ಧರ್ಮ ಕಾಪಾಡಲು ಎಲ್ಲರೂ ಮುಂದಾಗಿ: ಶ್ರೀಗಳು

0
19

ಕನ್ನಡಮ್ಮ ಸುದ್ದಿ-ನರಗುಂದ: ಭಾರತೀಯ ಸಂಪ್ರದಾಯದಲ್ಲಿ ಜಂಗಮರಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ನಾವೆಲ್ಲ ಧಾರ್ಮಿಕ ಮನೋಭಾವಣೆಗಳಲ್ಲಿ ತಲ್ಲಿನರಾಗಿ ಧರ್ಮ ಕಾಪಾಡಲು ಮುಂದಾಗಬೇಕು. ಭಕ್ತಿ ಪರಂಪರೆಯಲ್ಲಿ ಈ ನಾಡನ್ನು ಸಮೃದ್ಧಿಯತ್ತ ಕೊಂಡೂಯ್ಯಬೇಕೆಂದು ಸೊರಟೂರ ಮಲ್ಲಸಮುದ್ರಗಿರಿಯ ಫಕ್ಕೀರೇಶ್ವರ ಶ್ರೀಗಳು ಹೇಳಿದರು.
ಪಟ್ಟಣದ ಪತ್ರೀವನಮಠದಲ್ಲಿ ಜಾತ್ರಾಮಹೋತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಜಂಗಮ ವಟುಗಳಿಗೆ ಅಯ್ಯಾಚಾರ ಹಾಗೂ ದೀಕ್ಷಾ ಕಾರ್ಯಕ್ರಮದ ನಂತರದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.ಬೆನಕನಕೊಪ್ಪದ ಶಿವಾನಂದ ಸ್ವಾಮಿಗಳು, ಬೆಳ್ಳೇರಿ ಬಸವಾನಂದ ಸ್ವಾಮಿಗಳು, ಅಡ್ನೂರ ದಾಸೋಹಮಠದ ಪಂಚಾಕ್ಷರ ಶಿವಾಚಾರ್ಯರು ಮಾತನಾಡಿದರು. ನೂತನವಾಗಿ ಶ್ರೀಮಠದಲ್ಲಿ ನಿರ್ಮಿತಗೊಂಡ ಗುರುಭವನ ಮತ್ತು ಯಡಹಳ್ಳಿ ಮಲ್ಲಿಕಾರ್ಜುನ ಶಿವಯೋಗಿಗಳ ಜ್ಞಾನವೇದಿಕೆ ಉದ್ಘಾಟಣೆ ನೆರವೇರಿಸಲಾಯಿತು.
ಪತ್ರಿವನಮಠದ ಗುರುಸಿದ್ದವೀರ ಶಿವಯೋಗಿ ಶಿವಾಚಾರ್ಯರು. ಬಸಯ್ಯ ಸ್ವಾಮಿಗಳು, ಶಿವಯ್ಯ ಹಾರೂಗೇರಿಮಠ, ಸೋಮಯಜ್ಜನವರು, ವೀರಭದ್ರಶಾಸ್ತ್ರಿಗಳು, ಮುಗಳಖೋಡ ಬಸವರಾಜ ಸ್ವಾಮಿಗಳು ಉಪಸ್ಥಿತರಿದ್ದರು. ಈಶ್ವರಯ್ಯ ಮಠಪತಿ, ಪ್ರಶಾಂತ ಅಳಗವಾಡಿ, ಬಸವರಾಜ ತಳವಾರ, ಬಿ,ಎಂ,ಬೀರನೂರ ಕಾರ್ಯಕ್ರಮ ನಿರ್ವಹಿಸಿದರು.

loading...