ಡಿ.7 ರಿಂದ ಇಂದ್ರಧನುಷ ಅಭಿಯಾನ

0
24

 

ಬೆಳಗಾವಿ, ಡಿ.4: ಹೆಚ್ಚಿನ ಅಪಾಯದಲ್ಲಿರುವ ಪ್ರದೇಶಗಳಾದ ಕೊಳಚೆ ಪ್ರದೇಶದ ನಿವಾಸಿಗಳು, ಅಲೇಮಾರಿ ಜನಾಂಗದ ವಸತಿ ಪ್ರದೇಶ, ಇಟ್ಟಂಗಿ ಭಟ್ಟಿಗಳ ಪ್ರದೇಶ, ಕಲ್ಲುಪುಡಿ, ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಟಾವು ಮಾಡುವ ತಂಡಗಳು ವಾಸಿಸುವ ಪ್ರದೇಶಗಳಿಗೆ ಅಧಿಕಾರಿಗಳು ಖುದ್ಧಾಗಿ ಭೇಟಿ ಕೊಟ್ಟು ಅವರಲ್ಲಿ ಲಸಿಕೆ ವಂಚಿತ 0-2 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣ ಸ್ತ್ರೀಯರನ್ನು ಪತ್ತೆ ಹಚ್ಚಿ ಸಮೀಪದ ಆರೋಗ್ಯ ಕೇಂದ್ರ/ಅಂಗನವಾಡಿ ಕೇಂದ್ರಗಳಲ್ಲಿ ಸ್ಥಾಪಿಸಿರುವ ಇಂದ್ರಧನುಷ ಲಸಿಕಾ ಕೇಂದ್ರಕ್ಕೆ ಕರೆ ತಂದು ಲಸಿಕೆಯನ್ನು ಹಾಕುವ ಕ್ರಮವನ್ನು ತೆಗೆದುಕೊಳ್ಳಬೆಕೆಂದು ಜಿಲ್ಲಾಧಿಕಾರಿ ಎನ್ ಜಯರಾಮ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಭವನದಲ್ಲಿ ನಡೆದ ಮೂರನೇ ಸುತ್ತಿನ ಇಂದ್ರಧನುಷ ಅಭಿಯಾನದ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡುತ್ತಾ ಎರಡನೇ ಸುತ್ತಿನ ಪ್ರಗತಿ ಪರಿಶೀಲನೆಯನ್ನು ಮಾಡಿ, ಮೂರನೇ ಸುತ್ತಿನಲ್ಲಿ ಅಧಿಕಾರಿಗಳಿಗೆ ಪ್ರತಿಶತ ಶೇ.100 ರಷ್ಟು ಕೆಲಸ ನಿರ್ವಹಿಸಲು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ|| ಅಪ್ಪಾಸಾಹೇಬ ನರಟ್ಟಿ ಅವರು ಮಾತನಾಡಿ ಈ ಅಭಿಯಾನದಲ್ಲಿ ಲಸಿಕೆ ಪಡೆಯ ಬಹುದಾದ 0-2 ವರ್ಷದೊಳಗಿನ ಮಕ್ಕಳ ಹಾಗೂ ಗರ್ಭಿಣ ಸ್ತ್ರೀಯರ ಸಮೀಕ್ಷೆಯನ್ನು ಮನೆ ಮನೆಗೆ ತೆರಳಿ ಕೈಕೊಳ್ಳಲಾಗಿದೆ. ಭಾರತ ಸರ್ಕಾರದ ನಿರ್ದೇಶನದಂತೆ ಲಸಿಕೆ ವಂಚಿತ 0-2 ವರ್ಷದೊಳಗಿನ ಮಕ್ಕಳಿಗೆ ಹಾಗೂ ಗರ್ಭಿಣ ಸ್ತ್ರಿಯರಿಗೆ ಲಸಿಕಾಕರಣ ಮಿಶನ್ ಇಂದ್ರಧನುಷ -2015ರ ಮೂರನೇ ಸುತ್ತಿನ ಅಭಿಯಾನವನ್ನು ಬೆಳಗಾವಿ ಜಿಲ್ಲೆಯಾದ್ಯಂತ ಇದೇ ಡಿಸೆಂಬರ್ 7 ರಿಂದ 15 ರವರೆಗೆ ಏರ್ಪಡಿಸಲಾಗಿದೆ. ಜಿಲ್ಲೆಯಲ್ಲಿ 8 ಮಾರಕ ರೋಗಗಳಿಗೆ ಲಸಿಕೆ ವಂಚಿತ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮವೇ “ಮಿಶನ್ ಇಂದ್ರಧನುಷ” ಕ್ರಿಯಾಯೋಜನೆ ಪ್ರಕಾರ ಜಿಲ್ಲೆಯಲ್ಲಿ. ಸಮೀಕ್ಷೆ ಕೈಕೊಂಡ 0-2 ವರ್ಷದೊಳಗಿನ ಮಕ್ಕಳ ಸಂಖ್ಯೆ 143892, 0-2 ವರ್ಷದೊಳಗಿನ ಲಸಿಕೆ ಪಡೆಯಬೇಕಾದ ಮಕ್ಕಳ ಸಂಖ್ಯೆ 11209 ಇದೆ. ಈ ಅಭಿಯಾನಕ್ಕಾಗಿ ಒಟ್ಟು 619 ಇಂದ್ರಧನುಷ ಲಸಿಕಾ ಕೇಂದ್ರಗಳು ಇದ್ದು, 325 ಇಂದ್ರಧನುಷ ಮೊಬೈಲ ತಂಡಗಳು ಕಾರ್ಯ ನಿರ್ವಹಿಸಲಿವೆಂದು ತಿಳಿಸಿದರು.
ಈ ಸಭೆಯಲ್ಲಿ ಆರೋಗ್ಯ ಇಲಾಖೆ ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ತಾಲೂಕಾ ಆರೋಗ್ಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here