ತಾತ್ಕಾಲಿಕ ಸಂಪನ್ಮೂಲ ಶಿಕ್ಷಕರ ನೇಮಕಕ್ಕೆ ಅರ್ಜಿ ಅಹ್ವಾನ

0
18

ಕನ್ನಡಮ್ಮ ಸುದ್ದಿ

ಚಿಕ್ಕೋಡಿ 27: 2018-19 ನೇ ಸಾಲಿಗೆ ಸಮನ್ವಯ ಶಿಕ್ಷಣದ ಕಾರ್ಯತಂತ್ರದಡಿಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಖಾಲಿ ಇರುವ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರನ್ನು ತಾತ್ಕಾಲಿಕವಾಗಿ ಮುಚ್ಚಳಿಕೆ ಪತ್ರವನ್ನು ಬರೆಯಿಸಿಕೊಂಡು, ನೇರ ಗುತ್ತಿಗೆ ಮೂಲಕ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 8 ವಲಯಗಳಲ್ಲಿ ಸಧ್ಯ ಪ್ರಾಥಮಿಕ ವಿಭಾಗದಲ್ಲಿ 15 ಪ್ರೌಢ 11 ಒಟ್ಟು 26 ಹುದ್ದೆಗಳು ಖಾಲಿ ಇದ್ದು, ನಿಗಧಿಪಡಿಸಿದ ವಿದ್ಯಾರ್ಹತೆಯಾದ ವಿಶೇಷ ಬಿಇಡಿ ಮತ್ತು ಡಿಇಡಿ ಮತ್ತು ಸಮನಾಂತರ ವಿದ್ಯಾರ್ಹತೆ ಹೊಂದಿದ, ವಿಕಲಚೇತನ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಅಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ವಿಶೇಡಿಇಡಿ ತರಬೇತಿಯನ್ನು ಹೊಂದಿದ್ದಲ್ಲಿ ಅರ್ಹ ಅಭ್ಯರ್ಥಿಗಳು ಈ ಕಛೇರಿಯನ್ನು ಸಂಪರ್ಕಿಸಿ ಅರ್ಜಿ ನಮೂನೆಯನ್ನು ಪಡೆದುಕೊಂಡು ದಿನಾಂಕ 02-08-2018 ರಂದು ಸಂಜೆ 5.00 ಗಂಟೆಯೊಳಗಾಗಿ ಅಂಚೆ ಮುಖಾಂತರ ಅಥವಾ ಖುದ್ದಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಸಮಗ್ರ ಶಿಕ್ಷಣ ಅಭಿಯಾನ ಚಿಕ್ಕೋಡಿ (08338-272769) ಸಂಪರ್ಕಿಸಬಹುದು ಎಂದು ಡಿಡಿಪಿಐ ಎಂ ಜಿ ದಾಸರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...