ದಿ.30 ರಂದು ಸಿವ್ಹಿಲ್ ಇಂಜೀನೀಯರ್ಸ್ ಸಂಘದ ನೂತನ ಕಚೇರಿ ಉದ್ಘಾಟನೆ

0
20

ಬಾಗಲಕೋಟ, 27- ನಗರದ ಅಸೋಸಿಯೇಶನ್ ಆಫ್ ಸಿವ್ಹಿಲ್ ಇಂಜೀನೀಯರ್ಸ್ನ ನೂತನ ಕಚೇರಿಯ ಪ್ರಾರಂಭೋತ್ಸವವು ದಿ. 30 ರಂದು ರವಿವಾರ   ಸಾಯಂಕಾಲ  6 ಗಂಟೆಗೆ ನವನಗರದ ಕಲಾಭವನದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಆರ್.ಎಂ.ತಪಶೆಟ್ಟಿ ತಿಳಿಸಿದರು.

ಅವರಿಂದು ನಗರದ ಪ್ರತಿಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ  1987 ರಿಂದ ಸಂಘವು ಕಾರ್ಯನಿರ್ವಹಿಸುತ್ತಿದ್ದು,  ನಗರ ಮುಳುಗಡೆಯಾದ ನಂತರ ಕಚೇರಿಗೆ ಸ್ವಂತ ಜಾಗೆ ಇರದ ಕಾರಣ ಚಟುವಟಿಕೆಯಲ್ಲಿ ನಿಧಾನ ಗತಿಯಲ್ಲಿ ಸಾಗಿತ್ತು. ಇತ್ತೀಚೆಗೆ ಬಾಡಿಗೆ ಕಟ್ಟಡದಲ್ಲಿ  ನಮ್ಮ ನೂತನ ಕಚೇರಿ ಪ್ರಾರಂಭಿಸಿ ನಮ್ಮ ಸಂಘದ ಕಾರ್ಯಚಟುವಟಿಕೆಯನ್ನು ಚುರುಕುಗೊಳಿಸಲಾಗಿದೆ ಎಂದರು.

ಎಲ್ಲ ಹೊಸ ಇಂಜೀನೀಯರ್ಗಳನ್ನು ಒಗ್ಗೂಡಿಸಿ, ಈಗ ಉತ್ಸಾಹದಿಂದ ನೂತನ ಕಚೇರಿಯನ್ನು ಪ್ರಾರಂಭಿಸುತ್ತಿದ್ದೇವೆ ಎಂದರು.

ಸಂಘದ ವತಿಯಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತ ನಿರ್ಣಯಗಳನ್ನು ಕೈಗೊಂಡಿದ್ದು, ಅವುಗಳಲ್ಲಿ  ಕಟ್ಟಡದ ನಿರ್ಮಾಣದ ಬಗ್ಗೆ,  ತಿಳುವಳಿಕೆ ನೀಡುವುದು, ಕಟ್ಟಡ ನಿರ್ಮಾಣದಲ್ಲಿ ಆಗಿರುವ ಹಾಗೂ ಹೊಸದಾಗಿ ಆಗುತ್ತಿರುವ ತಾಂತ್ರಿಕತೆಯ ಬಗ್ಗೆ ಸಭೆಗಳನ್ನು ಮೇಲಿಂದ ಮೇಲೆ ಆಯೋಜಿಸಿ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿ ಸುವುದು. ಮತ್ತು ಕಟ್ಟಡ ನಿರ್ಮಾಣದ ವಸ್ತು ಪ್ರದರ್ಶನಗಳನ್ನು ಏರ್ಪಡಿಸಿ ಅದರಿಂ ದಾಗು ಪ್ರಯೋಜನ ಗಳನ್ನು ತಿಳಿಸಲಾಗು ವುದು ಎಂದು ಹೇಳಿ ದರು.

ಈ ಕಾರ್ಯಕ್ರಮದಲ್ಲಿ  ಚರಂತಿಮಠದ ಶ್ರೀ ಮ.ನಿ.ಪ್ರ. ಪ್ರಭುಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು,  ಐ.ಸಿ.ಐ. ಹುಬ್ಬಳ್ಳಿ ಚೇರಮನ್  ಪ್ರೊ.ಅರವಿಂದ ಗಲಗಲಿ,  ಸೆಲ್ಸ್ ಹೆಡ್ ಎಸಿಸಿ ಲಿಮಿಟೆಡ್ನ ನಾರಾಯಣ ಶಾನಭಾಗ,  ವೈ. ಪ್ರಸಿಡೆಂಟ್ ಬಾಗಲಕೋಟ ಸಿಮೆಂಟ್ ಇಂಡಸ್ಟ್ತ್ರೀಜ್ನ ವಿನಾಯಕ ಎಂ.ಕೋನೆರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಸುರೇಶ ಕಿರೆಸೂರ, ಸತೀಶ ಬಿ.ನಾಯ್ಕರ  ಆಹ್ವಾನಿತ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಅದೇ ದಿವಸ ಇಂಜೀನೀಯರ್  ಆನಂದ ಕುಲಕರ್ಣಿಯವರು ರಚಿಸಿದ ಶೃಂಗಾರ ಕಾವ್ಯಗಳ ಕವನ ಸಂಕಲನ ಮನಸಿನ ಮಾತು ಪುಸ್ತಕ ಬಿಡುಗಡೆಗೊಳ್ಳಲಿದೆ.  ನಂತರ  ಖ್ಯಾತ ಸಂಗೀತ ನಿರ್ದೇಶಕ ಸುನೀಲ ತೇಜ ಅವರಿಂದ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿ.ಎ.ಮದೀನಕರ,  ಪಿ.ಎ.ಪರ್ವತೀಕರ, ಎಂ.ಬಿ.ಬಳ್ಳೊಳ್ಳಿ, ಆನಂದ ಕುಲಕರ್ಣಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here