ತೊಪಿನಕಟ್ಟಿಯಲ್ಲಿ ಛಲವಾದಿ ಶಾಖೆಯ ಉದ್ಘಾಟನೆ

0
24

ಖಾನಾಪೂರ 15- ಖಾನಾಪೂರ ತಾಲೂಕಿನ ವ್ಯಾಪ್ತಿಯಲ್ಲಿ ಶುಕ್ರವಾರ ಛಲವಾದಿ ಮಹಾಸಭಾ ಸಂಘದ ತೊಪಿನಕಟ್ಟಿ ಶಾಖೆಯನ್ನು ಖಾನಾಪೂರ ತಾಲೂಕಿನ ಶಾಸಕರಾದ  ಪ್ರಲ್ಹಾದ ಕಲ್ಲಪ್ಪಾ ರೇಮಾಣಿ ಇವರು ಸದರಿ ಸಂಘದ ನಾಮಫಲಕದ ಉದ್ಘಾಟನೆಯನ್ನು ಮಾಡಿದರು ಮತ್ತು  ದೀಪ ಬೆಳಗಿಸುವ ಕಾರ್ಯಕ್ರಮವನ್ನು ಬೆಳಗಾವಿ ಜಿಲ್ಲಾ ಛಲವಾದಿ ಮಹಾ ಸಭಾ ಅಧ್ಯಕ್ಷರಾದ ದುರ್ಗೇಶ ಮೇತ್ರಿ, ಶಾಸಕರಾದ ಪ್ರಲ್ಹಾದ ರೇಮಾಣಿ, ತಾಲೂಕ ಪಂಚಾಯತಿ ಸಭಾಪತಿಯಾದ ಸಂಭಾಜಿ ಪಾಟೀಲ, ಗ್ರಾಮ ಪಂಚಾಯತಿ ಅಧ್ಯಕ್ಷ ಸೌ. ಮೀನಾಕ್ಷಿ ಮುರಗೋಡ, ಸೌ. ಶಕುಂತಲಾ, ಖಾನಾಪೂರ ತಾಲೂಕಿನ ಸಿ.ಪಿ.ಆಯ್. ವೀರೇಂದ್ರಕುಮಾರ ಮತ್ತು ಪಿಎಸ್.ಐ ಧೀರಜ ಶಿಂಧೆ ಇವರಿಂದ ನೆರವೇರಿಸಲಾಯಿತು.

ಡಾ. ಬಾಬಾಸಾಹೇಬ ಅಂಬೇಡ್ಕರರ ಫೋಟೋ ಪೂಜೆಯನ್ನು ವಿಠಲ ಹಲಗೇಕರ, ಸಂಘಟನೆಯ ರಾಜ್ಯ ಜಂಟಿ ಕಾರ್ಯದರ್ಶಿ ರಾಹುಲ ಮೇತ್ರಿ, ಪರಶುರಾಮ ಚೌಗಲೆ, ಭರಮಣಿ ಈರಪ್ಪಾ ಕೋಲಕಾರ, ಧನಪಾಲ ಅಗಸಿಮನಿ ಇವರು ಭಾಷಣ ಮಾಡಿ ಸಂಘಟನೆ ಬಲಪಡಿಸಲು ಹಾಗೂ ದಲಿತರ ಮೂಲಭೂತ ಸೌಲಭ್ಯಗಳನ್ನು ಸರ್ಕಾರದಿಂದ ಕೊಡಿಸಲು ಪ್ರಯತ್ನಿಸು ವುದು  ದಲಿತ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಲು ಪ್ರಯತ್ನಿಸುವದು, ಮತ್ತು ದಲಿತ ರೈತರು ಅರ್ಥಿಕವಾಗಿ ಅಭಿವೃದ್ದಿ ಹೊಂದಲು ಹೈನುಗಾರಿಕೆ ಉದ್ಯೌಗವನ್ನು ಪ್ರಾರಂಭಿಸಲು ಸರ್ಕಾರದಿಂದ ಸದರಿ ರೈತರುಗಳಿಗೆ ಸಾಲವನ್ನು ಕೊಡಿಸಲು ಶ್ರಮಿಸುವದು ಬಗ್ಗೆ ತಮ್ಮ ಭಾಷಣದಲ್ಲಿ ತಮ್ಮ ತಮ್ಮ ವಿಚಾರ ವ್ಯಕ್ತಪಡಿಸಿದರು. ಕೆ.ಡಿ. ಮಂತ್ರೇಶಿ ಇವರು ಡಾ. ಬಾಭಾ ಸಾಹೇಬ ಅಂಬೇಡ್ಕರವರ ಜೀವನ ಚರಿತ್ರೆಯ ಕುರಿತು ಪೂರ್ಣ ಮಾಹಿತಿಯನ್ನು ನೀಡಿದರು. ಸಿಪಿಐ ವೀರೇಂದ್ರಕುಮಾರ, ಛಲವಾದಿ  ಮಹಾಸಭಾ ತೊಪಿನಕಟ್ಟಿ ಶಾಖೆಯ ಅಧ್ಯಕ್ಷರಾದ ವಿಲಾಸ ಲಕ್ಷ್ಮಣ ತಳವಾರ ಅವರಿಗೆ ಹಾಗೂ ಸಂಘದ ಸದಸ್ಯರಿಗೆ ಗುರ್ತಿನ ಚೀಟಿಯನ್ನು ಕೊಟ್ಟು ಸತ್ಕರಿಸಿದರು.

ಈ ಕಾರ್ಯಕ್ರಮಕ್ಕೆ ಸೌ. ಸುಧಾ ಉತ್ತುರಕರ, ಮಾರುತಿ ಭೈರು ಪಾಟೀಲ, ತುಕಾರಾಮ ಹುಂದ್ರೆ, ತೊಪಿನಕಟ್ಟಿ ಗ್ರಾಮ ಪಂಚಾಯತಿ ಸದಸ್ಯರು, ಎಸ್.ಡಿ.ಎಂ.ಸಿ. ಸದಸ್ಯರು, ಉದ್ಯೌಗಪತಿಗಳು ಹಾಗೂ ಗ್ರಾಮದ ಹಿರಿಯರು ಹಾಗೂ ಸಂಘಟನೆಯ ಸುತ್ತಮುತ್ತಲಿನ ಗ್ರಾಮದ ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜ ಸೇವಕರಾದ ಸುರೇಶ ಫಕೀರಾ ಕೋಲಕಾರ ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಲಕ್ಷ್ಮಣ ವಸಂತ ಗುರವ ನೆರವೇರಿಸಿ ಕೊಟ್ಟರು.

 

 

 

 

loading...

LEAVE A REPLY

Please enter your comment!
Please enter your name here