ದಾನ-ಧರ್ಮದಿಂದ ಜನ್ಮ ಸಾರ್ಥಕ: ಶ್ರೀಗಳು

0
21

ಕನ್ನಡಮ್ಮ ಸುದ್ದಿ-ಯಲಬುರ್ಗಾ: ಪ್ರತಿಯೊಬ್ಬರು ತಾವು ದುಡಿದು ಸಂಪಾದನೆ ಮಾಡಿದ ಹಣವನ್ನು ದಾನ, ಧರ್ಮದ ಮೂಲಕ ವಿನಿಯೋಗವಾದಲ್ಲಿ ಎಲ್ಲರ ಜನ್ಮ ಸಾರ್ಥಕವಾಗುತ್ತದೆ ಎಂದು ಗಜೇಂದ್ರಗಡ ಕಾಲಜ್ಞಾನಮಠದ ಶರಣಬಸವ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಸಿದ್ಧಾರೂಢರ ಮಠದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 26ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶರಣ-ಸಂತರು ನಾಡಿನ ಒಳಿತಿಗಾಗಿ ಶ್ರಮಿಸಿದ್ದಾರೆ. ಜಗತ್ತಿನಲ್ಲಿ ಧರ್ಮ ಕಾರ್ಯಗಳು ಆಗಬೇಕಿದೆ. ಇಂದಿನ ದಿನಮಾನಗಳಲ್ಲಿ ಸತ್ಸಂಗ, ಭಜನೆ, ಶಿವಾನುಭವದಂತ ಕಾರ್ಯಕ್ರಗಳು ಕಣ್ಮರೆಯಾಗುತ್ತಿವೆ. ಪ್ರತಿಯೊಬ್ಬರು ತಾವು ಸಂಪಾದನೆ ಮಾಡುವ ಹಣವನ್ನು ಇಂತಹ ಸತ್ಕಾರ್ಯಗಳಿಗೆ ಉಪಯೋಗಿಸಿದಲ್ಲಿ ಪುಣ್ಯಪ್ರಾಪ್ತಿಯಾಗಲಿದೆ ಎಂದರು.
ಮಕ್ಕಳ್ಳಿ ಗ್ರಾಮದ ಶಿವಾನಂದ ಶಾಖಾ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಬದುಕು ಮತ್ತು ಜೀವನಕ್ಕೆ ತುಂಬಾ ವ್ಯತ್ಯಾಸವಿದೆ. ಕಾಣದ ವಸ್ತುವಿನಲ್ಲಿ ಪರಮಾತ್ಮ ಅಡಗಿದ್ದಾನೆ. ಜ್ಞಾನ, ಪ್ರಸಾದ ಮತ್ತು ಆಧ್ಯಾತ್ಮದಲ್ಲಿ ದೇವರನ್ನು ಕಾಣುವ ಕೆಲಸವಾಗಬೇಕು. ಪ್ರತಿಯೊಬ್ಬರು ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿದಲ್ಲಿ ಯಶಸ್ಸು ಕಂಡಿತವಾಗಿ ದೊರೆಯುತ್ತದೆ. ಪ್ರತಿಯೊಬ್ಬರು ಕಾಯಕ ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದರು.
ನಿವೃತ್ತ ಮುಖ್ಯಶಿಕ್ಷಕ ಬಿ.ಎಸ್‌.ಜಿಗೇರಿ ಪ್ರಾಸ್ತಾವಿಕ ಮಾತನಾಡಿದರು. ಪ್ರಸಾದ ಸೇವೆ ನೆರವೇರಿಸಿದ ಹಾಳು ಉತ್ಪಾದಕರ ಸಂಘದ ಕಾರ್ಯದರ್ಶಿ ಗವಿಸಿದ್ದಪ್ಪ ಚಂಡೂರುಗೆ ಶಿವಾನುಭವ ಸಮಿತಿಯಿಂದ ಸನ್ಮಾನಿಸಲಾಯಿತು. ಹಾರ್ಮೋನಿಯಂ ಮಾಸ್ತರರಾದ ನೀಲಕಂಠಪ್ಪ ರೊಡ್ಡರ್‌, ಅಲ್ಲಿಸಾಬ್‌ ನದಾಫ್‌ ಸಂಗೀತ ಸೇವೆ ಸಲ್ಲಿಸಿದರು.
ಮುಖಂಡರಾದ ಷಣ್ಮುಖಯ್ಯ ಶಾಸ್ತ್ರಿಮಠ, ಶಿವನಗೌಡ ರೊಟ್ಟಿಗವಾಡ, ನೀಲಪ್ಪ ಹೊಸ್ಮನಿ ಮಕ್ಕಳ್ಳಿ, ಈರಪ್ಪ ಅಂಗಡಿ, ಸೂಗಿರಪ್ಪ ಬಳಿಗಾರ, ಸಿದ್ದರಾಮಪ್ಪ ಚವಡಿ, ಯಲ್ಲಪ್ಪ ಮದ್ಗುಣ್ಕಿ, ಹನುಮಂತರಾವ್‌ ದೇಸಾಯಿ, ಮಂಜುನಾಥ ಮೆಣಸಿಗೇರಿ, ದೇವಪ್ಪ ಕುರಿ, ಶಿವಾಜಿ ಆರೇರ್‌, ರಾಮಣ್ಣ ವಣಗೇರಿ ಇದ್ದರು.

loading...