ನಾಣ್ಯಗಳ ಮತ್ತು ನೋಟುಗಳ ಪ್ರದರ್ಶನ

0
38

ಗೋಕಾಕ :6 ತಾಲೂಕಿನ ನಾಗನೂರ ಗ್ರಾಮದ

ಮೇಘಾ ಪ್ರಾಥಮಿಕ ಮತ್ತು ಪ್ರೌಢ ವಸತಿ ಶಾಲೆಯಲ್ಲಿ

ಪ್ರಾಚೀನ ಕಾಲದಿಂದ ಇಂದಿನವರೆಗಿನ ಸುಮಾರು 260ಕ್ಕೂ

ಹೆಚ್ಚು ದೇಶ-ವಿದೇಶಗಳ ನಾಣ್ಯಗಳ ಮತ್ತು ನೋಟುಗಳ

ಪ್ರದರ್ಶನವನ್ನು ನಡೆಯಿತು.

ಹುಕ್ಕೇರಿ ತಾಲೂಕಿನ ನರಸಿಂಗಪೂರ ಗ್ರಾಮದ

ಲಂಕೇಶ ಗಸ್ತಿಯವರು ಸುದೀರ್ಘ 16 ವರ್ಷಗಳಿಂದ

ವಿವಿಧ ನೋಟು, ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ

ಹೊಂದಿದ್ದು ಓರಂಗಜೇಬ, ಟಿಪ್ಪುಸುಲ್ತಾನ, ಮಹ್ಮದಬೀನ

ತುಗಲಕ್ ಇತ್ಯಾದಿ ರಾಜ-ಮಹಾರಾಜರ ಕಾಲದಲ್ಲಿ ಇದ್ದ

ನಾಣ್ಯಗಳನ್ನು ಮತ್ತು ವಿವಿಧ ದೇಶಗಳ ನೋಟುಗಳನ್ನು

ಸಂಗ್ರಹಿಸಿ ಹಲವಾರು ಕಡೆಗೆ ಪ್ರದರ್ಶಿಸುತ್ತ ಬಂದಿದ್ದಾರೆ.

ಅದೇರೀತಿ ಶಾಲೆಯಲ್ಲಿ ಸಹ ಪ್ರದರ್ಶನ ಏರ್ಪಡಿಸಿ

ನಾಣ್ಯಗಳ ಮತ್ತು ನೋಟುಗಳನ್ನು ವಿದ್ಯಾರ್ಥಿಗಳಿಗೆ

ತೋರಿಸಿದರು.

ಶಾಲೆಯ ಚೇರಮನ್ಎಮ್.ಜಿ. ಗಾಣಿಗೇರ ಶಾಲಾ

ಮಕ್ಕಳಿಗೆ ಹಣ ಚಲಾವಣೆಯ ಮಾಹಿತಿಯನ್ನು ನೀಡಿದ್ದಕ್ಕೆ

ಲಂಕೇಶ ಘಸ್ತಿಯವರಿಗೆ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮುಖ್ಯೌಪಾಧ್ಯಾಯರಾದ

ಎಸ್. ಎಸ್. ಢವಳೇಶ್ವರ, ಎಮ್.ಎಮ್. ದಬಾಡಿ, ಸಹ

ಶಿಕ್ಷಕರಾದ ಎಚ್.ವಾಯ್. ಸನದಿ, ಬಿ.ಎನ್. ನಾಯಕ,

ಆರ್. ಕೋರ್ಬು, ಬಿ.ಐ. ಅತ್ತಾರ, ಎಚ್.ಪಿ. ಶಿವಾಪೂರ

ಇದ್ದರು

loading...

LEAVE A REPLY

Please enter your comment!
Please enter your name here