ದಾಂಡೇಲಿಯಿಂದ ಹುಬ್ಬಳ್ಳಿ ಪ್ರಾಯಾಣಿಕ ರೈಲು ಆರಂಭಕ್ಕೆ ಒತ್ತಾಯ

0
27

ಬೆಳಗಾವಿ; ದಾಂಡೇಲಿಯಿಂದ ಹುಬ್ಬಳ್ಳಿವರೆಗೆ ಪ್ರಯಾಣಿಕ ರೈಲು ಪ್ರಾರಂಭ ಹಾಗೂ ರೈಲು ನಿಲ್ದಾಣಕ್ಕೆ ಹೆಸರು ಮರು ನಾಮಕರಣ ಮಾಡುವಂತೆ ಆಗ್ರಹಿಸಿ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಶುಕ್ರವಾರ ರೈಲ್ವೆ ಸಚಿವ ಸುರೇಶ ಅಂಗಡಿಗೆ ಮನವಿ ಸಲ್ಲಿಸಿದರು.
ಉತ್ತರ ಕರ್ನಾಟಕ ಜಿಲ್ಲೆಯ ದಾಂಡೇಲಿ ನಗರದಲ್ಲಿ ಸ್ವಾತಂತ್ರದ ಪೂರ್ವದಲ್ಲಿ ಮೊಟ್ಟ ಮೊದಲು ರೈಲು ಸಂಪರ್ಕ ಕಲ್ಪಸಲಾಗಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಪ್ರಯಾಣಿಕರ ರೈಲನ್ನು ನಿಲ್ಲಿಸಲಾಯಿತು. ಅಂದಿನ ಅಧಿಕಾರಿಗಳು ,ರಾಜಕಾರಣಿಗಳು ರೈಲನ್ನು ಅಭಿವೃದ್ಧಿ ಪಡಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರಲ್ಹಾದ್ ಜೋಶಿ ಪ್ರಯತ್ನದಿಂದ ರೈಲಿಗೆ ಮರು ಜೀವ ಪಡೆದಂತಾಗಿತ್ತು. ಅಲ್ಲದೆ ಸದಾನಂದಗೌಡಾ ಅವರು ಸಹ ರೈಲ್ವೆ ಸಚಿವರಿದ್ದ ವೇಳೆ ಬಜೆಟ್ ನಲ್ಲಿ ರೈಲ್ವೆ ಮಾರ್ಗವನ್ನು ಘೋಷಿಸಿದ್ದರು. ಆದರೆ ರಾಜಕೀಯ ನಾಯಕರ ಇಚ್ಛಾ ಶಕ್ತಿ ಕೊರತೆಯಿಂದಾಗಿ ಕಾರ್ಯರೂಪಕ್ಕೆ ಬರಲಿಲ್ಲಾ . ಇನ್ನೂ ಅಧಿಕಾರಿಗಳನ್ನು ಭೇಟಿ ಮಾಡಿದ ವೇಳೆ ಭರವಸೆಯನ್ನು ಮಾತ್ರ ನೀಡುತ್ತಾ ಬಂದಿದ್ದಾರೆ. ಆದ್ದರಿಂದ ಈಗಲಾದರು ದಾಂಡೇಲಿಯಿಂದ ಪ್ರಯಾಣಿಕರ ರೈಲು ಪ್ರಾರಂಭಿಸಬೇಕು ಹಾಗೂ ಅಂಬೇವಾಡಿ ರೈಲು ನಿಲ್ದಾಣದ ಹೆಸರನ್ನು ಮರು ನಾಮಕರಣ ಮಾಡುವ ಮೂಲಕ ದಾಂಡೇಲಿ ಹೆಸರು ನಾಮಕರಣ ಮಾಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ವಿಷಯದ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಅನಿವಾರ್ಯವಾಗಿ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷ ಅಕ್ರಮ್ ಖಾನ್, ಅಶೋಕ ಪಾಟೀಲ, ಆರ್.ವಿ ಗಡ್ಡೆಪ್ಪನವರು, ಅಬ್ದುಲ್ ರಜಾಕ್ ಸೇರಿದಂತೆ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಹಾಜರಿದ್ದರು.

loading...