ಟಿಎಂಸಿ ಕಾರ್ಯಕರ್ತನ ಕೊಲೆ: ಬಂಗಾಳದ ರಾಜಕೀಯದಲ್ಲಿ ನಿಲ್ಲದ ರಕ್ತದ ಕೊಡಿ

0
8

ಕೋಲ್ಕತಾ:-ಲೋಕಸಭಾ ಚುನಾವಣೆಯ ನಂತರವೂ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವಣ ಹಿಂಸಾಚಾರ ಮುಂದುವರೆದಿದ್ದು ಪೂರ್ವ ಬರುದ್ವಾನ್ ಜಿಲ್ಲೆಯಲ್ಲಿ ಒಬ್ಬ ಟಿಎಂಸಿ ಕಾರ್ಯಕರ್ತ, ಜಯದೆಬ್ ರಾಯ್ ಅವರನ್ನು ದುಷ್ಕರ್ಮಿಗಳ ಗುಂಪು ಬಡಿದುಕೊಂದು ಹಾಕಿದ್ದರೆ ಇದೇ ಘಟನೆಯಲ್ಲಿ ಇತರೇ ಮೂವರು ಗಾಯಗೊಂಡಿದ್ದಾರೆ.

ರಾಯ್ ಅವರ ಸಾವಿಗೆ ಬಿಜೆಪಿಯೇ ನೇರ ಹೊಣೆ ಎಂದು ಆಡಳಿರೂಡ ಟಿಎಎಂ ಸಿ ಆರೋಪಿಸಿದ್ದರೆ ಇದಕ್ಕೆ ನಾವು ಹೊಣೆಯಲ್ಲ ಬದಲಾಗಿ ಟಿಎಂಸಿ ಹಿಂಸೆಯನ್ನು ಪ್ರಚೋದಿಸುತ್ತಿದೆ ಎಂದು ಬಿಜೆಪಿ ಪ್ರತಿಯಾಗಿ ಆರೋಪ ಮಾಡಿದೆ, ಒಟ್ಟಾರೆ ಬಂಗಾಳದ ರಾಜಕೀಯದಲ್ಲಿ ರಕ್ತದ ಕೋಡಿ ಹರಿಯುತ್ತಿದೆ.

ರಾಯ್ ಮತ್ತು ಇತರೆ ಮೂವರು ಪಕ್ಷದ ಕೆಲಸ ಮುಗಿಸಿ ಮನೆಗೆ ಬರುತ್ತಿರುವಾಗ ಹಲವು ಜನರ ಗುಂಪು ಹಲ್ಲೆ ಮಾಡಿ ರಾಯ್ ಅವರನ್ನು ಬಡಿದುಕೊಂದು ಹಾಕಿದೆ. ಇದೆ ಘಟನೆಯಲ್ಲಿ ಇತರೆ ಮೂವರು ಗಾಯಗೊಂಡಿದ್ದಾರೆ.

ಮತ್ತೊಂದು ಘಟನೆ 24 ಪರಗಣ ಜಿಲ್ಲೆಯಲ್ಲಿ ಕಳೆದ ರಾತ್ರಿ ಸಂಭವಿಸಿದ್ದು ಕಚ್ಚಾ ಬಾಂಬ್ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಇತರೆ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಬಿಜೆಪಿ- ಆರ್ ಎಸ್ ಎಸ್ ಕಾರ್ಯಕರ್ತರು ಸೋಮವಾರ ಹೌರಾದ ಅಮ್ಟಾ ಗ್ರಾಮದಲ್ಲಿ ಮರಕ್ಕೆ ನೇಣು ಹಾಕಿಕೊಂಡಿರುವುದು ಪತ್ತೆಯಾದ ನಂತರ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆಎಂದು ಪೊಲೀಸರು ಹೇಳಿದ್ದಾರೆ .

loading...