ತೇರದಾಳ ಪುರಸಭೆ: ಶಾಂತಿಯುತ ಮತದಾನ

0
26

ಕನ್ನಡಮ್ಮ ಸುದ್ದಿ-ತೇರದಾಳ: ತೇರದಾಳ ಪುರಸಭೆ ವ್ಯಾಪ್ತಿಯ 23 ವಾರ್ಡಗಳ ಪೈಕಿ ವಾರ್ಡ ಸಂಖ್ಯೆ. 20ಕ್ಕೆ ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ 22ವಾರ್ಡಗಳಿಗೆ ಚುನಾವಣೆ ಜರುಗಿತು. 58 ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ಮತದಾರರಲ್ಲಿ ವಿನಂತಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿತ್ತು.
ಪಟ್ಟಣದಲ್ಲಿ ಶುಕ್ರವಾರ ಮುಂಜಾನೆ ಮತದಾನ ಪ್ರಾರಂಭವಾಗುತ್ತಿದ್ದಂತೆ ಮತದಾರರು ಬಹಳಷ್ಟು ಹುರುಪಿನಿಂದ ಮತಚಲಾಯಿಸಲು ಬರುತ್ತಿರುವುದು ಕಂಡು ಬಂದಿತು. ಇದರ ಹಿನ್ನೆಲೆಯಲ್ಲಿ ಮಧ್ಯಾಹ್ನದ ಹೊತ್ತಿಗೆ ಅಂದಾಜು ಶೇ.50 ರಷ್ಟು ಮತದಾನವಾಗಿತ್ತು. ಪುರಸಭೆ ವ್ಯಾಪ್ತಿಯ ಬಹುತೇಕ ವಾರ್ಡಗಳಲ್ಲಿ ಶಾಂತಿಯುತ ಮತದಾನ ನಡೆಯಿತು. ಯುವಕರು, ಮಹಿಳೆಯರು ಸರದಿಯಲ್ಲಿ ನಿಂತು ಮತಚಲಾವಣೆ ಮಾಡುವುದು ಸಾಮಾನ್ಯವಾಗಿದ್ದು. ಹಿರಿಯ ವಯಸ್ಸಿನವರು ಕೂಡ ಮತ ಚಲಾಯಿಸಿದರು. ಅವರಿಗೆ ಸಹವರ್ತಿಗಳು ಸಹಾಯ ಮಾಡುವದರ ಮೂಲಕ ಮತಚಲಾವಣೆಯಲ್ಲಿ ತೊಡಗಿದ್ದು ಕಂಡುಬಂದಿತು. ಪ್ರತಿ ಮತಗಟ್ಟೆಯ ಮುಂದೆ ಆಯಾ ಅಭ್ಯರ್ಥಿಗಳು ಕೈಮುಗಿದು ಮತಯಾಚನೆ ಮಾಡುವುದು ಸಾಮಾನ್ಯವಾಗಿತ್ತು. ಆಯಾ ಪಕ್ಷದ ಮುಖಂಡರು ಮತಗಟ್ಟೆಗಳಿಗೆ ಭೇಟ್ಟಿ ನೀಡಿ, ಶಾಂತಿಯುತ ವಾತಾವರಣದ ಬಗೆಗೆ ವಿಚಾರಿಸಿದರು.
ಅಧಿಕಾರಿಗಳ ಭೇಟಿ: ಮತದಾನದ ದಿನ ಮತಕ್ಷೇತ್ರದ ಕೇಂದ್ರಸ್ಥಾನ ತೇರದಾಳ ಪಟ್ಟಣಕ್ಕೆ ಚುನಾವಣಾ ವೀಕ್ಷಕ ಮಾದರ, ರಬಕವಿ-ಬನಹಟ್ಟಿ ತಾಲೂಕು ತಹಶೀಲ್ದಾರ ಪ್ರವೀಣ ಜೈನ, ಜಮಖಂಡಿ ತಹಶೀಲ್ದಾರ ಪ್ರಶಾಂತ ಚನಗೊಂಡ, ಉಪತಹಶೀಲ್ದಾರ ಶ್ರೀಕಾಂತ ಮಾಯನ್ನವರ, ಗ್ರಾಮಲೆಕ್ಕಾಧಿಕಾರಿ ಪಿ.ಆರ್‌.ಮಠಪತಿ ಸೇರಿದಂತೆ ಚುನಾವಣಾ ಬ್ಲಾಕ್‌ ಅಧಿಕಾರಿಗಳು ಭೇಟಿ ನೀಡಿ ಪರಿಶಿಲಿಸಿದರು.

loading...