ಬ್ರಸೆಲ್ಸ್: ವಾಟ್ಸ್ ಆಪ್ ನಲ್ಲಿ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಯುರೋಪಿಯನ್ ಯೂನಿಯನ್ ಫೇಸ್ ಬುಕ್ ಗೆ ದಂಡ ವಿಧಿಸಿದೆ.
2014 ರಲ್ಲಿ ವಾಟ್ಸ್ ಆಪ್ ಖರೀದಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿರುವುದಕ್ಕಾಗಿ ಫೇಸ್ ಬುಕ್ ಗೆ ಯುರೋಪಿಯನ್ ಯೂನಿಯನ್ 110 ಮಿಲಿಯನ್ ಯುರೋಗಳಷ್ಟು ($122 ಮಿಲಿಯನ್) ನಷ್ಟು ದಂಡ ವಿಧಿಸಿದೆ. ಇಂದಿನ ತೀರ್ಪು ಎಲ್ಲಾ ಸಂಸ್ಥೆಗಳೂ ಇಯು ವಿಲೀನ ನಿಯಮಗಳನ್ನು ಪಾಲಿಸಬೇಕೆಂಬ ಸಂದೇಶವನ್ನು ರವಾನೆ ಮಾಡಿದೆ ಎಂದು ಇಯು ಅಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಅಕ್ರಮ ಡಾಟಾ ಸಂಗ್ರಹಣೆ ಮಾಡಿದ್ದಕ್ಕಾಗಿ ಫ್ರೆಂಚ್ ಅಧಿಕಾರಿಗಳು ಫೇಸ್ ಬುಕ್ ಗೆ 150,000 ಯುರೋಗಳಷ್ಟು ದಂಡ ವಿಧಿಸಿದ್ದರು. ಡಾಟಾ ಸಂಗ್ರಹಣೆ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡಲಾಗಿದೆಯೇ ಇಲ್ಲವೇ ಎಂಬ ಬಗ್ಗೆ ಎರಡು ವರ್ಷ ವಿಚಾರಣೆ ನಡೆದ ಬಳಿಕ ಫ್ರೆಂಚ್ ಅಧಿಕಾರಿಗಳು ದಂಡ ವಿಧಿಸಿದ್ದರು.
loading...