ಜೈನಾಪೂರ ಕೆರೆಗೆ ನೀರು ತುಂಬಿಸದಿದ್ದರೆ ಪ್ರತಿಭಟನೆ ರೈತರ ಎಚ್ಚರಿಕೆ

0
26

ಕನ್ನಡಮ್ಮ ಸುದ್ದಿ
ಚಿಕ್ಕೋಡಿ 22: ತಾಲೂಕಿನ ಜೈನಾಪೂರ ಕೆರೆಗೆ ನೀರು ತುಂಬಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಭಾನುವಾರ ಕೆರೆ ಹತ್ತಿರ ಪ್ರತಿಭಟನೆ ನಡೆಸಿ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ನಿಪ್ಪಾಣಿ ಎಪಿಎಂಸಿ ನಿರ್ದೇಶಕ ರಾಯಗೌಡ ಕೆಳಗಿನಮನಿ ಮಾತನಾಡಿ, ನೀರಾವರಿ ಇಲಾಖೆಯವರು ಭಾನುವಾರ ಬೆಳಗಿನಿಂದಲೇ ನಿಮ್ಮ ಕೆರೆಗೆ ಈಗ ಇಷ್ಟರಲ್ಲಿಯೇ ನೀರು ಬರುತ್ತೆ ಎಂದು ಸುಳ್ಳು ಹೇಳುತ್ತ ನಮ್ಮೂರಿನ ಎಲ್ಲ ರೈತರನ್ನು ಕೆರೆಯ ಹತ್ತಿರವೇ ಕುಳಿತುಕೊಳ್ಳುವಂತೆ ಮಾಡಿದ್ದಾರೆ ಆದರೆ ಇಂದು ರಾತ್ರಿ 7-30 ಗಂಟೆಯಾದರೂ ನಮ್ಮೂರಿನ ಕೆರೆ ನೀರು ಬಂದಿಲ್ಲ. ನಮ್ಮೂರಿನ ಕೆರೆಗೆ ನೀರು ಬರುತ್ತದೆ ಎಂದು ಜಾತಕ ಪಕ್ಷಿಯಂತೆ ಕಾಯುತ್ತ ಬೆಳಗಿನ 8 ಗಂಟೆಯಿಂದ ಸಂಜೆ 7-30 ಗಂಎವರೆಗೂ ಕುಳಿತರೂ ನೀರು ಬಂದಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು ಸುಳ್ಳೂ ಹೇಳಿ ನಮ್ಮನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾರೆ. ನೀರಾವರಿ ಇಲಾಖೆ ಅಧಿಕಾರಿಗಳು ಯಾವುದಾದರೊಂದು ರಾಜಕೀಯ ಶಕ್ತಿಯ ಮಾತು ಕೇಳುತ್ತಿದ್ದಾರೆ. ಆದ್ದರಿಂದ ನಮ್ಮೂರಿನ ಕೆರೆಗೆ ನೀರು ಬಾರದಂತೆ ನೋಡಿಕೊಳ್ಳುತ್ತಿದ್ದಾರೆಂದು ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಸೋಮವಾರ ಸಂಜೆಯೊಳಗೆ ನಮ್ಮೂರಿನ ಕೆರೆಗೆ ನೀರು ಬಾರದಿದ್ದರೇ ಚಿಕ್ಕೋಡಿ-ಸಂಕೇಶ್ವರ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾಜಿ ತಾ.ಪಂ.ಸದಸ್ಯ ರಾವಸಾಹೇಬ ಘರಬುಡೆ, ಗ್ರಾ.ಪಂ.ಉಪಾಧ್ಯಕ್ಷ ಈರಗೌಡ ಕೆಳಗಿನಮನಿ, ಮಾರುತಿ ಘರಬುಡೆ, ಶಿವಗೌಡ ಕೆಳಗಿನಮನಿ, ಬಾಬು ಹರಳಿ, ಅಶೋಕ ನಿಂಗನೂರೆ, ಅಶೋಕ ಘರಬುಡೆ, ಸಂಜಯ ಕೆಳಗಿನಮನಿ, ಪರಗೌಡ ಕೆಳಗಿನಮನಿ ಮುಂತಾದವರು ಉಪಸ್ಥಿತರಿದ್ದರು.

..

loading...