ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಲಹೆಗಾರರಾಗಿ ಗಂಗೂಲಿ ನೇಮಕ

0
6

ನವದೆಹಲಿ:- ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್‌) ಆವೃತ್ತಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಲಹೆಗಾರರಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಸಲಹೆಗಾರರಾಗಿ ನೇಮಕವಾಗಿದ್ದಾರೆ.
ತಂಡದ ಮುಖ್ಯ ತರಬೇತುದಾರ ರಿಕಿ ಪಾಂಟಿಂಗ್ ಜತೆ ಗಂಗೂಲಿ ಕಾರ್ಯ ನಿರ್ವಹಿಸಲಿದ್ದಾರೆ. “ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜತೆ ಸಲಹೆಗಾರರಾಗಿ ಸೇವೆ ಸಲ್ಲಿಸಲು ಉತ್ಸುಕನಾಗಿದ್ದು, ತಂಡದ ಆಟಗಾರರರು ಹಾಗೂ ಸಿಬ್ಬಂದಿ ಜತೆ ಹೊಂದಾಣಿಕೆಯಿಂದ ಸೇವೆ ಸಲ್ಲಿಸುತ್ತೇನೆ ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.
“ ಜಾಗತಿಕ ಕ್ರಿಕೆಟ್‌ನಲ್ಲಿ ಸೌರವ್ ಗಂಗೂಲಿ ಒಬ್ಬ ಬುದ್ಧಿವಂತ ಮನಸಿನ ವ್ಯಕ್ತಿ. ಗಂಗೂಲಿಯವರ ಆಂಕ್ರಮಣಶೀಲತೆ, ಸಕಾರಾತ್ಮಕತೆ, ಸೋಲು ಒಪ್ಪಿಕೊಳ್ಳದ ಮನಸ್ಥಿತಿ ಭಾರತದ ಕ್ರಿಕೆಟ್‌ನಲ್ಲಿ ಇಂದಿಗೂ ಅಜರಾಮರವಾಗಿದೆ. ಅವರ ಈ ಎಲ್ಲ ಅಂಶಗಳನ್ನು ಡೆಲ್ಲಿ ಕ್ಯಾಪಿಟಲ್ ತಂಡಕ್ಕೆ ಅಳವಡಿಸಿಕೊಳ್ಳುವ ಹಾದಿಯಲ್ಲಿ ಗಂಗೂಲಿ ಪಾತ್ರ ಬಹುಮುಖ್ಯ.
” ಸೌರವ್ ಗಂಗೂಲಿ ನೇಮಕದೊಂದಿಗೆ ಅವರ ಅನುಭವ, ಮಾರ್ಗದರ್ಶನ ಹಾಗೂ ಸಲಹೆಗಳು ತಂಡಕ್ಕೆ ಉಪಯುಕ್ತ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಗಂಗೂಲಿ ನಮ್ಮ ಕುಟುಂಬದ ಸದಸ್ಯನಿದ್ದಂತೆ. ಅವರ ಸಲಹೆಗಳಿಗೆ ಇಂದಿಗೂ ನಾನು ವಿನೀತ” ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯಸ್ಥ ಪಾರ್ಥ ಜಿಂದಾಲ್ ತಿಳಿಸಿದ್ದಾರೆ.

loading...