ನಗರ ಸ್ಥಳೀಯ ಚುನಾವಣೆ: ಜಿಲ್ಲೆಯಲ್ಲಿ ಶೇ.30.35 ರಷ್ಟು ಮತದಾನ

0
51

ಕನ್ನಡಮ್ಮ ಸುದ್ದಿ- ಬೆಳಗಾವಿ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಇಂದು ಬೆಳಿಗ್ಗೆ ಯಿಂದಲೇ ಆರಂಭಗೊಂಡಿದ್ದು, 7.ಗಂಟೆಯಿಂದ 11 ಗಂಟೆಯವರೆ ಜಿಲ್ಲೆಯಾಧ್ಯಂತ ಶೇ.30.35 ರಷ್ಟು ಮತದಾನವಾಗಿದೆ.

ಶುಕ್ರವಾರ ಜಿಲ್ಲೆಯಾಧ್ಯಂತ ನಗರ ಸ್ಥಳೀಯ  ಸಂಸ್ಥೆ ಗಳ  ಸಾರ್ವತ್ರಿಕ ಚುನಾವಣೆ ಮತದಾನ ಬೆಳಿಗ್ಗೆ 7 ಗಂಟೆಯಿಂದಲೇ ಆರಂಭಗೊಂಡಿದೆ.

ಬೆಳ್ಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆ ಶೇಕಡಾವಾರು 11.96ರಷ್ಟು ಮತದಾನವಾಗಿದೆ. ನಂತರ  7 ರಿಂದ 11 ಗಂಟೆಯವೆ ಶೇ.30.35ರಷ್ಟು ಮತದಾನವಾಗಿದೆ.

ಗೋಕಾಕ ನಗರ ಸಭೆ ವಾರ್ಡ ಸಂಖ್ಯೆ 31 ರಲ್ಲಿ ಶೇ.22.31, ನಿಪ್ಪಾಣಿ ನಗರ ಸಭೆ ಸಂಖ್ಯೆ 31 -29.1,ರಾಮದುರ್ಗ ಪುರಸಭೆ ವಾರ್ಡ ಸಂಖ್ಯೆ 27ರಲ್ಲಿ 19.66, ಬೈಲಹೊಂಗಲ ಪುರಸಭೆ ವಾರ್ಡ ಸಂಖ್ಯೆ 27ರಲ್ಲಿ 34.14, ಸಂಕೇಶ್ವರ ಪುರಸಭೆ ವಾರ್ಡ ಸಂಖ್ಯೆ 23ರಲ್ಲಿ ಶೇ.25.5, ಸವದತ್ತಿ ಪುರಸಭೆ ವಾರ್ಡ ಸಂಖ್ಯೆ 27ರಲ್ಲಿ ಶೇ. 28.34, ಮೂಡಲಗಿ ಪುರಸಭೆ ವಾರ್ಡ ಸಂಖ್ಯೆ 23ರಲ್ಲಿ 38.18, ಚಿಕ್ಕೋಡಿ ಪುರಸಭೆ ವಾರ್ಡ ಸಂಖ್ಯೆ 23ರಲ್ಲಿ 26.58, ಕುಡಚಿ ಪುರಸಭೆ ವಾರ್ಡ ಸಂಖ್ಯೆ 23 ರಲ್ಲಿ 37.48, ಹುಕ್ಕೇರಿ ಪುರಸಭೆ ವಾರ್ಡ ಸಂಖ್ಯೆ 23 ರಲ್ಲಿ 32.27, ಸದಲಗಾ ಪುರಸಭೆ ವಾರ್ಡ ಸಂಖ್ಯೆ 23 ರಲ್ಲಿ 40.3, ರಾಯಬಾಗ ಪಪಂ. ವಾರ್ಡ ಸಂಖ್ಯೆ 19ರಲ್ಲಿ 31.1, ಖಾನಾಪುರ ಪಪಂ.ವಾರ್ಡ ಸಂಖ್ಯೆ 2೦ರಲ್ಲಿ 31.4, ಕೊಣ್ಣೂರ ಪುರಸಭೆ ವಾರ್ಡ ಸಂಖ್ಯೆ 23ರಲ್ಲಿ 28.5 ರಷ್ಟು ಮತದಾನ ನಡೆದಿದೆ.

loading...