ದಿ.ಆರ್.ಎನ್.ನಾಯಕ ಅವರ ವ್ಯಕ್ತಿತ್ವ ಎಲ್ಲಾ ಸಾಮಾಜಕ್ಕೆ ಮಾದರಿ: ರಾಜೇಂದ್ರ ನಾಯ್ಕ

0
62

ಕನ್ನಡಮ್ಮ ಸುದ್ದಿ-ಅಂಕೋಲಾ : ದಿ.ಆರ್.ಎನ್.ನಾಯಕ ಅವರ ವ್ಯಕ್ತಿತ್ವ ಎಲ್ಲಾ ಸಾಮಾಜಕ್ಕೆ ಮಾದರಿ. ಜನ ಸಾಮಾನ್ಯರ ಕಷ್ಟಕ್ಕೆ ಸಂಬಂದಿಸಿದಂತೆ ಆರ್ಥಿ ಸಮಸ್ಯೆಗಳನ್ನು ನಿಗಿಸುವಲ್ಲಿ ಕೊಡಗೈದಾನಿಯಾಗಿ ಜಿಲ್ಲೆಗೆ ಜನಪ್ರಿಯತೆ ಹೆಚ್ಚಿಸಿ ಗಳಿಸಿ, ಮಾದರಿಯಾಗಿದ್ದರು ಎಂದು ಕರ್ನಾಟಕ ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೇಂದ್ರ ವಿ.ನಾಯ್ಕ ಅಭಿಪ್ರಾಯಪಟ್ಟರು.
ಆರ್.ಎನ್.ನಾಯಕ ಅಭಿಮಾನಿ ಬಳಗದವರು ಶನಿವಾರ ಪಟ್ಟಣದ ಕುಂಬಾರಕೇರಿಯ ಆರ್. ಎನ್.ನಾಯಕ ಸಭಾಭವನದಲ್ಲಿ ಏರ್ಪಡಿಸಿದ ದಿ.ಆರ್.ಎನ್.ನಾಯಕರ 61ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಅವರು ಪಾಲ್ಗೊಂಡು, ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
1979ರಲ್ಲಿ ತಾಲೂಕ ಯುವ ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷ ಹಾಗೂ 2000ನೇ ಸಾಲಿನಲ್ಲಿ ನಡೆದ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಅಧ್ಯಕ್ಷ ಪಟ್ಟ ಲಭಿಸಲಿಕ್ಕೆ ಮಾಜಿ ಶಾಸಕ ಉಮೇಶ ಭಟ್ ಅವರೊಂದಿಗೆ ಆರ್.ಎನ್.ನಾಯಕರವರು ಮಾತನಾಡಿ ಅಧ್ಯಕ್ಷ ಪಟ್ಟ ನೀಡುವಲ್ಲಿ ಅವರು ಪ್ರಮುಖರಾಗಿದ್ದರು. ಅದೇ ರೀತಿ ಆರ್.ಎನ್.ನಾಯಕರ ಅಭಿಮಾನ ಸಂಘದವರು ಪ್ರತಿವರ್ಷ ಅವರ ಹುಟ್ಟು ಹಬ್ಬ ಮತ್ತು ಪುಣ್ಯ ದಿನ ಆಚರಣೆ ತಪ್ಪದೇ ಮಾಡಬೇಕು ಅಲ್ಲದೇ ನನ್ನ ಸಹಕಾರ ಯಾವತ್ತು ಇದೆ ಎಂದು ರಾಜೇಂದ್ರ ನಾಯ್ಕ ಹೇಳಿದರು.
ಅಗಸೂರು ಜಿ.ಪಂ.ಸದಸ್ಯ ಜಗದೀಶ ಜಿ.ನಾಯಕ ಮೊಗಟಾ ಅವರು ಮಾತನಾಡಿ ದಿ.ಆರ್.ಎನ್.ನಾಯಕ ಅವರು ಸಾಮಾಜಮುಖಿ ಕೆಲಸದಲ್ಲಿ ರಾಜ್ಯಕ್ಕೆ ಮಾದರಿಯಾಗಿದ್ದರು. ಅವರ ಪುತ್ರ ಮಯೂರ ನಾಯಕರು ತಂದೆಯ ಆದರ್ಶ ತತ್ವವನ್ನು ಅಳವಡಿಸಿಕೊಂಡು ಆರ್.ಎನ್.ನಾಯಕರ ಹೆಸರು ಸಾಮಾಜದಲ್ಲಿ ಅಚ್ಚಳೆ ಯದಂತೆ ನೋಡಿಕೊಳ್ಳಿ ಎಂದು ಹಾರೈಸಿದರು.
ಶಿಕ್ಷಕ ಜಗದೀಶ ಜಿ. ನಾಯಕ ಹೊಸ್ಕೇರಿ ಅವರು ಮಾತನಾಡಿ ದಿ.ಆರ್.ಎನ್.ನಾಯಕ ಅವರು ಪೂಜ ಗೇರಿಯಲ್ಲಿ ಜನ ಸಾಮಾನ್ಯರಿಗೆ ಅನುಕೂಲವಾಗುಂತೆ ಶೈಕ್ಷಣಿಕ ಕ್ಷೇತ್ರಕ್ಕೆ ಸವಲಾಗಿ ರಾಜ್ಯಕ್ಕೆ ಮಾದರಿಯಾಗು ವಂತೆ ಹಿಮಾಲಯ ಕಾಲೇಜ್ ಆರಂಭಿಸಿ ಜಿಲ್ಲೆಗೆ ಮಾದರಿಯಾಗಿದ್ದಾರೆ ಎಂದರು.
