ಜ.6 ರಂದು ಫೈಜಾನೆೆ ಮದೀನಾ ಸಮಾವೇಶ

0
44

ಕನ್ನಡಮ್ಮ ಸುದ್ದಿ-ದಾಂಡೇಲಿ: ನಗರದ ನೂರ್‌-ಎ-ಇಸ್ಲಾಂ ಧಾರ್ಮಿಕ ಹಾಗೂ ಶೈಕ್ಷಣಿಕ ಸಂಸ್ಥೆಯ ಆಶ್ರಯದಲ್ಲಿ ಎಂದಿನಂತೆ ಈ ವರ್ಷ ಜ.06 ರಂದು 12 ನೇ ವಾರ್ಷಿಕ ಜಿಲ್ಲಾ ಮಟ್ಟದ ಫೈಜಾನೆ ಮದೀನಾ ಸಮಾವೇಶವು ಸಂಸ್ಥೆಯ ಆವರಣದಲ್ಲಿ ಅದ್ದೂರಿಯಾಗಿ ಜರಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಇಕ್ಬಾಲ ಶೇಖರವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಈ ಕಾರ್ಯಕ್ರಮದ ಅಂಗವಾಗಿ ಜ.05 ರಂದು ಸಂಜೆ 3 ಗಂಟೆಗೆ ಬಾಂಬೇಚಾಳದ ದಿ. ಅಬ್ದುಲ್‌ ರಝಾಕ ಮುಲ್ಲಾರವರ ಮನೆಯಿಂದ ಸಂದಲ ಶರೀಪ ಮೆರವಣಿಗೆಯನ್ನು ಪ್ರಾರಂಭಿಸಿ ಸುಭಾಷನಗರದ ಮದರಾಸದವರೆಗೆ ಹಮ್ಮಿಕೊಳ್ಳಲಾಗಿದೆ. ಪ್ರವಾದಿ ಮೊಹಮ್ಮದ್‌ (ಸ.ಅ) ಗೇಸು ಪ್ರದರ್ಶಿಸುವ ಕಾರ್ಯಕ್ರಮವನ್ನು ಜ.06 ರಂದು ಮಧ್ಯಾಹ್ನ ಸಮಯ 3 ರಿಂದ ಸಂಜೆ 9 ಘಂಟೆಯವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಅಹಲೇ ಸುನ್ನತ್‌ ಪಂಗಡಕ್ಕೆ ಸೇರಿದ ಧರ್ಮಗುರುಗಳಾದ ಮೌಲಾನಾ ಸೈಯ್ಯದ ಕಮಾಲ ಅಶ್ರಪ್‌ ರಾಜಕೋಟ, ಹಾನಗಲ್ಲಿನ ಮುಫ್ತಿ ಮೊಹಮ್ಮದ ನೌಶಾದ ಅಹಮದ, ಬಳ್ಳಾರಿಯ ಮೌಲಾನಾ ಸೈಯದ ಅನ್ಸಾರ ಅಹ್ಮದ, ಹಾವೇರಿಯ ಅನೌನ್ಸರ್‌ ರಫೀಕ ಅಹಮ್ಮದ, ನಾಥಖಾ ಮೊಹಮ್ಮದ ಆದೀಲ ಶಾ ಮೊದಲಾದವರು ಭಾಗವಹಿಸಿ ಉರ್ದು ಮತ್ತು ಕನ್ನಡದಲ್ಲಿ ಧಾರ್ಮಿಕ ಪ್ರವಚನಗೈಯಲಿದ್ದಾರೆ.
ಈ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ, ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಘೋಟ್ನೆಕರ, ಪ್ರಶಾಂತ ದೇಶಪಾಂಡೆ, ಹಾಗೂ ಮುಸ್ಲಿಂ ಸಮಾಜದ ಮುಖಂಡರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಜನರಲ್ಲದೆ ಹಳಿಯಾಳ, ಜೊಯಿಡಾ ಹೀಗೆ ಉತ್ತರ ಕನ್ನಡ ಜಿಲ್ಲೆ, ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಹಾವೇರಿ, ದಾವಣಗೇರೆ ಹಾಗೂ ಗೋವಾ ರಾಜ್ಯದಂದಲೂ ಮುಸ್ಲಿಂ ಬಂಧುಗಳು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ದಾದಪೀರ ನದಿಮುಲ್ಲಾ, ನಿಸಾರ ಅಹಮ್ಮದ, ಅಬ್ದುಲ್‌ ಜಬ್ಬಾರ ಶೇಖ, ಸುಲೈಮಾನ ಶೇಖ, ಇನಾಯಿತ್‌ ದುಡ್ಕಿ, ಮುನೀರ ಖಾನಪುರಿ, ಯಾಸೀನ್‌ ಶೇಖ, ಇಬ್ರಾಹಿಂ ಪಠಾಣ್‌ ಮೊದಲಾದವರು ಉಪಸ್ಥಿತರಿದ್ದರು.

loading...