ಡಿಸಿ ಆದೇಶ ಧಿಕ್ಕರಿಸಿ, ಸ್ಥಾಯಿ ಸಮಿತಿ ಅಧ್ಯಕ್ಷರ ಅವಿರೋಧ ಆಯ್ಕೆ

0
20

ಕನ್ನಡಮ್ಮ ಸುದ್ದಿ- ಗಂಗಾವತಿ: ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಬಿಜೆಪಿ ಸದಸ್ಯ ಸಿದ್ದಾಪುರ ರಾಚಪ್ಪ ಶನಿವಾರ ಅವಿರೋಧವಾಗಿ ಆಯ್ಕೆಗೊಂಡರು.

ಚುನಾವಣಾ ಪ್ರಕ್ರಿಯೆಯನ್ನು ಪೌರಾಯುಕ್ತ ಖಾಜಾ ಮೊಹಿನುದ್ದೀನ ನಡೆಸಿಕೊಟ್ಟರು. ಸ್ಥಾಯಿ ಸಮಿತಿ ಸದಸ್ಯರಾದ ಮೋಸೀನ್ ಚಾವೂಸ್, ವಡ್ರಟ್ಟಿ ವೀರಭದ್ರಪ್ಪನಾಯಕ, ದ್ರಾಕ್ಷಾಯಿಣಿ ಕುರುಗೋಡು, ಶಾಕೀರಾ ಬೇಗಂ, ನಗರಸಭೆ ಅಧ್ಯಕ್ಷೆ ಸಣ್ಣ ಹುಲಿಗೆಮ್ಮ ದೇವಪ್ಪ ಕಾಮದೊಡ್ಡಿ ಇದ್ದರು.
ತಕರಾರು ಅರ್ಜಿ:ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ರಚನೆ ಮಾಡಿರುವದು ಕಾನೂನುಬಾಹಿರವಾಗಿದೆ ಎಂದು ನಗರಸಭೆ ಉಪಾಧ್ಯಕ್ಷ ಕಮ್ಲಿಬಾಬಾ ಜಿಲ್ಲಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಿ ಸಮಿತಿ ರದ್ದು ಮಾಡಬೇಕು ಎಂದು ಮನವಿ ಮಾಡಿದ್ದರು.

ಸಾಮಾನ್ಯ ಸಭೆಯ ನಡವಳಿಕೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಸ್ಥಾಯಿ ಸಮಿತಿ ರಚನೆ ವಿಷಯ ಅಮಾನತ್ತಿಲ್ಲಿಡಬೇಕು ಎಂದು ಆದೇಶಿಸಿದ್ದರು.

loading...