ಎನ್.ವಿ.ನಾಯಕ ಭಾವಿಕೇರಿ ಅವರು ಮಾತನಾಡಿ ಕಣ್ಣಿಗೆ ಕಾಣುವ ವೈಭವ ನಿಜವಾದುದಲ್ಲ. ಅದು ಮನಸ್ಸಿ ನೊಳಗಿನ ಭಾವನೆಯಿಂದ ಸ್ಮರಿಸುವ ಶಕ್ತಿಯೇ ದಿ.ಆರ್.ಎನ್.ನಾಯಕರು ಕಾಣಿಸಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಅವರ ಹೃದಯವಂತಿಕೆ, ಬಡವರ ಬದಕನ್ನು ಅರ್ಥಮಾಡಿಕೊಳ್ಳುವ ಶಕ್ತಿಯ ಮನೋಭಾ ವನೆ ಇನ್ನಿತರರಿಗೆ ಮಾದರಿಯಾಗಲಿ ಎಂದರು.
ಶ್ರೀ ವೆಂಕಟ್ರಮಣ ದೇವಸ್ಥಾನದ ಧರ್ಮದರ್ಶಿ ನಾರಾಯಣ ಬಿ.ನಾಯಕ ಅಲಗೇರಿ ಅವರು ಮಾತನಾಡಿ ಆರ್.ಎನ್.ನಾಯಕರು ಈ ಹಿಂದೆ ನಮ್ಮ ದೇವಸ್ಥಾನದ ಧರ್ಮದರ್ಶಿಯಾಗಿ ದೇವಸ್ಥಾನದ ಅಭಿವೃದ್ಧಿ ಪಡಿಸುವಲ್ಲಿ ಹೆಸರು ಗಳಿಸಿದರು. ಇನ್ನು ಮುಂದಿನ ದಿನಗಳಲ್ಲಿಯೂ ಸಹ ಅವರ ಪುತ್ರ ಮಯೂರ ನಾಯಕ ರಿಗೆ ಹೆಚ್ಚಿನ ಜವಬ್ದಾರಿ ನೀಡುತ್ತೇನೆ ಎಂದು ಸಂಕಲ್ಪ ಮಾಡಿದರು.
ಭಾವಿಕೇರಿ ಗ್ರಾ.ಪಂ. ಸದಸ್ಯ ಉದಯ ವಾಮನ ನಾಯಕ ಅವರು ಮಾತನಾಡಿ ಆರ್.ಎನ್.ನಾಯಕ ಅವರು ಜಿಲ್ಲೆಯ ಸಹಕಾರಿ ರಂಗದಲ್ಲಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ತಮ್ಮ ಸಂಸ್ಥೆಗಳ ಮೂಲಕ ಜನ ಸಾಮಾನ್ಯರಿಗೆ ಆರ್ಥಿಕ ನೆರವು ನೀಡಿದವರು. ಅದೇ ರೀತಿ ತಂದೆ ಮಾದರಿಯನ್ನೇ ಮಯೂರ ನಾಯಕ ಮುಂದುವರಿಸಿ ಕೊಂಡು ಜನಪ್ರಿಯತೆ ಕಾರಣಕರ್ತರಾಗಲಿ ಎಂದರು.
ದಿ.ಆರ್.ಎನ್.ನಾಯಕರ ಪತ್ನಿ ಲತಾ ಆರ್.ನಾಯಕ, ಮೊಮ್ಮಗಳು ಬ್ರಹ್ಮಣಿ, ನಾಗಪತಿ ಹೆಗಡೆ, ಅನ್ವರಮುಲ್ಲಾ, ಗೋಪಾಲಕೃಷ್ಣ ನಾಯಕ ಮತ್ತು ಆರ್.ಟಿ.ಮಿರಾಶಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಗಸೂರು ಗ್ರಾ.ಪಂ. ಸದಸ್ಯ ಹಾಗೂ ಆರ್.ಎನ್.ನಾಯಕ ಅಭಿಮಾನ ಸಂಘದ ಅಧ್ಯಕ್ಷ ಗೋಪಾಲ ಆರ್.ನಾಯಕ (ಗೋಪು) ಸ್ವಾಗತಿಸಿದರು. ಮಂಜುನಾಥ ಜೆ.ನಾಯಕ ನಿರೂಪಿಸಿದರು. ದೇವರಾಜ ಗೋಳಿಕಟ್ಟೆ ವಂದಿಸಿದರು. ಕಾರ್ಯಕ್ರಮದಲ್ಲಿ ವಿಲ್ಲಾಸ ನಾಯಕ(ಪುಟ್ಟು), ಅನುರಾಧ ಎಸ್.ನಾಯ್ಕ, ಜಿ.ಬಿ.ನಾಯಕ, ಪ್ರದೀಪ ವಾಸರೆ, ಅಪ್ಪಣ ಎಂ.ಕಾಂಬಳೆ, ರಾಜೇಶ ನಾಯಕ, ಹರೀಶ ನಾಯಕ, ಸುಚಿತ ನಾಯಕ ಹಿಲ್ಲೂರು ಸೇರಿದಂತೆ ನೂರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.

loading...