ನಾಪತ್ತೆಯಾದ ಇಬ್ಬರು ಮಹಿಳೆಯರು ಹೆಣವಾಗಿ ಪತ್ತೆ

0
87

ಕನ್ನಡಮ್ಮ ಸುದ್ದಿ-ಬೆಳಗಾವಿ: ಕೆಲ ದಿನಗಳ ಹಿಂದೆ ಅಂತೆ ನಾದಿನಿ ತಿಥಿಗೆಂದು ಹೋದವರು ನಾಪತ್ತೆಯಾಗಿದ್ದರು. ರಾಮದುರ್ಗ ತಾಲೂಕಿನ ಗೊಡಚಿ ಬೆಟ್ಟದಲ್ಲಿ ಈ ಇಬ್ಬರು ಮಹಿಳೆಯರು ಬರ್ಬರವಾಗಿ ಹತ್ಯೆಯಾಗಿ ಪತ್ತೆಯಾಗಿದ್ದಾರೆ.
ಸಂಬಂಧಿಕರ ಮನೆಗೆ ತಿಥಿಗೆಂದು ಹೋಗಿದ್ದ ಮಹಿಳೆಯರು ನಾಪತ್ತೆಯಾದ ಬಗ್ಗೆ ಏ.9 ರಂದು ಪ್ರಕರಣ ಮುಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರನ ದಾಖಲಾಗಿತ್ತು. ಈ ಮಹಿಳೆಯರು ರಾಮದುರ್ಗ ತಾಲೂಕಿನ ಗೊಡಚಿ ಬೆಟ್ಟದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತ ಮಹಿಳೆಯರು ರಾಮದುರ್ಗ ತಾಲೂಕಿನ ಗೊಣಗನೂರು ಗ್ರಾಮದ ರೇಣಿಕಾ ತಳವಾರ (40), ಹಾಗೂ ಸಾಂವಕ್ಕ ತಳವಾರ (38) ಎಂಬ ಇಬ್ಬರು ಮಹಿಳೆಯರು ಹತ್ಯೆಯಾಗಿರುವ ಘಟನೆ ಜನರನ್ನು ಬೆಚ್ಚಿಬಿಳಿಸುವಂತೆ ಮಾಡಿದೆ.
ಹತ್ಯೆಗೆ ಅನೈತಿಕ ಸಂಬಂಧ ಹಾಗೂ ಹಣಕಾಸಿನ ವ್ಯವಹಾರಗಳು ಇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ ಎಂದು ಪೊಲೀಸ್‍ರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ ತಾವರಗೇರಿ, ಪಂಚಪ,್ಪ ಬಸವರಾಜ ಎಂಬ ಮೂರರನ್ನು ವಶಕ್ಕೆ ಪಡೆದ ಪೊಲೀಸ್‍ರು ತ್ರೀವ ವಿಚಾರಣೆಯನ್ನು ನಡೆಸುತ್ತಿದ್ದಾರೆ.

loading...