ಡಾ.ಕೋರೆ ಜನ್ಮದಿನದ ನಿಮಿತ್ತ ಕ್ರೀಡಾಕೂಟ

0
19

ಕನ್ನಡಮ್ಮ ಸುದ್ದಿ

ಚಿಕ್ಕೋಡಿ 27: ಕ್ರೀಡೆಗಳು ನಮ್ಮ ಬದುಕಿನ ಜೀವನಾಡಿಗಳಾಗಿದ್ದು, ಮನುಷ್ಯನ ಸರ್ವಾಂಗಿಣ ಪ್ರಗತಿಗೆ ಕ್ರೀಡೆ ಅತ್ಯವಶ್ಯಕ ಎಂದು ಕಾಲೇಜಿನ ಪ್ರಾಚಾರ್ಯೆ ಎಂ. ಬಿ. ವಾಲಿ ಹೇಳಿದರು.
ತಾಲೂಕಿನ ಅಂಕಲಿ ಗ್ರಾಮದ ಕೆ.ಎಲ್.ಇ. ಸಂಸ್ಥೆಯ ಅಂಗ ಸಂಸ್ಥೆಯ ಕ್ರೀಡಾಂಗನದಲ್ಲಿ ಶುಕ್ರವಾರ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆಯವರ ಹುಟ್ಟು ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಉಪಪ್ರಾಚಾರ್ಯ ಕೆ.ಬಿ. ಶಿಂದೆ ಮಾತನಾಡಿ, ಆಟಗಳು ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಹಾಯಕಾರಿಯಾಗಲಿವೆ. ಅಲ್ಲದೆ ಪ್ರಾಮಾಣಿಕ ಗೆಲವು ಅತ್ಯಗತ್ಯವೆಂದರು. ಎ.ಎಸ್. ಶಿರಗಾಂವೆ ಮುಂತಾದವರು ಉಪಸ್ಥಿತರಿದ್ದರು. ದೈಹಿಕ ನಿರ್ದೇಶಕ ಶಿವಾನಂದ ಬುಲ್‍ಬುಲೆ ಸ್ವಾಗತಿಸಿದರು. ವಾಯ್.ಬಿ. ಮಾಚಕನೂರ ಪ್ರತಿಜ್ಞಾ ವಿಧಿ ಬೋಧಿಸಿದರು. ಎಸ್.ಜೆ. ಬಾಬರ ನಿರೂಪಿಸಿದರು. ಎಸ್. ಡಿ. ಮಾನೆ ವಂದಿಸಿದರು.

loading...