ಜೈನ್ ವರದಿ ಅನುಷ್ಟಾನ ಸಮಿತಿಯಿಂದ ಆಕ್ಷೆÃಪಣೆ ಸಲ್ಲಿಕೆ

0
35

 

ಕನ್ನಡಮ್ಮ ಸುದ್ದಿ-ದಾಂಡೇಲಿ: ಕಾಳಿ ನದಿಯಿಂದ ಹಳಿಯಾಳ ತಾಲೂಕಿನ ಕೆರೆ ಹಾಗೂ ಬಾಂದಾರುಗಳನ್ನು ತುಂಬಿಸುವ ಕಾಮಗಾರಿಯ ಮೊದಲನೇ ಹಂತದ ಪಂಪ್ ಹೌಸ್ ನಿರ್ಮಿಸಲು ದಾಂಡೇಲಿ ನಗರಸಭೆ ಮಾಲಿಕತ್ವದ ಸರ್ವೇ ನಂ ೩ಅ೧ ರಲ್ಲಿ ಕ್ಷೆÃತ್ರ ೧-೧೦-೦ (ಎ.ಗು.ಆ) ನೇದನ್ನು ಕಾರ್ಯನಿರ್ವಾಹಕ ಇಂಜಿನಿಯರರು ಕ.ನೀ.ನ.ನಿ.ನಿ ಕಳಸಾ ಯೋಜನಾ ವಿಭಾಗ ಖಾನಾಪುರ ಇವರಿಗೆ ಮಂಜೂರಿ ನೀಡಿರುವುದನ್ನು ವಿರೋಧಿಸಿ ದಾಂಡೇಲಿಯ ಜೈನ್ ವರದಿ ಅನುಷ್ಟಾನ ಸಮಿತಿಯು ದಾಂಡೇಲಿ ನಗರಸಭೆಯ ಪೌರಾಯುಕ್ತರಿಗೆ ಆಕ್ಷೆÃಪಣೆ ಸಲ್ಲಿಸಿದೆ.
ಪೌರಾಯುಕ್ತರಿಗೆ ಸಲ್ಲಿಸಲಾದ ಆಕ್ಷೆÃಪಣಾ ಪತ್ರದಲ್ಲಿ ೨೦೦೭ ನೇ ಸಾಲಿನಲ್ಲಿ ಹಳಿಯಾಳದ ಹುಲ್ಲಟ್ಟಿ ಗ್ರಾಮದ ಸಕ್ಕರೆ ಕಾರ್ಖಾನೆಗೆ ದಾಂಡೇಲಿಯಿಂದ ಕಾಳಿ ನದಿಯ ನೀರನ್ನು ಸಾಗಿಸುವ ಹುನ್ನಾರದ ವಿರುದ್ಧ ದಿ|| ಶ್ರಿÃ ಅಜಿತ ನಾಯಕರ ಮುಂದಾಳತ್ವದಲ್ಲಿ ದಾಂಡೇಲಿಯ ಸಮಸ್ತ ಜನತೆಯ ಸಹಭಾಗಿತ್ವದಲ್ಲಿ ನಡೆದ ದಾಂಡೇಲಿ ಬಚಾವೋ ಆಂದೋಲನ ಸಮಿತಿಯ ನೇತೃತ್ವದಲ್ಲಿ ಉಗ್ರ ಹಾಗೂ ಬೃಹತ್ ಪ್ರತಿಭಟನೆ ನಡೆದಿತ್ತು. ಸುಮಾರು ೫೦ ದಿನಗಳ ಕಾಲ ನಡೆದ ಧರಣಿ ಸತ್ಯಾಗ್ರಹದ ಪರಿಣಾಮ ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿಗಳ ಆದೇಶದಂತೆ ಆಗಿನ ಕರ್ನಾಟಕ ಸರಕಾರದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಐ.ಎ.