ದೋಸ್ತಿಯಲ್ಲಿ ಸಮಸ್ಯೆ ಇದೆ,ಬಗೆಹರಿಸಿಕೋಳ್ತೇವೆ

0
24

ಬೆಂಗಳೂರು:ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಹೊಂದಾಣಿಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿರುವಸುತ್ತೂರು ಮಠದಲ್ಲಿ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 103ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿದರು.
ಕಾಂಗ್ರೆಸ್-ಜೆಡಿಎಸ್ ನಡುವೆ ಸ್ಥಳೀಯ ಮಟ್ಟದಲ್ಲಿ ಸಮಸ್ಯೆ ಇದೆ.ಅದನ್ನ ಬಗೆಹರಿಸಿಕೊಳ್ಳುತ್ತೇವೆ.ಸಮ್ಮಿಶ್ರ ಸರ್ಕಾರ ಸುಸೂತ್ರವಾಗಿ ನಡೆಯುತ್ತಿದೆ.ಕೆಲ ಕಾರಣಗಳಿಂದ ಸಮನ್ವಯ ಸಮಿತಿ ವಿಳಂಬವಾಗುತ್ತಿದೆ.ಶೀಘ್ರದಲ್ಲಿ ಸಮನ್ವಯ ಸಮಿತಿ ಸಭೆ ನಡೆಸುತ್ತೇವೆ. ಎಲ್ಲಾ ಸಮಸ್ಯೆಗಳನ್ನ ಬಗೆಹರಿಸುತ್ತೇವೆ ಎಂದು ತಿಳಿಸಿದರು.
ಇನ್ನು ಹಾಸನದಲ್ಲಿ ಜೆಡಿಎಸ್-ಕಾಂಗ್ರೆಸ್ ಮಧ್ಯೆ ಸಮಸ್ಯೆ ಇದೆ ಎಂದು ಹೇಳಿಕೆ ನೀಡಿದ್ದೆ.ಅದರೆ ಸಂದರ್ಶನದಲ್ಲಿ ಪತ್ರಿಕೆಯಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಇದೇ ವೇಳೆ ರಾಜ್ಯ ಸರ್ಕಾರದಿಂದ ಬಡ್ತಿ ಮೀಸಲಾತಿ ವಿಳಂಬವಾದ ಹಿನ್ನಲೆಯಲ್ಲಿ ಸಿಎಂ ಕುಮಾರಸ್ವಾಮಿಗೆ ಕಪ್ಪು ಪಟ್ಟಿ ಪ್ರದರ್ಶನಕ್ಕೆ ಮುಂದಾಗಿದ್ದ 20ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ವರುಣಾ ವ್ಯಾಪ್ತಿಯ ದಂಡಿಕೆರೆ ಬಳಿ ಸಿಎಂ ಕುಮಾರಸ್ವಾಮಿಗೆ ಕಪ್ಪು ಪಟ್ಟಿ ಪ್ರದರ್ಶನಕ್ಕೆ ಸಿದ್ದವಾಗಿದ್ದ ಮುಖಂಡ ರನ್ನು ಮೈಸೂರಿನ ಆಲನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.ದಲಿತ ಮುಖಂಡ ಚೋರನಹಳ್ಳಿ ಶಿವಣ್ಣ,ನಗರ್ಲೆ ವಿಜಯ್ ಕುಮಾರ್,ಮಹದೇವ್ ನಾಗೇಂದ್ರ ಸೇರಿ 20ಮಂದಿಯನ್ನ ವಶಕ್ಕೆ ಪಡೆಯಲಾಗಿದೆ.
ಕೇಂದ್ರದ ಬಡ್ತಿ ಮೀಸಲಾತಿ ವಿಳಂಬ ಹಾಗೂ ಸಂವಿಧಾನ ಸುಟ್ಟ ವಿಚಾರವನ್ನು ಮುಂದಿಟ್ಟುಕೊಂಡು ಬಂಧಿತ ಮುಖಂಡರು ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಕಪ್ಪುಪಟ್ಟಿ ಪ್ರದರ್ಶಿಸಲು ಸಿದ್ಧತೆ ನಡೆಸಿದ್ದರು.ಈ ಬಗ್ಗೆ ಮಾಹಿತಿ ಅರಿತ ಆಲನಹಳ್ಳಿ ಠಾಣಾ ಪೊಲೀಸರು ಮುಖಂಡರನ್ನ ವಶಕ್ಕೆ ಪಡೆದಿದ್ದಾರೆ.ಬಂಧನಕ್ಕೂ ಮುನ್ನ ಪೊಲೀಸರ ಜೊತೆ ಮುಖಂಡರು ಮಾತಿನ ಚಕಮಕಿ ನಡೆಸಿದ್ದಾರೆ.

loading...