ನಾಲ್ವರಿಂದ ಕಳ್ಳತನ ಸಿಸಿಟಿವಿಯಲ್ಲಿ ಪತ್ತೆ

0
5

ರಬಕವಿ-ಬನಹಟ್ಟಿ: ಕಳೆದ ಆರೇಳು ತಿಂಗಳ ಹಿಂದೆ ಸಣ್ಣ ಪುಟ್ಟ ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆಸುತ್ತಿದ್ದ ಅಪರಾಧದ ಹಿನ್ನಲೆ ಕೆಲ ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದರು. ಮತ್ತೆ ಕೆಲ ಕಳ್ಳರು ತನ್ನ ಕರಾಮತ್ತು ತೋರಿಸುತ್ತಿರುವದು ಸಿಸಿಟಿವಿ ಮೂಲಕ ಬೆಳಕಿಗೆ ಬಂದಿದೆ.
ಬುಧವಾರ ನಸುಕಿನ ಜಾವ ೩ ರಿಂದ ೩.೩೦ ರ ಸುಮಾರಿನಲ್ಲಿ ಮಂಗಳವಾರ ಪೇಟೆ ವಿಠ್ಠಲ ದೇವಸ್ಥಾನ ಹತ್ತಿರದ ಪಾನಬೀಡಾ ಅಂಗಡಿಯೊಂದರಲ್ಲಿ ನಾಲ್ವರಿಂದ ಕಳ್ಳತನ ಮಾಡಿ ಕೆಲ ವಸ್ತು, ನಗದು ದೋಚಿ ಪರಾರಿಯಾಗಿದ್ದಾರೆ.

ಕಳ್ಳತನ ಮಾಡಿದ ಬಗ್ಗೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಾಲ್ವರು ೨೦ ರಿಂದ ೨೫ ವರ್ಷ ವಯಸ್ಸಿನ ಯುವಕರಿಂದ ಈ ಕಳ್ಳತನ ನಡೆದಿದೆ. ಈ ಕುರಿತು ಸ್ಥಳೀಯ ಪೊಲೀಸರು ಅಪರಾಧಿಗಳ ಬೆನ್ನತ್ತಬೇಕಿದೆ.

loading...