ಜೈನಮುನಿ ತರುಣ್​ ಸಾಗರ್​ ಮಹಾರಾಜ್​ ವಿಧಿವಶ

0
7

ನವದೆಹಲಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜೈನಮುನಿ ತರುಣ್​ ಸಾಗರ್​ ಮಹಾರಾಜ್​ ಇಂದು ನಸುಕಿನ ಜಾವ ವಿಧಿವಶರಾಗಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು.
ಕಳೆದ 20 ದಿನಗಳಿಂದ ತರುಣ್ ಸಾಗರ್​ ಮಹಾರಾಜ್​ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು, ಜಾಂಡೀಸ್ ನಿಂದ ಬಳಲುತ್ತಿದ್ದರು. ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ತರುಣ ಸಾಗರ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಅಷ್ಟಾಗಿ ಸ್ಪಂದಿಸದ ಹಿನ್ನಲೆಯಲ್ಲಿ ವೈದ್ಯರು, ಚಿಕಿತ್ಸೆ ನೀಡಿದರೂ ಏನೂ ಪ್ರಯೋಜನವಾಗುತ್ತಿಲ್ಲ ಎಂದು ಹೇಳಿದ್ದರು.

ಎರಡು ದಿನಗಳಿಂದ ಚಿಕಿತ್ಸೆ, ಔಷಧ ತೆಗೆದುಕೊಳ್ಳಲು ಕೂಡ ಮುನಿಗಳು ನಿರಾಕರಿಸಿದ್ದರು. ಅಲ್ಲದೇ ತಮ್ಮ ಹಿಂಬಾಲಕರ ಜತೆ ದೆಹಲಿಯ ಕೃಷ್ಣಾ ನಗರದಲ್ಲಿರುವ ರಾಧಪುರಿ ಜೈನ್ ಮಂದಿರಕ್ಕೆ ಕರೆದೊಯ್ಯುವಂತೆ ಒತ್ತಾಯಿಸಿದ್ದರು. ಅದರಂತೆ ಜೈನ ಮಂದಿರಕ್ಕೆ ಕರೆತರಲಾಗಿತ್ತು. ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ತರುಣ್ ಸಾಗರ್ ಮಹರಾಜ್ ಮಂದಿರದಲ್ಲೇ ವಿಧಿವಶರಾಗಿದ್ದಾರೆ. ಅವರ ಅಂತಿಮ ಕ್ರಿಯೆಗಳು ಉತ್ತರ ಪ್ರದೇಶದ ಮುರುದ್ ನಗರದ ತರುಣ್ ಸಾಗರಮ್ ನಲ್ಲಿ ನಡೆಸಲಾಗುತ್ತಿದೆ.

ಮಧ್ಯಪ್ರದೇಶದ ದಹೊಹ್ ಜಿಲ್ಲೆಯಲ್ಲಿ 1967ರ ಜೂನ್ 26ರಂದು ಜನಿಸಿದ್ದ ತರುಣ್ ಸಾಗರ್ ಅವರು ದಿಗಂಬರ ಜೈನ ಸನ್ಯಾಸಿಯಾಗಿದ್ದು, ಜೈನ ಸಮುದಾಯದ ಅಪಾರ ಅನುಯಾಯಿಗಳನ್ನು ಹೊಂದಿದ್ದರು.

loading...