ಡಾ. ಅಂಬೇಡ್ಕರ ಜಯಂತಿ ಆಚರಣೆ

0
8

ಡಾ. ಅಂಬೇಡ್ಕರ ಜಯಂತಿ ಆಚರಣೆ

ಕನ್ನಡಮ್ಮ ಸುದ್ದಿ-ಬೆಳಗಾವಿ: ಡಾ. ಬಿ.ಆರ್. ಅಂಬೇಡ್ಕರ ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ. ಜ್ಞಾನವೇ ಶಕ್ತಿ ಎಂದು ನಂಬಿದ ಅವರ ಜ್ಞಾನ ಹಾಗೂ ಆದರ್ಶಗಳನ್ನು ಇಂದಿನ ಯುವ ಜನಾಂಗ ಅರಿತುಕೊಂಡು ಮುನ್ನಡೆಯಬೇಕೆಂದು ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಂಜಯ ಪೂಜಾರಿ ಹೇಳಿದರು.
ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ರವಿವಾರದಂದು ಭಾರತರತ್ನ, ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಅವರ ೧೨೮ ನೇ ಜಯಂತಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅಂಬೇಡ್ಕರರವರ ಭಾವಚಿತ್ರಕ್ಕೆ ಪುಷ್ಪಗೌರವಗಳನ್ನು ಸಲ್ಲಿಸಿ ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ ಅವರ ಸಾಮಾಜಿಕ ಆದರ್ಶಗಳಾದ ಸ್ವಾತಂತ್ರö್ಯ, ಸಮಾನತೆ, ಮಾನವೀಯತೆ ಮತ್ತು ಭ್ರಾತೃತ್ವದ ಭಾವನೆಗಳನ್ನು ನಾವೆಲ್ಲರೂ ನಮ್ಮ ಜೀವನದ ತತ್ವಗಳನ್ನಾಗಿ ಅಳವಡಿಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಪ್ರೊ. ಸದಾನಂದ ದೊಡಮನಿ, ಡಾ. ವಿಜಯ ಕುಲಕರ್ಣಿ, ಪ್ರೊ. ಕಿರಣ ಪೋತದಾರ, ಡಾ. ಅಶೋಕ ಹುಲಗಬಾಳಿ, ಡಾ. ಪ್ರಭಾಕರ ಮುತಾಲಿಕ ದೇಸಾಯಿ, ಪ್ರೊ. ವಸಂತ ಉಪಾಧ್ಯೆ, ದೈಹಿಕ ನಿರ್ದೇಶಕ ವಿಶಾಂತ ಧಮೋಣೆ, ಮಂಜುಶ್ರಿÃ ಹಾವಣ್ಣವರ, ಅಂಕಿತಾ ಕೊಣ್ಣೂರ, ಶಂಕರ ಹಿರೇಮಠ, ಗಿರೀಶ ಮಡ್ಡಿಮನಿ, ಬಸವರಾಜ ಕುಂಬಾರ ಸೇರಿದಂತೆ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೊ. ಸಾಗರರ ಬಿರ್ಜೆ ವಂದಿಸಿದರು.

loading...