ನವಾಬರ ಅರಮನೆ ನವೀಕರಣ : ಬೊಮ್ಮಾಯಿ

0
29

ಸವಣೂರ : ಜ್ಞಾನಪೀಠ ಪ್ರಶಸ್ತಿ ವಿಜೇತರು, ದೇಶದ ಅಗ್ರಗಣ್ಯ ಸಾಹಿತಿ ಹಾಗೂ ಸವಣೂರಿನ ಸುಪುತ್ರ ವಿ.ಕೃ.ಗೋಕಾಕರು ಅಧ್ಯಯನ ಮಾಡಿದ ಶಾಲೆಯನ್ನು ಅವರ ಸವಿನೆನಪಿಗಾಗಿ ಸುಂದರ ಜ್ಞಾನ ದೇಗುಲವನ್ನಾಗಿ ನವೀಕರಣ ಮಾಡಲು ಕ್ರಮ ಕೈಗೊಳ್ಳಲಾಗುವದು. ನವಾಬರ ಸಂಸ್ಥಾನದ ಹಿರಿಮೆ ಗರಿಮೆ ಹೊಂದಿರುವ ಸವಣೂರ ಪಟ್ಟಣದಲ್ಲಿರುವ ನವಾಬರ ಅರಮನೆಯನ್ನು ನೆನೆಪಿನ ಸ್ಮಾರಕ ಸೌದವನ್ನಾಗಿ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಈಗಾಗಲೇ ಸರಕಾರದಿಂದ ಅನುದಾನವನ್ನು ಲಭ್ಯತೆ ಮಾಡಿಕೊಂಡು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಲೋಕಾರ್ಪಣೆ ಮಾಡಲಾಗುವದು ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಉಪವಿಭಾಗಾಧಿಕಾರಿಗಳ ಕಾರ್ಯಾಲಯದ ಹಿಂದುಗಡೆ ನೆಲೆಸಿರುವ ಸರಕಾರಿ ಪ್ರಾಥಮಿಕ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ 8 ಲಕ್ಷ 70ಸಾವಿರ ಅನುದಾನದಲ್ಲಿ ಹೆಚ್ಚುವರಿ ಕೊಠಡಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ನವಾಬರ ಹಳೆಯ ಅರಮನೆ ನವೀಕರಣ ಕಾಮಗಾರಿ ಪೂರ್ಣಗೊಳುವ ಹಂತಕ್ಕೆ ಬಂದಿದ್ದು. ಅದನ್ನು ಕೂಡಾ ತ್ವರಿಗತಿಯಲ್ಲಿ ಕೆಲಸ ಮುಗಿಸುವ ಭರವಸೆಯದೊಂದಿಗೆ ಪಟ್ಟಣದಲ್ಲಿ ಸುಮಾರು 8 ಮುಖ್ಯ ದ್ವಾರಗಳಿದ್ದು ನವಾಬರು ನಿರ್ಮಾಣ ಮಾಡಿರುವಂತ ಕಮಾನುಗಳನ್ನು ಹೊಸದಾಗಿ ನವೀಕರಿಸಿ ಸವಣೂರ ಪಟ್ಟಣವನ್ನು ಪ್ರವಾಸಿ ತಾಣವನ್ನಾಗಿ ಸ್ವಚ್ಚಂದವಾಗಿ ಆನಂದಿಸಲು ಅನುಕೂಲ ಕಲ್ಪಿಸಿ ಸವಣೂರಿನ ಗತವೈಭವ ಇತಿಹಾಸ ಸಾರುವಂತೆ ಮಾಡಲಾಗುವದು.
ಜ್ಞಾನಪೀಠ ವಿಜೇತ ವಿ.ಕೃ.ಗೋಕಾಕ ಅವರು ಕಲಿತ ಶಾಲೆ ಅವಸಾನದ ಕಡೆ ಮುಖಮಾಡಿ ನಿಲ್ಲುವ ಮೊದಲು ಅದನ್ನು ಪುನರ್‍ನವೀಕರಣ ಮಾಡಿ ಮಹಾನ್ ವ್ಯಕ್ತಿಗಳು ಅಧ್ಯಯನ ಮಾಡಿರುವ ಶಾಲೆಯನ್ನು ಇಂದಿನ ಯುವ ಪೀಳಿಗೆಗಳಿಗೆ ಗುರುತಿಸುವಂತ ಹಾಗೂ ಅಧ್ಯಯನಕ್ಕೆ ಅನುಕೂಲ ಕಲ್ಪಿಸಲಾಗುವದು ಎಂದರು.


ಅದಕ್ಕಾಗಿ ಶಾಲೆಯ ಕಟ್ಟಡದ ದುರಸ್ಥಿ ಅಂದಾಜು ಪ್ರತಿಯನ್ನು ತಯಾರಿಸಿ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ತಾಲ್ಲೂಕಾಧ್ಯಕ್ಷ ಗಾಳೇಪ್ಪ ದೊಡ್ಡಪೂಜಾರ, ಪುರಸಭೆ ಅಧ್ಯಕ್ಷ ಖಲಂದರ ಅಕ್ಕೂರ, ಉಪಾಧ್ಯಕ್ಷೆ ರಾಜೇಶ್ವರಿ ಬುಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಸ್.ಸುಧಾಕರ, ಸಂಪನ್ಮೂಲ ಅಧಿಕಾರಿ ನಾಗರಾಜ ಬಣಕಾರ, ಶಾಲಾ ಮುಖ್ಯೋಪಾಧ್ಯಯ ಪಿ.ಎನ್.ಮಂಟಗಣಿ, ಶಿಕ್ಷಕರಾದ ಪಿ.ಆರ್.ನವಲೆ, ಮೋಹನ ಮೆಣಸಿನಕಾಯಿ, ಗಂಗಾದರ ಭಾಣದ, ಪುರಸಭೆ ಸದಸ್ಯರಾದ ಸಂಗಪ್ಪ ಏರೆಸಿಮಿ, ಮಹ್ಮದ ಉಮರ ಅಳ್ನಾವರ, ಬಿಜೆಪಿ ಕಾರಡಗಿ, ಸವಣೂರ ಶಕ್ತಿ ಕೇಂದ್ರದ ಅಧ್ಯಕ್ಷರಾದ ಧರಿಯಪ್ಪಗೌಡ ಪಾಟೀಲ, ಚನ್ನಬಸಯ್ಯ ದುರ್ಗದಮಠ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹನುಮಂತಗೌಡ ಮುದಿಗೌಡ್ರ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸಾರ್ವಜನಿಕರು ಇದ್ದರು.

loading...