ನರೇಗಾ ಯೋಜನೆಯಡಿ ಕಾಮಗಾರಿ ಶೀಘ್ರ ಆರಂಭಿಸಿ: ಶಾಸಕ ಆಚಾರ್

0
19

ಕನ್ನಡಮ್ಮ ಸುದ್ದಿ-ಯಲಬುರ್ಗಾ: ತಾಲೂಕಿನ ಎಲ್ಲ ಗ್ರಾಪಂಗಳ ಶೀಘ್ರದಲ್ಲಿ ನರೇಗಾ ಯೋಜನೆಯಡಿ ಕಾಮಗಾರಿ ಆರಂಭಿಸಿ ಕೂಲಿಕಾರ್ಮಿಕರಿಗೆ ಉದ್ಯೋಗ ನೀಡಬೇಕು ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.
ತಾಲೂಕಿನ ಸಂಗನಾಳ ಗ್ರಾಪಂ ಆವರಣದಲ್ಲಿ ತಾಪಂ, ಗ್ರಾಪಂ ಸಯುಂಕ್ತಾಶ್ರಯದಲ್ಲಿ ನರೇಗಾ ಯೋಜನೆಯ ಮಾಹಿತಿ ರಥಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.ನರೇಗಾ ಯೋಜನೆಯಡಿ ಕರ್ತವ್ಯ ನಿರ್ವಹಿಸುವ ಎಂಜನಿಯರಗಳು ವಿಳಂಬ ಮಾಡದೇ ಕಾಮಗಾರಿ ಎಸ್ಟಿಮೇಟಗಳನ್ನು ತಯಾರಿಸಬೇಕು. ವಿಳಂಬ ನೀತಿ ಅನುಸರಿಸುವ ಎಂಜನಿಯರಗಳ ಮೇಲೆ ಯಾವುದೇ ಮುಲಾಜಿಯಿಲ್ಲದೇ ಕ್ರಮಕ್ಕೆ ಮುಂದಾಗುತ್ತೇನೆ ಎಂದರು.
ತಾಲೂಕಿನ 37 ಗ್ರಾಪಂಗಳಲ್ಲಿ ವಾರದೊಳಗೆ ನರೇಗಾ ಕಾಮಗಾರಿ ಪ್ರಾರಂಭಿಸಿ ಜನತೆಗೆ ಉದ್ಯೋಗ ಸೃಷ್ಠಿಸಿ ಗುಳೆ ಹೊಗದಂತೆ ತಡೆಯಬೇಕು ಎಂದರು. ಎಲ್ಲಾ ಹಂತದ ಚುನಾಯಿತಿ ಪ್ರತಿನಿಧಿಗಳು ತಮ್ಮ ಜವಬ್ದಾರಿ ಅರಿತುಕೊಂಡು ಜನತೆಗೆ ಸರ್ಕಾರಿ ಸೌಲಭ್ಯಗಳನ್ನು ದೊರಕಿಸಿಕೊಡಬೇಕು ಎಂದರು.ತಾಪಂ ಇಒ ಕೆ.ತಿಮ್ಮಪ್ಪ ಮಾತನಾಡಿ ಉದ್ಯೋಗ ರಥಯಾತ್ರೆ ಮೂಲಕ ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ನರೇಗಾ ಯೋಜನೆಯ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳಿಂದ ರೈತರು ಮತ್ತು ಕೂಲಿಕಾರ್ಮಿಕರಿಗೆ ಜಾಗೃತಿ ಮೂಡಿಸಲಾಗುವುದು. ಶಾಸಕ ಹಾಲಪ್ಪ ಆಚಾರ್ ಅವರ ನಿರ್ದೇಶನದಂತೆ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಪ್ರಾರಂಭಿಸಲು ಆದೇಶಿಸಲಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ನಿರ್ಮಲಾ ತಳವಾರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಗಂಗಮ್ಮ ಗುಳಗಣ್ಣನವರ, ತಾಪಂ ಸದಸ್ಯೆ ದೇವಮ್ಮ ನಾಗೋಜಿ, ನರೇಗಾ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ, ಮುಖಂಡರಾದ ಶರಣಪ್ಪ ಬಣ್ಣದಭಾವಿ, ಶಿವುಕುಮಾರ ನಾಗಲಾಪೂರಮಠ,ಪಿಡಿಒ ರಮೇಶ ಹೊಸಮನಿ, ಭೀಮಪ್ಪ ಹವಳಿ, ಎಚ್.ಎಸ್.ಸಿದ್ದರಡ್ಡಿ, ಬಸವರಾಜ ತೋಟದ ,ಲಕ್ಷ್ಮಣ್ಣ ಕೆರಳ್ಳಿ, ಶಿವಪುತ್ರಪ್ಪ ತಿಪ್ಪನಾಳ, ಹಾಗೂ ಗ್ರಾಪಂ ಸದಸ್ಯರು ಹಾಜರಿದ್ದರು.  ಕೊಡಗು ಮಡಿಕೇರಿ ನೆರೆ ಸಂತ್ರಸ್ತರ ಪರಿಹಾರಕ್ಕೆ ತಮ್ಮ ಒಂದು ತಿಂಗಳು ವೇತನ ನೀಡುವುದಾಗಿ ಶಾಸಕ ಹಾಲಪ್ಪ ಆಚಾರ್ ಘೋಷಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಳಿ ಜಿಲ್ಲೆಗಳಲ್ಲಿ ಭೀಕರ ಮಳೆಯಿಂದ ಅತಿವೃಷ್ಠಿ ಪರಿಣಾಮದಿಂದ ಸಾಕಷ್ಟು ಹಾನಿಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ ಶೀಘ್ರ ರಾಜ್ಯ ಸರ್ಕಾರ ಇನ್ನುಷ್ಟು ನೆರವಿಗೆ ಧಾವಿಸಿ ವಿಶೇಷ ಅನುಧಾನವನ್ನು ನೀಡಬೇಕು. ತಮ್ಮ ವೇತನ ಬಳಸಿಕೊಳ್ಳಲು ಈಗಾಗಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ.ಕೊಪ್ಪಳ ಜಿಲ್ಲೆಯನ್ನ ಸಂಪೂರ್ಣ ಬರಪೀಡಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

loading...