ತಾಲೂಕು ಆಡಳಿತದ ವಿರುದ್ಧ ಸಾರ್ವಜನಿಕರ ಆಕ್ರೊÃಶ

0
22

ಕನ್ನಡಮ್ಮ ಸುದ್ದಿ-ಕುಮಟಾ: ಕುಮಟಾದಲ್ಲಿ ಉದ್ದೆÃಶಿಸಲಾದ ಬೈಪಾಸ್‌ಗೆ ಸಂಬಂಧಿಸಿದ ಸರ್ವೆ ಕಾರ್ಯವನ್ನು ವಿರೋಧಿಸುವುದಲ್ಲದೇ ತಾಲೂಕು ಆಡಳಿತದ ವಿರುದ್ಧ ಆಕ್ರೊÃಶ ವ್ಯಕ್ತಪಡಿಸಿದ ಸಾರ್ವಜನಿಕರು ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಶಾಸಕ ದಿನಕರ ಶೆಟ್ಟಿ ಹಾಗೂ ಉಪವಿಭಾಗಾಧಿಕಾರಿ ಕೆ ಲಕ್ಷಿö್ಮÃಪ್ರಿÃಯಾ ಅವರಿಗೆ ಮನವಿ ಸಲ್ಲಿಸಿದರು.
ಬೈಪಾಸ್ ಕಾಮಗಾರಿಗೆ ನೀಲಿ ನಕ್ಷೆಯನ್ನು ರೂಪಿಸಲು ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳು, ಐಆರ್‌ಬಿ ಮತ್ತು ತಾಲೂಕು ಆಡಳಿತದ ಅಧಿಕಾರಿಗಳು ಪೊಲೀಸ್ ಬಲದೊಂದಿಗೆ ಕಲಭಾಗ, ಹೊಸಹೆರವಟ್ಟಾ, ಮಾನೀರ ಭಾಗದಲ್ಲಿ ಸರ್ವೆಗೆ ಮುಂದಾಗಿದ್ದರು. ಇದನ್ನು ಗಮನಿಸಿದ ಸ್ಥಳೀಯರು ವಿರೋಧ ವ್ಯಕ್ತಪಡಿಸಿದಕ್ಕೆ ಪೊಲೀಸರು ತಡೆದು, ಎಚ್ಚರಿಕೆ ನೀಡಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಜನರ ನಡುವೆ ವಾಗ್ವಾದ ನಡೆಯಿತು. ಇದರಿಂದ ಆಕ್ರೊÃಶಗೊಂಡ ಆ ಭಾಗದ ಜನರು ತಮ್ಮ ಮನೆ ಮಠವನ್ನು ಉಳಿಸಿಕೊಳ್ಳಲು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರಾದ ನಾಗೇಶ ನಾಯ್ಕ ಕಲಭಾಗ, ಗಣೇಶ ಭಟ್ ಬಗ್ಗೊÃಣ, ರಾಜೇಶ ಭಂಡಾರಿ, ರಾಧಾ ಹರಿಕಂತ್ರ, ಸಂದ್ಯಾ ಶೆಟ್ಟಿ, ಸದಾನಂದ ಪಟಗಾರ, ರಮೇಶ ಹರಿಕಂತ್ರ, ಸುಜೀತ್ ಡಿಸೋಜಾ, ಮೇರಿ ಫರ್ನಾಂಡೀಸ್, ಸುಧಾ ಕರ್ಕಿಕರ್, ಚಂದ್ರಕಲಾ ಭಂಡಾರಿ, ಕಲಭಾಗ, ಬಗ್ಗೊÃಣ, ಹಂದಿಗೋಣದ ಗ್ರಾಮಸ್ಥರಿದ್ದರು.

loading...