ಜೋಡಿ ಹುಲಿಗಳ ಸಾವು;ಬಾಯಿ ಬಿಡದ ಅರಣ್ಯ ಇಲಾಖೆ

0
18

ಬೆಂಗಳೂರು: ರಾಜ್ಯದಲ್ಲೆÃ ಹೆಚ್ಚು ಹುಲಿ ಸಂತತಿ ಹೊಂದಿರುವ ಬಂಡೀಪÅರ ಅಭಯಾರಣ್ಯ ವ್ಯಾಪ್ತಿಯಲ್ಲಿ ಮೃತಪಟ್ಟ ಆ ಜೋಡಿ ಹುಲಿಗಳ ಸಾವು ಪ್ರಾಣಿ ಪ್ರಿಯರ ನೆನಪಿನಿಂದ ಇನ್ನೂ ಮಾಸಿಲ್ಲ.
ಕಳೆದ ಜ.೨೪ರಂದು ಗೋಪಾಲಸ್ವಾಮಿ ಬೆಟ್ಟ ವಲಯಕ್ಕೆ ಸೇರಿದ ಹಂಗಳ ವ್ಯಾಪ್ತಿಯ ಹಿರೀಕೆರೆ ಬಳಿ ೩ವರ್ಷದ ಗಂಡು ಹಾಗೂ ೨ವರ್ಷದ ಹೆಣ್ಣು ಹುಲಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಹುಲಿಗಳು ಮೃತಪಟ್ಟಿರುವ ೫೦ಮೀ.ದೂರದಲ್ಲಿ ಹೆಣ್ಣಾನೆಯ ಅರೆಕೊಳೆತ ಕಳೇಬರವೂ ಪತ್ತೆಯಾಗಿತ್ತು.
ಜೋಡಿಹುಲಿಗಳ ಸಾವು ಪ್ರಾಣಿಪ್ರಿಯರಲ್ಲಿ ಸಾಕಷ್ಟು ಆತಂಕ ಉಂಟುಮಾಡಿ ಇಲಾಖೆ ವಿರುದ್ಧ ಆಕ್ರೊÃಶ ವ್ಯಕ್ತಪಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗಾರ್ಡ್ ಒಬ್ಬರನ್ನು ಮಾತ್ರ ಅಮಾನತುಗೊಳಿಸಿ ಕೈ ತೊಳೆದುಕೊಂಡು ತನಿಖೆಯನ್ನು ಮುಂದುವರೆಸಿಲ್ಲ ಎಂಬುದು ಪರಿಸರ, ಪ್ರಾಣಿ ಪ್ರಿಯರ ಆರೋಪವಾಗಿದೆ.
ಬೆಂಗಳೂರು,ಮೈಸೂರು ಹಾಗೂ ಕೊಯಮತ್ತೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮೃತ ಹುಲಿಗಳ ಅಂಗಾಂಗದ ಸ್ಯಾಂಪಲ್‌ಗಳನ್ನು ಕಳುಹಿಸಲಾಗಿದೆ.
ಕೊಯಮತ್ತೂರಿನ ಪ್ರಯೋಗಾಲಯ ವಿಷ ಪ್ರಾಶನ ಎಂದರೆ,ಕರ್ನಾಟಕದ ಪ್ರಯೋಗಾಲಯಗಳು ಸಹಜ ಸಾವು ಎಂದು ವರದಿ ನೀಡಿವೆ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ವಿಭಿನ್ನ ವರದಿ, ಆಮೆಗತಿಯ ತನಿಖೆ ನಡುವೆ ಆ ಜೋಡಿಹುಲಿಗಳ ಸಾವು ಪ್ರಾಣಿಪ್ರಿಯರಲ್ಲಿ ಅಚ್ಚೊತ್ತಿದೆ.

loading...