ದೊರೆಯದ ಉತಾರ: ರೈತರ ಆಕ್ರೋಶ

0
30

ಕನ್ನಡಮ್ಮ ಸುದ್ದಿ-ರೋಣ: ನಿತ್ಯವೂ ಉತಾರವನ್ನು ಪಡೆಯಲು ನಿತ್ಯ ರೈತರು ಪರದಾಡುವಂತಾಗಿದೆ. ಬೆಳಗಿನ ಜಾವ 5 ಗಂಟೆಯಲ್ಲಿಯೇ ಪಾಳೆಯದಲ್ಲಿ ನಿಂತರೂ ಕೂಡ ಉತಾರ ದೊರೆಯುತ್ತಿಲ್ಲ ಎಂದು ರೋಣ ತಹಸೀಲ್ದಾರ್‌ರಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಉತಾರದ ಸಿಬ್ಬಂದಿ ತಮಗೆ ತಿಳಿದ ರೀತಿಯಲ್ಲಿ ವರ್ತಿಸುತ್ತಲಿದ್ದಾರೆ. ಬೆಳಗಿನ ಜಾವದಲ್ಲಿ ಪಾಳೆಯದಲ್ಲಿ ನಿಂತರೂ ಕೂಡಾ ದೊರೆಯದ ಉತಾರ ತಮ್ಮ ತಮ್ಮ ಪರಿಚಯಸ್ಥರಿಗೆ ಯಾವುದೇ ಪಾಳೆಯವಿಲ್ಲದೇ ಸಿಗುತ್ತಲಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ತಹಸೀಲ್ದಾರರಲ್ಲಿ ಮನವಿ ಮಾಡಿ, ಸೂಕ್ತಪರಿಹಾರ ಒದಗಿಸುವಂತೆ ರೈತರು ಆಗ್ರಹಿಸಿದರು.
ರೈತರ ಸಮಸ್ಯೆಯನ್ನು ಆಲಿಸಿದ ದಂಡಾಧಿಕಾರಿ ಶಿವಲಿಂಗ ಪ್ರಭು ವಾಲಿ ಮಾತನಾಡಿ, ಕೂಡಲೇ ಬೇರೆ ಸಿಬ್ಬಂದಿ ನೇಮಿಸಿ ರೈತರಿಗೆ ಬೇಗನೆ ಉತಾರ ದೊರೆಯುವಂತೆ ಮಾಡಲಾಗುವುದು ಎಂದು ಹೇಳಿದ ನಂತರ ತಾಲೂಕಿನ ವಿವಿಧ ಗ್ರಾಮಗಳಿಂದ ಉತರಕ್ಕಾಗಿ ಬಂದಿರುವ ರೈತರು ಸಮ್ಮತಿಸಿದರು.
ಈ ಸಂದರ್ಭದಲ್ಲಿ ಜಿ.ಎಚ್‌. ಜಕ್ಕಲಿ, ಬೀಮಣ್ಣ ಕಳಕಾಪೂರ, ಫಕ್ರುಸಾಬ, ಹುಜರತಿ, ಗಂಗಾಧರ ಚವಡಿ, ಶರಣಯ್ಯ ನಿರಂಜಪ್ಪನವರ, ಹುಲ್ಲಪ್ಪ ಕೆಂಗಾರ, ಅಂದಾನಯ್ಯ ರುದ್ರಾಪೂರ, ಜಗದೀಶ ಡೊಳ್ಳಿನ ಸೇರಿದಂತೆ ಹಿರೇಹಾಳ, ಕುರಹಟ್ಟಿ, ಬೆನಹಾಳ, ಗುಳಗುಳಿ ರೈತರು ಇದ್ದರು.

loading...