ದೈವಜ್ಞ ಸಮಾಜದ ಮಹಿಳೆಯರಿಗೆ ದ್ವಿತೀಯ ಸ್ಥಾನ

0
3

ಗದಗ: ರಾಜ್ಯಮಟ್ಟದ ಭಜನಾ ಸ್ಪರ್ಧೆಯಲ್ಲಿ ಗದುಗಿನ ದೈವಜ್ಞ ಸಮಾಜದ ಮಹಿಳೆಯರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹುಬ್ಬಳ್ಳಿಯ ಸಿದ್ದಾರೂಢ ಸ್ವಾಮಿಯವರ ಮಠ ಟ್ರಸ್ಟ ಕಮೀಟಿಯು ಜಗದ್ಗುರು ಸಿದ್ದಾರೂಢರ ಜಯಂತ್ಯೊÃತ್ಸವದ ಅಂಗವಾಗಿ ಶ್ರಿÃಮಠದ ನಿಜಗುಣ ಶಿವಯೋಗಿಗಳ ಕೈವಲ್ಯ ಭಜನಾ ವೇದಿಕೆಯಲ್ಲಿ ಎರ್ಪಡಿಸಿದ್ದ ರಾಜ್ಯ ಮಟ್ಟದ ನಿಜಗುಣ ಶಿವಯೋಗಿಗಳ ಕೈವಲ್ಯ ಭಜನಾ ಸ್ಪರ್ಧೆಯಲ್ಲಿ ಅಭಿನೇತ್ರಿ ರೇವಣಕರ ಅವರ ನೇತೃತ್ವದಲ್ಲಿ ಗದುಗಿನ ಮಹಿಳಾ ತಂಡದವರು ಪಾಲ್ಗೊÃಂಡಿದ್ದರು.
ತಂಡದಲ್ಲಿ ಅಭಿನೇತ್ರಿ ರೇವಣಕರ, ಸಂಧ್ಯಾ ವೇರ್ಣೆಕರ, ಪದ್ಮಶ್ರಿÃ ವೇರ್ಣೆಕರ, ಗಾಯತ್ರಿ ಪಾಲನಕರ, ನಿರ್ಮಲಾ ಪಾಲನಕರ, ಐಶ್ವರ್ಯ ಕುಡತರಕರ, ವಂದನಾ ಕುರ್ಡೆಕರ, ಆಶಾ ರೇವಣಕರ ಅವರು ಭಜನಾ ಸ್ಪರ್ಧೆಯಲ್ಲಿ ಪಾಲ್ಗೊÃಂಡಿದ್ದರು. ಈ ತಂಡಕ್ಕೆ ಸಂಗೀತಗಾರರಾದ ವನಮಾಲಾ ಮಾನಶೆಟ್ಟಿ ಹಾರ್ಮೋನಿಯಂ ಹಾಗೂ ಹೇಮಂತ ಹಿರೇಮಠ ತಬಲಾ ಸಾಥ್ ನೀಡಿದರು. ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆಯುವ ಮೂಲಕ ಗದಗ ಜಿಲ್ಲೆಯ ಹಾಗೂ ದೈವಜ್ಞ ಸಮಾಜದ ಕೀರ್ತಿಯನ್ನು ಹೆಚ್ಚಿಸಿದ ತಂಡಕ್ಕೆ ಗದಗ ದೈವಜ್ಞ ಸಮಾಜದ ಮಹಿಳಾ ಮಂಡಳದ ಅಧ್ಯಕ್ಷೆ ಸಂಧ್ಯಾ ರಾಜು ವೇರ್ಣೆಕರ ಅಭಿನಂದಿಸಿ ಸಮಾಜದ ಮಹಿಳೆಯರು ಇದೇ ರೀತಿಯಲ್ಲಿ ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ಹೆಸರು ತರುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.

loading...