ಜೈನ್ ವರದಿ ಅನುಷ್ಟಾನಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ

0
18
 

ಕನ್ನಡಮ್ಮ ಸುದ್ದಿ-ದಾಂಡೇಲಿ: ೨೦೦೭ ರಲ್ಲಿ ದಾಂಡೇಲಿ ಸಮಗ್ರ ಅಭಿವೃದ್ಧಿಗಾಗಿ ತಾವು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಐ.ಎ.ಎಸ್ ಅಧಿಕಾರಿ ಮಹೇಂದ್ರ ಜೈನ್‌ರ ನೇತೃತ್ವ ಸಮಿತಿಯನ್ನು ನೆಮಿಸಿ ಕಾಳಿನದಿಯ ನೀರಿಗೆ ಬದಲಾಗಿ ದಾಂಡೇಲಿ ನಗರದ ಸಮಗ್ರ ಅಭಿವೃದ್ಧಿಗಾಗಿ ಜೈನ ವರದಿಯನ್ನು ಅಧಿಕಾರಿಗಳಿಂದ ಪಡೆದುಕೊಂಡಿದ್ದಿರಿ ಆದರೆ ವರದಿ ಪಡೆದು ೧೨ ವರ್ಷ ಕಳೆದರು ಸಹ ಅನುಷ್ಟಾನವಾಗದೆ ಇರುವುದರಿಂದ ವರದಿಯಲ್ಲಿನ ಪ್ರಮುಖ ಶಿಫಾರಸ್ಸುಗಳನ್ನು ಅನುಷ್ಟಾನಗೊಳಿಸಲು ಕ್ರಮ ಕೈಗೊಳ್ಳಬೆಕೆಂದು ಜೈನ ವರದಿ ಅನುಷ್ಟಾನ ಸಮಿತಿಯ ಅಧ್ಯಕ್ಷ ರಾಜೇಶ ತಳೇಕರ ಹಾಗೂ ಕಾರ್ಯಾಧ್ಯಕ್ಷ ಚಂದ್ರಯ್ಯಾ ಅಂದಕಾರಿಮಠ ಅವರು ಇತ್ತಿÃಚಿಗೆ ಚುನಾವಣಾ ಪ್ರಚಾರಕ್ಕೆ ದಾಂಡೇಲಿಗೆ ಆಗಮಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ನೀಡಿದ್ದಾರೆ.
ವರದಿಯಲ್ಲಿ ದಾಂಡೇಲಿಯಲ್ಲಿ ಮುಚ್ಚಿದ ಕೈಗಾರಿಕೆಗಳನ್ನು ಪನಶ್ಚೆತನಗೊಳಿಸಬೇಕು, ನಿರುದ್ಯೊÃಗ ನಿವಾರಣೆಗಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು, ವಾಸವಿರುವವರಿಗೆ ಭೂ ಮಾಲಿಕತ್ವ ನೀಡಬೇಕು, ಪರಿಸರ ಸ್ನೆÃಹಿ ಪ್ರವಾಸೊಧ್ಯಮವನ್ನು ಬೆಳೆಸಬೇಕು, ಬಿ.ಪಿ.ಒ ಐಟಿ, ಬಿಟಿ ಗಳನ್ನು ಸ್ಥಾಪಿಸಬೇಕು, ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜಗಳನ್ನು ತೆರೆಯಬೇಕು, ಕೆ.ಪಿ.ಸಿ ದಾಂಡೇಲಿಯಲ್ಲಿಯೆ ಇರಬೇಕು ಮುಂತಾದವು ದಾಂಡೇಲಿ ನಗರದಲ್ಲಿನ ನಿರುದ್ಯೊÃಗ ಸಮಸ್ಯೆಗೆ ಪರಿಹಾರ ರೂಪವಾಗಿ ಶಿಫಾರಸ್ಸುಗಳಿದ್ದು ಇವುಗಳೆಲ್ಲವು ಅನುಷ್ಟಾನವಾದ ಮೇಲೆ ನೀರು ಬಿಡುವಂತೆ ಜೈನ ವರದಿಯಲ್ಲಿ ತಿಳಿಸಲಾಗಿತ್ತು ಆದರೆ ವರದಿ ನೀಡಿ ೧೨ ವರ್ಷಗಳು ಗತಿಸಿದರು ನಮ್ಮ ಕಾಳಿನದಿಯ ನೀರು ನಿತ್ಯ ನಿರಂತರ ಅನ್ಯರ ಪಾಲಾಯಿತು ಆದರೆ ಜೈನ ವರದಿಯಲ್ಲಿನ ಯಾವುದೊಂದು ಶಿಫಾರಸ್ಸು ಅನುಷ್ಟಾನವಾಗದಿರುವುದು ದಾಂಡೇಲಿಗರ ರ್ದುದೈವ ಅಭೀವೃದ್ಧಿಯ ನಿಲನಕ್ಷೆಯಾಗಿದ್ದ ಜೈನ್ ವರದಿ ಕೆಲವರಿಂದ ಅತ್ಯಂತ ವ್ಯವಸ್ಥಿತವಾಗಿ ಮೂಲೆ ಗುಂಪಾಗಿದ್ದು ವಿಷಾದನಿಯ.

ಜೈನ್ ವರದಿ ಅನುಷ್ಟಾನ ಮಾಡದೆ ೧೨ ವರ್ಷ ಕಳೆದ ಮೇಲೆ ನೀರಿನ ವ್ಯಾಮೊಹ ಕಡಿಮೆಯಾಗದೆ ಕಾಳಿ ಎತ ನಿರಾವರಿ ಯೋಜನೆಯ ಹೆಸರಿನಲ್ಲಿ ಮತ್ತೆ ಕಾಳಿನದಿಯ ನೀರು ಅನ್ಯರ ಪಾಲಾಗುವ ಹಂತದಲ್ಲಿದೆ ಆದ್ದರಿಂದ ಎಲ್ಲ ವಿಷಯಗಳನ್ನು ಮಾನ್ಯ ಮುಖ್ಯಮಂತ್ರಿಗಳಾದ ತಮ್ಮ ಗಮನಕ್ಕೆ ತರುತ್ತಿದ್ದೆÃವೆ ಆದ್ದರಿಂದ ಈ ಕೂಡಲೆ ಜೈನ್ ವರದಿ ಅನುಷ್ಟಾನಕ್ಕಾಗಿ ಕ್ರಮ ಕೈಗೊಳ್ಳಬೇಕೆಂದು ಅಧ್ಯಕ್ಷ ರಾಜೇಶ ತಳೇಕರ ಹಾಗೂ ಕಾರ್ಯಾದ್ಯಕ್ಷ ಚಂದ್ರಯ್ಯಾ ಅಂದಕಾರಿಮಠ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.

loading...