ಎಸ್ ಅಧಿಕಾರಿ ಮಹೇಂದ್ರ ಜೈನ್‌ರ ನೇತೃತ್ವದಲ್ಲಿ ಆಯೋಗವನ್ನು ನೇಮಿಸಿ ದಾಂಡೇಲಿಯ ಸಮಗ್ರ ಅಭೀವೃದ್ಧಿಯ ದೃಷ್ಟಿಯಿಂದ ವರದಿ ನೀಡಲು ಕಳುಹಿಸಲಾಗಿತ್ತು. ಸದರಿ ಆಯೋಗವು ಒಂದು ವೇಳೆ ದಾಂಡೇಲಿಯ ಕಾಳಿ ನದಿಯ ನೀರನ್ನು ಹಳಿಯಾಳಕ್ಕೆ ಒಯ್ಯುವುದಾದರೇ ದಾಂಡೇಲಿಯಲ್ಲಿ ಮುಚ್ಚಿದ ಕೈಗಾರಿಕೆಗಳನ್ನು ಪುನಶ್ಛೆÃತನಗೊಳಿಸಬೇಕು, ಹೊಸ ಕೈಗಾರಿಕೆಗಳನ್ನು ತೆರೆಯಬೇಕು, ನಿರುದ್ಯೊÃಗ ನಿವಾರಣೆಗಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು, ವಾಸವಿರುವವರಿಗೆ ಭೂಮಾಲಿಕತ್ವ ನೀಡಬೇಕು, ಪರಿಸರ ಸ್ನೆÃಹಿ ಪ್ರವಾಸೋಧ್ಯಮವನ್ನು ಬೆಳೆಸಬೇಕು, ಐ.ಟಿ, ಬಿಟಿ, ಬಿ.ಪಿ.ಓ ಕೇಂದ್ರಗಳನ್ನು ತೆರೆಯಬೇಕು, ಮೆಡಿಕಲ್ ಇಂಜಿನಿಯರಿಂಗ್ ಕಾಲೇಜ್‌ಗಳನ್ನು ಆರಂಭಿಸಬೇಕು, ಕೆ.ಪಿ.ಸಿ ದಾಂಡೇಲಿಯಲ್ಲಿಯೇ ಇರಬೇಕು ಎಂಬಿತ್ಯಾದಿ ದಾಂಡೇಲಿಯ ಸಮಗ್ರ ಅಭಿವೃದ್ಧಿಗೆ ಪೂರಕವಾದ ಶಿಫಾರಸ್ಸುಗಳನ್ನು ನೀಡಿತ್ತು. ಆದರೆ ವರದಿ ಸರಕಾರಕ್ಕೆ ಸಲ್ಲಿಕೆಯಾಗಿ ೧೨ ವರ್ಷಗಳು ಗತಿಸಿದರೂ ಸದರಿ ವರದಿಯನ್ನು ಯಾವುದೇ ರೀತಿಯಲ್ಲೂ ಗಣನೆಗೆ ತೆಗೆದುಕೊಳ್ಳದೇ ಅನಾಯಾಸವಾಗಿ ನೀರು ಹರಿ ಬಿಟ್ಟರು. ದಾಂಡೇಲಿಯ ಜನತೆಯ ಮುಗ್ದತೆಯನ್ನು ದುರ್ಬಳಕೆ ಮಾಡಿಕೊಂಡು ವರದಿ ನೀಡಿ ಮುರ್ಖರನ್ನಾಗಿಸಿದ್ದು ವಿಷಾದನೀಯ. ಹಾಗಾಗಿ ೨೦೦೭ ರಲ್ಲಿ ಕರ್ನಾಟಕ ಸರಕಾರಕ್ಕೆ ಸಲ್ಲಿಕೆಯಾದ ಮಹೇಂದ್ರ ಜೈನ್ ವರದಿಯ ಎಲ್ಲ ಅಂಶಗಳು ಜಾರಿಯಾಗುವವರೆಗೂ ಕಾಳಿ ನದಿಯ ಒಂದು ಹನಿ ನೀರು ಕೂಡ ಪರರ ಪಾಲಾಗಲೂ ನಮ್ಮ ಆಕ್ಷೆÃಪಣೆ ಇದೆ ಎಂದು ತಕರಾರು ಅರ್ಜಿಯಲ್ಲಿ ತಿಳಿಸಲಾಗಿದೆ.

