ದ್ವಿತೀಯ ಪಿಯುಸಿ ಫಲಿತಾಂಶ : ಬೆಳಗಾವಿ 28ನೇ ಸ್ಥಾನ ಹಾಗೂ ಚಿಕ್ಕೋಡಿ 25 ಸ್ಥಾನ

0
172

ದ್ವಿತೀಯ ಪಿಯುಸಿ ಫಲಿತಾಂಶ :
ಬೆಳಗಾವಿ 28ನೇ ಸ್ಥಾನ ಹಾಗೂ ಚಿಕ್ಕೋಡಿ 25 ಸ್ಥಾನ

ಕನ್ನಡಮ್ನ ಸುದ್ದಿ-ಬೆಳಗಾವಿ: ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿರುವ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದು ಈ ವರ್ಷವೂ
ಬಾಲಕಿಯರೇ ಮೇಲುಗೈ ಸಾಧಿಸದ್ದಾರೆ.

ಬೆಳಗಾವಿ 28ನೇ ಸ್ಥಾನ ಹಾಗೂ ಚಿಕ್ಕೋಡಿ 25 ಸ್ಥಾನ ಪಡೆದುಕೊಂಡಿವೆ, ಹೆಚ್ಚಾಗಿ ಫಲಿತಾಂಶದಲ್ಲಿ ಮತ್ತೊಮ್ಮೆ ಉಡುಪಿ ಪ್ರಥಮ ಸ್ಥಾನದಲ್ಲಿದ್ದರೆ ಕೊಡಗು ಮೂರನೇ ಸ್ಥಾನದಲ್ಲಿದ್ದರೆ ಚಿತ್ರದುರ್ಗ ಕೊನೆಯ ಸ್ಥಾನಕ್ಕೆ ಕುಸಿದಿದೆ‌ ಮೂಲಗಳು ತಿಳಿಸಲಾಗಿದೆ.
ಹಳೆಯ ವಿದ್ಯಾರ್ಥಿಗಳು ಹಾಗೂ ಹೊಸ ವಿದ್ಯಾರ್ಥಿಗಳು ‌ಜೊತೆಗೆ ಈ ಬಾರಿ ಸುಮಾರು 6.50 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು, ಮಂಗಳವಾರ ಕಾಲೇಜುಗಳಲ್ಲಿ ಫಲಿತಾಂಶ ಲಭ್ಯವಾಗಲಿದ್ದು.

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ

ಶೇ. ೬೧.೭೩ ರಾಜ್ಯದ ಫಲಿತಾಂಶವಾಗಿದೆ. ಉಡುಪಿ – ಪ್ರಥಮ ೯೨.೧% ,ದ.ಕನ್ನಡ- ದ್ವಿತೀಯ ಸ್ಥಾನ ೯೦.೯೧%, ಕೊಡಗು ಮೂರನೆಯ ಸ್ಥಾನ ೮೩.೩೧%ಪಡೆದಿವೆ. ಈ ಬಾರಿ ವಿದ್ಯಾರ್ಥಿ ನಿಯರೇ ಮೇಲುಗೈ ಸಾಧಿಸಿದ್ದಾರೆ. ಕಡೆಯ ಸ್ಥಾನಕ್ಕೆ ಚಿತ್ರದುರ್ಗ ಜಿಲ್ಲೆ ೫೧% ಫಲಿತಾಂಶ ಮೂಲಕ ತೃಪ್ತಿ ಯಾಗಿದೆ. ಕಳೆದ ಬಾರಿಗಿಂತ ಈ ಬಾರಿ ೨% ಹೆಚ್ಚಾಗಿದೆ‌.
ಬಾಲಕಿಯರು: ೬೮.೪೬%
ಬಾಲಕರು :೫೫%
ಗ್ರಾಮೀಣ : ೬೬.೮೮%
ಕಲಾ ವಿಭಾಗ ೫೦%
ವಿಜ್ಞಾನ: ೬೬.೫೮%
ವಾಣಿಜ್ಯ: ೬೬%
ಫಲಿತಾಂಶವಾಗಿದೆ.
೯೮ ಕಾಲೇಜುಗಳು ಶೂನ್ಯ ಫಲಿತಾಂಶ ಸಾಧಿಸಿವೆ.

loading...