ಧರ್ಮದ ದಾರಿಯಲ್ಲಿ ನಡೆದರೆ ದೇಶ ರಾಮರಾಜ್ಯವಾಗಲೂ ಸಾಧ್ಯ: ದಾನೇಶ್ವರ ಶ್ರಿÃಗಳು

0
19

ಧರ್ಮದ ದಾರಿಯಲ್ಲಿ ನಡೆದರೆ ದೇಶ ರಾಮರಾಜ್ಯವಾಗಲೂ ಸಾಧ್ಯ: ದಾನೇಶ್ವರ ಶ್ರಿÃಗಳು
ಕನ್ನಡಮ್ಮ ಸುದ್ದಿ-ಗುರ್ಲಾಪೂರ: ದಾನ ಧ್ಯಾನದಿಂದ ಆತ್ಮ ಸಾಕ್ಷಾತ್ಕರವಾಗಿ ಮಾನವ ಜೀವನ ಮುಕ್ತಿ ಹೊಂದಲು ಸಾಧ್ಯವಿದೆ. ಸತ್ಯವನ್ನೆ ಹೇಳು ಸತ್ಯವನ್ನೆ ಕೇಳು, ಕರ್ಮದ ದಾರಿಯನ್ನು ಬಿಟ್ಟು ಧರ್ಮದ ದಾರಿಯಲ್ಲಿ ನಡೆದು ನಾವೆಲ್ಲರೂ ಕೂಡಿ ದೇಶವನ್ನು ರಾಮರಾಜ್ಯ ಮಾಡಬೇಕಾಗಿದೆ, ಬಬಲಾದಿ ಸದಾಶಿವ, ಮಾದವಾನಂದರು, ಸಾಕ್ಷಾತ ಶಿವನ ಸ್ವರೂಪರೂ ಎಂದು ಬಂಡಿಗಣಿಯ ಚಕ್ರವರ್ತಿ ದಾನೇಶ್ವರ ಶ್ರಿÃಗಳು ಹೇಳಿದರು.
ಅವರು ಗುರ್ಲಾಪೂರ, ಇಟ್ನಾಳ ಮಧ್ಯದಲ್ಲಿರುವ ದಾನೆಶ್ವರ ನಗರದಲ್ಲಿ ಸದಾಶಿವಪ್ಪನವರ ೨೪ನೇ ರಥೋತ್ಸವ ಹಾಗೂ ಪಾರಮಾರ್ಥಿಕ ಮಹೋತ್ಸವದ ದಿವ್ಯ ಸಾನಿದ್ಯವಹಿಸಿ ಮಾತನಾಡುತ್ತಾ ಅಸಹಾಯಕ, ಅಶಕ್ತ ವ್ಯಕ್ತಿÃಗಳ ಮೇಲೆ ದಬ್ಬಾಳಿಕೆ, ಅನ್ಯಾಯ ಮಾಡಬಾರದು ಬೇರೆಯವರ ಸಿಮೆಯನ್ನು ಒತ್ತುವುದು ಮಹಾಪಾಪ ಇಟ್ನಾಳ ಗ್ರಾಮದವರೆಲ್ಲಾ ವ್ಯಸನಾದಿಗಳಿಂದ ಮುಕ್ತರಾಗಿ ಹಾಲೀನ ಮಕ್ಕಳಾಗಬೆಕೆಂದು ಹೇಳಿದರು. ಮಾಹಿತಿ ಹಕ್ಕು ಹೋರಾಟಗಾರರಾದ ಭೀಮಪ್ಪ ಗಡಾz ಮಾತನಾಡಿ ಧರ್ಮದಿಂದ ನಡೆದು, ಧರ್ಮದ ಕಾರ್ಯ ನಡೆಸುವವರಿಗೆ ಕಷ್ಟಗಳೆ ಜಾಸ್ತಿ, ಅವತಾರಿಕರಿಗೆ ಸೂರ್ಯನ ಮರೆಮಾಡುವ ಮೊಡ ಇದ್ದ ಹಾU,É ಸ್ವಲ್ಪ ಗಾಳಿ ಬಿಸಿದರೆ ಹೊರಟುಹೋಗುವುದು, ಆಧುನಿಕ ಯುಗದಲ್ಲಿ ಧರ್ಮ ಕಡಿಮೆಯಾಗಿ ಕರ್ಮ ಹೆಚ್ಚಾಗಿ ಮಳೆ ಅಭಾವ ಕುಂಠಿತವಾಗುತ್ತಿದೆ, ದಾನೆಶ್ವರ ಶ್ರಿÃಗಳಂತಹ ಧರ್ಮದ ಕಾರ್ಯಗಳನ್ನು ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗಿ ಸಕಲ ಜೀವಾತ್ಮಗಳಿಗೆ ಲೆಸಾಗುವುದು ಎಂದು ಹೇಳಿದರು. ಸುರೇಶ ಐಹೋಳೆ ಮಾತನಾಡಿ ಬಂಡಿಗಣಿ ಶ್ರಿÃಗಳು ತ್ರಿವಿಧ ದಾಸೋಹ ವರ್ಷಪೂರ್ತಿ ನಡೆಸಿದ ಕಲಿಯುಗದಲ್ಲಿ ಎಕೈಕ ಮಹಾನಪುರುಷರು, ಬಬಲಾದಿ ಸದಾಶಿವ ಮಾದವಾನಂದ ಅವತಾರವೆ ದಾನೇಶ್ವರ ಶ್ರಿÃಗಳು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎಮ್.ಜಿ.ಮುಗಳಖೋಡ, ಮಾಧು ಮಾರಾಪೂರ ಮಾಧು ಮಗದುಮ್, ಮಲ್ಲಪ್ಪ ತವನಿದಿ, ಭೀರಪ್ಪ ಕರಗಾಂವಿ, ಬನಪ್ಪ ಸುಣಧೋಳಿ ಹಾಗೂ ಇಟ್ನಾಳ ಗ್ರಾಮದ ಸದ್ಭಕ್ತ ಮಂಡಳಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಎಸ್ ಎಸ್ ಮನ್ನಾಪೂರ ನಿರೂಪಿಸಿ, ಗಣೇಶ ಕೆಮ್ಮನಕೊಲ ಸ್ವಾಗತಿಸಿ , ಸುರೇಶ ಢಂಗ ವಂದಿಸಿದರು.

loading...