ಅಲ್ಲದೇ ದಾಂಡೇಲಿ ನಗರಸಭೆಯವರು ಮಂಜೂರಿ ಮಾಡಿರುವ ಸದರಿ ಯೋಜನೆಗೆ ಅರಣ್ಯ ಇಲಾಖೆಯಿಂದಾಗಲಿ ಅಥವಾ ಸಂಬಂದಿಸಿದ ಇಲಾಖೆಗಳಿಂದಾಗಲಿ ಯಾವುದೇ ಅನುಮತಿ ಪಡೆದಿರುವ ಮಾಹಿತಿ ಇಲ್ಲಾ. ಜೊತೆಗೆ ಯಾವ ರಸ್ತೆಯ ಪಕ್ಕದಲ್ಲಿ ಹೊಂಡ ತೆಗೆದು ಭಾರಿ ಗಾತ್ರದ ಪೈಪ್‌ಗಳನ್ನೆÃನು ಅಳವಡಿಸಲಾಗುತ್ತಿದಿಯೋ ಆ ರಸ್ತೆ ರಾಷ್ಟಿçÃಯ ಹೆದ್ದಾರಿಯ ಸಲುವಾಗಿ ಮೀಸಲಾಗಿರುವಂತಹುದು. ಮುಂದಿನ ದಿನಗಳಲ್ಲಿ ರಾಷ್ಟಿçÃಯ ಹೆದ್ದಾರಿ ಅನುಷ್ಟಾನವಾದರೇ ಈಗ ಮಾಡಿದ ಖರ್ಚು ವೆಚ್ಚಗಳೆಲ್ಲವು ನೀರು ಪಾಲಾಗಲಿದೆ. ಅಲ್ಲದೇ ಈಗಾಗಲೇ ನಗರಸಭೆಯವರು ನಿರ್ಣಯಿಸಿದಂತೆ ಹಳಿಯಾಳ ತಾಲೂಕಿನ ೫೦ ಕ್ಕೂ ಹೆಚ್ಚೂ ಕೆರೆ ಮತ್ತು ೨೦ ಕ್ಕೂ ಹೆಚ್ಚು ಬಾಂದಾರುಗಳಿಗೆ ನೀರು ಕಾಳಿ ನದಿಯಿಂದ ತುಂಬಿಸಿದಲ್ಲಿ ಅರಬಿ ಸಮುದ್ರಕ್ಕೆ ಸೇರುವ ಸಿಹಿ ನೀರಿನ ಪ್ರಮಾಣ ಕಡಿಮೆಯಾಗಲಿದೆ. ಇದರಿಂದ ಸಮುದ್ರದ ಲವಣಾಂಶ ಹೆಚ್ಚಾಗಿ ಉಪ್ಪು ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಲಿದೆ. ಇದರಿಂದ ಜಲಚರ ಪ್ರಾಣಿ-ಪಕ್ಷಿ-ಸಸ್ಯಗಳು ವಿನಾಶಕ್ಕೆ ಈಡಾಗಲಿವೆ.
ಅಲ್ಲದೇ ವನ್ಯ ಜೀವಿಗಳ ಸಹಿತ ಮಾನವನಿಗೂ ಕುಡಿಯುವ ನೀರು ಲಭ್ಯವಾಗದಿರುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದ್ದರಿಂದ ಈ ಮೇಲಿನ ವಿಷಯಕ್ಕೆ ಸಮಿತಿಯಿಂದ ಆಕ್ಷೆÃಪಣೆ ಸಲ್ಲಿಸಿದ್ದು, ಪೌರಾಯುಕ್ತರು ಈ ಎಲ್ಲ ವೈಜ್ಞಾನಿಕ ಆಕ್ಷೆÃಪಣೆಗಳನ್ನು ಪರಿಗಣಿಸಿ ಸಮಸ್ತ ದಾಂಡೇಲಿಯ ಜನತೆಯ ಅಪೇಕ್ಷೆಯಂತೆ ಸದರಿ ಯೋಜನೆಯ ಮಂಜೂರಾತಿಯನ್ನು ರದ್ದುಗೊಳಿಸಬೇಕಾಗಿ ಜೈನ್ ವರದಿ ಅನುಷ್ಟಾನ ಸಮಿತಿಯ ಅಧ್ಯಕ್ಷ ರಾಜೇಶ ತಳೇಕರ ಮತ್ತು ಕಾರ್ಯಾಧ್ಯಕ್ಷ ಚಂದ್ರಯ್ಯಾ ಅಂಧಾಕಾರಿಮಠ ವಿನಂತಿಸಿಕೊಂಡಿದ್ದಾರೆ.

loading...