದು. ಭೂ ರಹಿತ ನಿರಾಶ್ರಿತರಿಗೆ ಸರಕಾರಿ ಜಮೀನು ಮಂಜೂರಿ ಮಾಡಿ ಸಮಸ್ಯೆ ಬಗೆಹರಿಸಲಾಗುವುದು.

ಇದಲ್ಲದೇ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ತಾಲೂಕುಗಳಲ್ಲಿನ ಅರಬ್ಬಿ ಸಮುದ್ರ ತೀರದ ಭೂ ಕೊರೆತ ತಪ್ಪಿಸಲು ತಡೆಗೋಡೆ ನಿರ್ಮಿಸಲಾಗುವುದು. ಕಾರವಾರ ತಾಲೂಕಿನಲ್ಲಿ ವೃದ್ಧಾಶ್ರಮ ಮತ್ತು ಅನಾಥಾಶ್ರಮ ತೆರೆದು ವಯೋವೃದ್ಧರಿಗೆ ಆಶ್ರಯ ಕಲ್ಪಿಸಿಕೊಡಲಾಗುವುದು ಎಂದು ಅಭ್ಯರ್ಥಿ ಕುಂದಾಬಾಯಿ ಪರುಳೇಕರ ವಿವರಿಸಿದರು. ಈ ಸಂದರ್ಭದಲ್ಲಿ ಜ್ಯೊÃತಿ ಎಂ.ದೇವಾಡಿಗ, ಸಂತೋಷ ಮಡಿವಾಳ, ಕುಂದಾಬಾಯಿ ಪರುಳೇಕರ ಅವರ ಪತಿ ಸದಾನಂದ ಭಂಡಾರಿ ಉಪಸ್ಥಿತರಿದ್ದರು.

loading...