ನಗರಸಭೆ ಚುನಾವಣೆ: ಎಎಪಿ ಅಭ್ಯರ್ಥಿಗಳು ಕಣಕ್ಕೆ

0
17

ಕನ್ನಡಮ್ಮ ಸುದ್ದಿ-ಗಂಗಾವತಿ: ಅ.29 ರಂದು ನಡೆಯಲಿರುವ ನಗರಸಭೆ ಚುನಾವಣೆಯಲ್ಲಿ 35 ವಾರ್ಡಗಳಿಂದ ತಮ್ಮ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಇತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ದಿಸುವುದಾಗಿ ಆಮ್ ಆದ್ಮಿ ಜಿಲ್ಲಾ ಸಂಚಾಲಕ ಹುಸೇನ್‍ಸಾಬ್ ಗಂಗನಾಳ, ತಾಲೂಕು ಸಂಚಾಲಕ ಶರಣಪ್ಪ ಸಜ್ಜಿಹೊಲ ತಿಳಿಸಿದರು.
ಪತ್ರಿಕಾಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2012 ರಲ್ಲಿ ತಮ್ಮ ಪಕ್ಷ ಸ್ಥಾಪನೆಗೊಂಡಿದೆ. ಕಳೆದ 5 ವರ್ಷಗಳಿಂದ ರಾಜ್ಯದಲ್ಲಿ ಉತ್ತಮವಾಗಿ ಆಮ್ ಆದ್ಮಿ ಪಾರ್ಟಿ ಸಂಘಟನೆ ಮಾಡುತ್ತ ಬಂದಿದ್ದೇವೆ. 2018 ರ ವಿಧಾನಸಭಾ ಚುನಾವಣೆಯಲ್ಲಿ ನಾವು ನಿರೀಕ್ಷಿಸಿದಂತೆ ಮತದಾರ ತಮ್ಮ ಪಕ್ಷ ಬೆಂಬಲಿಸಲಿಲ್ಲ. ಆದರು ಸಹ ತಾವು ದೃತಿಗೆಟ್ಟಿಲ್ಲ. ಆತ್ಮ ವಿಶ್ವಾಸದಿಂದ ಸಂಘಟನೆ ಮಾಡುತ್ತಿದ್ದೇವೆ ಎಂದರು.
ಇಲ್ಲಿನ ನಗರಸಭೆಯಲ್ಲಿ ಕೋಟಿಗಟ್ಟಲೆ ಲೂಟಿಯಾಗಿದೆ. ನಗರಸಭೆ ಅಕ್ರಮಗಳ ವಿರುದ್ಧ ತಮ್ಮ ಪಕ್ಷ ಹೋರಾಟ ನಡೆಸುತ್ತ ಬಂದಿದೆ. 110 ಪಾರ್ಕ್‍ಗಳು ಮಂಗಮಾಯವಾಗಿವೆ. ಪ್ರಭಾವಿಶಾಲಿ ರಾಜಕಾರಣಿಗಳು ಪಾರ್ಕ್ ಸ್ಥಳಗಳಲ್ಲಿ ಭವ್ಯವಾದ ಬಂಗಲೆ ನಿರ್ಮಿಸಿಕೊಂಡಿದ್ದಾರೆ. ಇವುಗಳ ದಾಖಲೆಗಳನ್ನು ತಮ್ಮ ಪಕ್ಷ ಸಂಗ್ರಹಿಸುತ್ತಿದೆ. ಪಾರ್ಕ್ ಉಳಿಸಿಕೊಳ್ಳಲು ಕಾನೂನಾತ್ಮಕ ಹೋರಾಟ ಮಾಡುವುದಾಗಿ ಅವರು ತಿಳಿಸಿದರು.
35 ವಾರ್ಡ್‍ಗಳಲ್ಲಿ ಉತ್ತಮ ಮತ್ತು ಪ್ರಾಮಾಣಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ತಮ್ಮ ಪಕ್ಷ ಟಿಕೆಟ್ ನೀಡುತ್ತದೆ. ಅಭ್ಯರ್ಥಿಗಳ ಆಯ್ಕೆ ಈಗಾಗಲೇ ಸಮಿತಿ ರಚನೆ ಮಾಡಲಾಗಿದೆ ಎಂದು ಹೇಳಿದರು.
ಚಂದ್ರಶೇಖರ ಹೂಗಾರ, ಬಸವರಾಜ , ಯಮನೂರಪ್ಪ, ಜಿಲಾನಿಪಾಷ, ವಿರುಪಾಕ್ಷಿ ಪಾಲ್ಗೊಂಡಿದ್ದರು.

loading...