ಜಿಸ್ಯಾಟ್-17 ಉಪಗ್ರಹ ಯಶಸ್ವಿ ಉಡಾವಣೆ

0
31

ಬೆಂಗಳೂರು: ಅಂತರಿಕ್ಷ ಕ್ಷೇತ್ರದಲ್ಲಿ ಅನೇಕ ಹೊಸ ಸಾಧನೆಗಳಿಂದ ವಿಶ್ವಮನ್ನಣೆ ಗಳಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಮತ್ತೊಂದು ದಾಖಲೆಗೆ ಸಾಕ್ಷಿಯಾಯಿತು. ಜಿಸ್ಯಾಟ್-17 ಸಂಪರ್ಕ ಉಪಗ್ರಹ ಇಂದು ಬೆಳಗ್ಗೆ(ಭಾರತೀಯ ಕಾಲಮಾನ) 2.45ರಲ್ಲಿ ಫ್ರೆಂಚ್ ಗಯಾನಾದಿಂದ ನಭಕ್ಕೆ ಯಶಸ್ವಿಯಾಗಿ ಉಡಾವಣೆಯಾಗಿದೆ. ಇದರೊಂದಿಗೆ ಒಂದು ತಿಂಗಳಲ್ಲಿ ಇಸ್ರೋ ಮೂರು ಉಪಗ್ರಹಗಳನ್ನು ಉಡಾವನೆ ಮಾಡಿದ ಹೆಗ್ಗಳಿಕೆಗೆ ಇಸ್ರೋ ಪಾತ್ರವಾಗಿದೆ.
ಫ್ರೆಂಚ್ ಗಯಾನದ ಕೌರುವಿನ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ ಅಗಾಧ ಕಾರ್ಯಕ್ಷಮತೆಯ ಏರಿಯನ್-5 ಉಡಾವಣಾ ವಾಹಕದಿಂದ ಜಿಸ್ಯಾಟ್-17 ಉಪಗ್ರಹ ಅಂತರಿಕ್ಷಕ್ಕೆ ಯಶಸ್ವಿಯಾಗಿ ಚಿಮ್ಮಿಸಲಾಗಿದೆ ಎಂದು ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿ ಪ್ರಕಟಿಸಿದೆ. ವಿವಿಧ ಸಂಪರ್ಕ ಸೇವೆಗಳಿಗಾಗಿ ಜಿಸ್ಯಾಟ್-17 ಸಾಮಾನ್ಯ ಸಿ-ಬ್ಯಾಂಡ್, ವಿಸ್ತರಿತ ಸಿ-ಬ್ಯಾಂಡ್ ಮತ್ತು ಎಸ್-ಬ್ಯಾಂಡ್ ಉಪಕರಣಗಳ 3,477 ಕೆಜಿ ಪೇಲೋಡ್‍ಗಳನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದು ಕಕ್ಷೆಗೆ ಸೇರಿಸುವಲ್ಲಿ ಸಫಲವಾಗಿದೆ. ಅಲ್ಲದೇ ಹವಾಮಾನ ಮಾಹಿತಿ ಪ್ರಸಾರ ಉಪಕರಣ ಹಾಗೂ ಈ ಹಿಂದೆ ಇನ್ಸಾಟ್ ಉಪಗ್ರಹಗಳಿಂದ ಒದಗಿಸಲಾದ ಉಪಗ್ರಹ ಆಧಾರಿತ ಸಂಶೋಧನೆ ಮತ್ತು ರಕ್ಷಣೆ ಸೇವೆಗಳ ಮಾಹಿತಿಯನ್ನು ಜಿಸ್ಯಾಟ್ ಅಂತರಿಕ್ಷಕ್ಕೆ ಒಯ್ದಿದೆ.
ಹಾಸನದ ಇಸ್ರೋನ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ (ಎಂಸಿಎಫ್) ಉಪಗ್ರಹವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಮುಂದಿನ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟಿದೆ ಎಂದು ಇಸ್ರೋ ಹಿರಿಯ ವಿಜ್ಞಾನಿಗಳು ತಿಳಿಸಿದ್ದಾರೆ.

loading...