ನಮ್ಮ ಕುಟುಂಬದ ವಿರುದ್ದ ಕಾಣದ ಕೈಗಳ ಪಿತೂರಿ: ಸಚಿವ ರಮೇಶ ಜಾರಕಿಹೊಳಿಂದ ಗಂಭೀರ ಆರೋಪ

0
28

ನಮ್ಮ ಕುಟುಂಬದ ವಿರುದ್ದ ಕಾಣದ ಕೈಗಳ ಪಿತೂರಿ: ಸಚಿವ ರಮೇಶ ಜಾರಕಿಹೊಳಿಂದ ಗಂಭೀರ ಆರೋಪ

ಕನ್ನಡಮ್ಮ ಸುದ್ದಿ-ಬೆಳಗಾವಿ:ಜಾರಕಿಹೊಳಿ ಕುಟುಂಬ ಮೊದಲಿನಿಂದಲೂ ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿದೆ. ಹೀಗಾಗಿ ಪಕ್ಷದಲ್ಲಿಯೇ ಕೆಲವು ಕಾಣದ “ಕೈ “ಗಳು ನಮ್ಮ ಕುಟುಂಬದ ವಿರುದ್ಧ ಪಿತೂರಿ ನಡೆಸಿವೆ ಎಂದು ಗಂಭೀರ ಆರೋಪ ಮಾಡಿದರು.

ಗೋಕಾಕದ ತಮ್ಮ ನಿವಾಸದಲ್ಲಿ ಶನಿವಾರ ತಮ್ಮನ್ನು ಭೇಟಿ ಮಾಡಿದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಹೋದರ ಸತೀಶ ಜಾರಕಿಹೊಳಿ ರಾಜ್ಯದ ಮುಖ್ಯಮಂತ್ರಿ ಪಟ್ಟಕ್ಕೇರುವ ತನಕ ತಾವು ವಿಶ್ರಮಿಸುವುದಿಲ್ಲ ಎಂದು ಪೌರಾಡಳಿತ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ನಮ್ಮ ಕುಟುಂಬದ ವಿರುದ್ದ ಪಿತೂರಿ ನಡೆದಿರುವುದು
ಇಂತಹ ಪಿತೂರಿಯಿಂದ ನೋವಾಗಿದೆ. ಆದರೆ, ಇಂತಹ ಯಾವ ಪಿತೂರಿಗಳಿಗೂ ತಾವು ಜಗ್ಗುವುದಿಲ್ಲ. ಸತೀಶ ಜಾರಕಿಹೊಳಿಯವರನ್ನು ಮುಖ್ಯಮಂತ್ರಿ ಪಟ್ಟದಲ್ಲಿ ಕುಳ್ಳಿರಿಸುವ ತನಕ ವಿಶ್ರಮಿಸುವುದೇ ಇಲ್ಲ ಎಂದು ತಿಳಿಸಿದರು .

ತಾವು ಪಕ್ಷ ಬಿಡುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ ಸಚಿವರು, ಹದಿಮೂರು ಶಾಸಕರೊಂದಿಗೆ ಬಿಜೆಪಿಗೆ ಹೋಗುತ್ತಾರೆಂಬ ವದಂತಿ ಸುಳ್ಳು ಎಂದು ಹೇಳಿದರು.

loading...