ದಶಲಕ್ಷಣ ಪರ್ವ: ಮಹಾವೀರರ ಪಲ್ಲಕ್ಕಿ ಉತ್ಸವ

0
58

 

ಅಥಣಿ 17- ತಾಲೂಕಿನಲ್ಲಿಯ ಮದಬಾವಿ ಗ್ರಾಮದಲ್ಲಿ ಜೈನ ಧರ್ಮದ ಪ್ರಮುಖ ಆಚರಣೆ ಗಳಲ್ಲೊಂದಾದ ಅನಂತ ಹುಣ್ಣಿಮೆಯ ದಶಲಕ್ಷಣ ಪರ್ವ ಸಮಾರೋಪ ಸಮಾರಂಭದಲ್ಲಿ ಗ್ರಾಮದ ಶ್ರೀ 108 ಭಗವಾನ ಪಾರ್ಶ್ವನಾಥ ದಿಗಂಬರ ಜೈನ ಮಂದಿರದಲ್ಲಿ ವೈಭವದಿಂದ ಅಷ್ಟೇ ಭಯಭಕ್ತಿಯಿಂದ ನಡೆಯಿತು.

ದಶಲಕ್ಷಣ ಪರ್ವ ದಲ್ಲಿ ಕಳೆದ 10 ದಿನಗಳಿಂದ ಶ್ರಾವಕ ಶ್ರಾವಕಿಯರಿಂದ ನಿತ್ಯ ಪಠಣ ಹಾಗೂ ಧರ್ಮ ಪೂಜಾವಿಧಿ ವಿಧಾನ ಕಾರ್ಯಕ್ರಮಗಳು ಮುಂಜಾನೆ 6 ಘಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆದವು.

ದಶಲಕ್ಷಣ ಪರ್ವದ ಪೂರ್ಣ ನೇತೃತ್ವವನ್ನು ಸ್ಥಳೀಯ ಮದಭಾವಿಯ ಪಂಡಿತರಾದ ಶ್ರೀಕಾಂತ ಉಪಾಧ್ಯೆ ವಹಿಸಿ ನಿತ್ಯ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಅದರಲ್ಲಿ ಶ್ರಾವಕ-ಶ್ರಾವಕಿಯರು ಪಾಲ್ಗೊಂಡಿದ್ದರು.

ಸಮಾರೋಪ ಸಮಾರಂಭದಂದು ಭಗವಾನ ಮಹಾವೀರ ಭಾವಚಿತ್ರ ಪಲ್ಲಕ್ಕಿ ಉತ್ಸವ ಬಣಜವಾಡ ಗ್ರಾಮದ 1008  ಭಗವಾನ ಪಾರ್ಶ್ವನಾಥ ಕಲಾ ತಂಡದವರಿಂದ ಝಾಂಜ ಪಥಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಾಯ್ದು ಬಸವೇಶ್ವರ ಸರ್ಕಲ್, ಬೀರೇಶ್ವರ ಸರ್ಕಲ್ ಆಂಜನೇಯ ಸ್ವಾಮಿ ವೃತ್ತದಿಂದ ಸಂಚರಿಸಿ ಶ್ರೀ 1008 ಪಾರ್ಶ್ವನಾಥ ಮಂದಿರಕ್ಕೆ ಆಗಮಿಸಿ ಇಲ್ಲಿ ಪಂಚಾಮೃತ ಅಭಿಷೇಕ ಜರುಗಿತು. ಮುಖ್ಯ ಅತಿಥಿಗಳಾಗಿ ಐನಾಪೂರ ಗ್ರಾಮದ ಬಾಪುಗೌಡಾ ಪಾಟೀಲ, ರತನ ಪಾಟೀಲ ಹಾಗೂ ಜೈನ ಬಾಂಧವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here