ಟಾಸ್‍ಗೆದ್ದ ನ್ಯೂಜಿಲೆಂಡ್‍: ಪಾಕ್‍ ವಿರುದ್ಧ ಬ್ಯಾಟಿಂಗ್ ಆಯ್ಕೆ

0
12

ಬರ್ಮಿಂಗ್‍ ಹ್ಯಾಮ್ಐಸಿಸಿ ಏಕದಿನ ವಿಶ್ವಕಪ್‍ ಟೂರ್ನಿಯಲ್ಲಿ ಇಂಗ್ಲೆಂಡ್‍ನ ಎಡ್ಗ್ ಬಾಸ್ಟನ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್, ಪಾಕಿಸ್ತಾನ ವಿರುದ್ಧ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಮೈದಾನ ತೇವದಿಂದ ಕೂಡಿದ ಕಾರಣ ಟಾಸ್ ಹಾಕುವುದು ಒಂದು ತಾಸು ವಿಳಂಬವಾಯಿತು. ಆದರೂ ಓವರ್‌ಗಳನ್ನು ಕಡಿಮೆ ಮಾಡಿಲ್ಲ. ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನ ಎರಡೂ ತಂಡಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. .
2019 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ, ಇದುವರೆಗೆ ಹಲವು ಏರಿಳಿತಗಳನ್ನು ಎದುರಿಸಿದೆ. ಶ್ರೀಲಂಕಾ ವಿರುದ್ಧದ ಒಂದು ಪಂದ್ಯ ಮಳೆಯ ಕಾರಣ ರದ್ದುಗೊಂಡಿತ್ತು. ಆರು ಪಂದ್ಯಗಳಿಂದ ಪಾಕಿಸ್ತಾನ ಐದು ಅಂಕಗಳನ್ನು ಗಳಿಸಲಷ್ಟೇ ಶಕ್ತವಾಗಿದೆ. ಸೆಮಿಫೈನಲ್ ಗೆ ಅರ್ಹತೆ ಪಡೆಯಲು ತಂಡಕ್ಕೆ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ.
ಇನ್ನು, ನ್ಯೂಜಿಲೆಂಡ್ 2019 ರ ವಿಶ್ವಕಪ್‌ನಲ್ಲಿ ಚಿನ್ನದ ಓಟವನ್ನು ಮುಂದುವರೆಸಿದೆ. ಆಸ್ಟ್ರೇಲಿಯಾ ನಂತರ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಎರಡನೇ ತಂಡವಾಗುವತ್ತ ನ್ಯೂಜಿಲೆಂಡ್‍ ದಾಪುಗಾಲು ಹಾಕುತ್ತಿದೆ. ಇಂದಿನ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧದ ಗೆಲುವು ನ್ಯೂಜಿಲೆಂಡ್‍ ತಂಡವನ್ನು ನಾಕೌಟ್‌ ಹಂತಕ್ಕೆ ತಲುಪಿಸಲಿದೆ.
ಆಟಗಾರರು-
ಪಾಕಿಸ್ತಾನ : ಇಮಾಮ್-ಉಲ್-ಹಕ್, ಫಖರ್ ಜಮಾನ್, ಬಾಬರ್ ಅಜಾಮ್, ಮೊಹಮದ್ ಹಫೀಜ್, ಹ್ಯಾರಿಸ್ ಸೊಹೈಲ್, ಸರ್ಫ್‍ರಾಜ್ ಅಹ್ಮದ್ (ವಿಕೆಟ್‍ ಕೀಪರ್ ಮತ್ತು ನಾಯಕ), ಇಮದ್ ವಾಸಿಮ್, ಶದಾಬ್ ಖಾನ್, ವಹಾಬ್ ರಿಯಾಜ್, ಮೊಹಮದ್ ಅಮೀರ್, ಶಹೀನ್‍ ಅಫ್ರಿದಿ.
ನ್ಯೂಜಿಲೆಂಡ್: ಮಾರ್ಟಿನ್ ಗುಪ್ಟಿಲ್, ಕೊಲಿನ್ ಮುನ್ರೊ, ಕೇನ್ ವಿಲಿಯಮ್‍ಸನ್‍ (ನಾಯಕ), ರಾಸ್ ಟೇಲರ್, ಟಾಮ್ ಲಥಾಮ್ (ವಿಕೆಟ್‍ ಕೀಪರ್), ಜೇಮ್ಸ್ ನೀಶಮ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮಿಶೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.

loading...