ತಂಡಕ್ಕೆ ಆಸರೆ ಜೊತೆ ದಾಖಲೆ ಬರೆದ ವಿರಾಟ್

0
92

ಬರ್ಮಿಂಗ್ಹಾö್ಯಮ್: ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆಡುತ್ತಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಪಾಠ್ ಆಂಗ್ಲರಿಗೆ ಮಾಡಿದ್ದು ಜೊತೆಗೆ ತಂಡಕ್ಕೂ ಆಸೆರೆಯಾದರು. ವಿರಾಟ್ ಬೌನ್ಸಿ ಟ್ರ‍್ಯಾಕ್ ನಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದಾರೆ ಎಂಬ ಟೀಕೆಗೆ ಬ್ಯಾಟ್ ನಿಂದಲೇ ಉತ್ತರ ನೀಡಿದ್ದಾರೆ.
ನೈಜ ಆಟ ಆಡಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕ್ಲಾಸ್ ಬ್ಯಾಟಿಂಗ್ ನಡೆಸಿದ್ರು. ಇಂಗ್ಲೆಂಡ್ ತಂಡದ ಆಟಗಾರರು ಬಿಟ್ಟ ಕ್ಯಾಚ್ ಗಳ ಸಂಪೂರ್ಣ ಲಾಭ ಪಡೆದು ಬ್ಯಾಟ್ ಮಾಡಿದ ವಿರಾಟ್, ಟೆಸ್ಟ್ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸಾವಿರ ರನ್ ಗಡಿ ದಾಟಿದ್ರು. ಮೊದಲ ಇನ್ನಿಂಗ್ಸ್ ವಿರಾಟ್ ೨೩ ರನ್ ಬಾರಿಸುತ್ತಿದ್ದಂತೆ ಈ ಗೌರವಕ್ಕೆ ಪಾತ್ರರಾದ್ರು.
ಬಳಿಕ ವಿರಾಟ್ ಎಡ್ಜ್ ಬಾಸ್ಟನ್ ಅಂಗಳದಲ್ಲಿ ಇಂಗ್ಲೆಂಡ್ ಬೌಲರ್ ಗಳ ಮೈ ಚಳಿ ಬಿಡಿಸಿದ್ರು. ಆನ್ ಸೈಡ್ ಹಾಗೂ ಆಫ್ ಸೈಡ್ ನಲ್ಲಿ ರನ್ ಕಲೆ ಹಾಕುತ್ತಾ ಸಾಗಿದ ಕೊ,ಹ್ಲಿ ನ್ಯೂನ್ಯತೆಗಳನ್ನು ಮೆಟ್ಟು ನಿಂತು ಬ್ಯಾಟ್ ಮಾಡಿದ್ರು. ಒಂದು ಕಡೆ ಪಟ ಪಟನೇ ವಿಕೆಟ್ ಗಳು ಬೀಳ್ತಾ ಇದ್ರೂ ಧೃತಿಗೆಡದೇ ಬ್ಯಾಟ್ ಮಾಡಿದ ವಿರಾಟ್, ರೂಟ್ ಪ್ಲಾನ್ ಉಲ್ಟಾ ಮಾಡಿದ್ರು.
ಡ್ಯಾಶಿಂಗ್ ಬ್ಯಾಟ್ಸ್ ಮನ್ ಆಟಕ್ಕೆ ಆಂಗ್ಲರ ಹುಡುಗರು ಥಂಡಾ ಹೊಡೆದ್ರು. ವಿರಾಟ್ ಕೊಹ್ಲಿ ೨೦೧೪ ರಲ್ಲಿ ಒಂದು ಸರಣಿಯಲ್ಲಿ ದಾಖಲಿಸಿದ ಒಟ್ಟು ರನ್ ಗಳನ್ನು, ಈ ಬಾರಿ ಒಂದೇ ಇನ್ನಿಂಗ್ಸ್ ನಲ್ಲಿ ದಾಖಲಿಸಿ ಸಾಧನೆ ಮಾಡಿದ್ರು. ಈ ಮೂಲಕ ಇಂಗ್ಲೆಂಡ್ ನೆಲದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ರು. ಆಂಗ್ಲರ ನಾಡಿನಲ್ಲಿ ಶತಕ ಬಾರಿಸಿದ ಭಾರತದ ೫ನೇ ನಾಯಕ ಎಂಬ ಹಿರಿಮೆ ವಿರಾಟ್ ಅವರದ್ದಾಯಿತು.
ವಿರಾಟ್ ಕೊಹ್ಲಿ ಸೊಗಸಾದ ಇನ್ನಿಂಗ್ಸ್ ನಲ್ಲಿ ೨೨೫ ಎಸೆತಗಳಲ್ಲಿ ೧೪೯ ರನ್ ಬಾರಿಸಿದ್ರು. ಇವರ ಮನಮೋಹಕ ಆಟದಲ್ಲಿ ೨೨ ಬೌಂಡರಿ ಹಾಗೂ ೧ ಸಿಕ್ಸರ್ ಸೇರಿವೆ.

loading...