ನಾಳೆ ಪಾಲಿಕೆಯ ನೂತನ ಮೇಯರ್, ಉಪಮೇಯರ್ ಆಯ್ಕೆ

0
19

ರೆಸಾರ್ಟ್‍ಗೆ ತೆರಳಿದ ಎಮ್‍ಇಎಸ್ ಸೇವಕರು – ಅಭಿವೃದ್ಧಿಗೆ ಒತ್ತು ನೀಡುವವರು ಮೇಯರ್!

*ರಾಜಶೇಖರಯ್ಯಾ ಹಿರೇಮಠ

ಬೆಳಗಾವಿ:2 ಮಹಾನರ ಪಾಲಿಕೆಯ ಮಹಾಪೌರ ಹಾಗೂ ಉಪಮಹಾಪೌರ ಸ್ಥಾನಗಳಿಗೆ ಶುಕ್ರವಾರ ಮತದಾನದ ಹಿನ್ನೆಲೆಯಲ್ಲಿ ಎಮ್‍ಇಎಸ್‍ನ 32 ನಗರ ಸೇವಕರು ಗೋವಾದ ಶಿರೋಡಾ ಸಮಿಪದ ರೆಸಾರ್ಟ್‍ನಲ್ಲಿ ಸಂಭಾಜಿ ಪಾಟೀಲ ನೇತೃತ್ವದಲ್ಲಿ ಸಭೆ ನಡೆಲು ತೆರಳಿದ್ದಾರೆ.
ಪಾಲಿಕೆಯ ಅಧಿಕಾರ ಚುಕ್ಕಾಣಿ ಹಿಡಿಯಲು ಕನ್ನಡಿಗರು ಈ ಬಾರಿ ಮಹಾಪೌರರಾಗಲು ಹರಸಾಹಪಡುತ್ತಿದ್ದರೇ ಇಲ್ಲಿನ ಜನಪ್ರತಿನಿಧಿಗಳು ನಾಟಕಿಯ ಬೆಳವಣಿಗೆ ನಡೆಸಿದ್ದಾರೆ ಎಂದು ನಗರ ಸೇವಕರು ಆರೋಪಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ವಿಧಾನ ಮಂಡಳ ಅಧಿವೇಶನ ನಡೆಯುತ್ತಿದ್ದರಿಂದ ಮಾ.4 ರಂದು ಪಾಲಿಕೆಯಲ್ಲಿ ಮಹಾಪೌರ ಉಪಮಹಾಪೌರ ಸ್ಥಾನಕ್ಕಾಗಿ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ರಾಜ್ಯದ ಯಾವೊಬ್ಬ ಜನಪ್ರತಿನಿಧಿಗಳು ಬಹತೇಕ ಈ ಚುನಾವಣೆಯಲ್ಲಿ ಭಾಗವಹಿಸಿವುದಿಲ್ಲ ಎಂಬುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಆದರೆ ಎಮ್‍ಇಎಸ್ ನಗರ ಸೇವಕರಲ್ಲಿ ಮೂರು ಗುಂಪುಗಳಾಗಿದ್ದು ಯಾರು ಮೈಲುಗಲ್ಲು ಸಾಧಿಸುತ್ತಾರೋ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಮಹಾಪೌರ ಕಿರಣ ಸಾಯನಾಕ ಅವರ ಗುಂಪಿನಲ್ಲಿ ಆಪ್ತರಾಗಿ ಗುರುತಿಸಿಕೊಂಡಿದ್ದ ಕಿರಣ ಠಾಕೂರ ನೇತೃತ್ವದ ತಂಡವೊಂದೆಡೆಯಾದರೇ, ಸಂಭಾಜಿ ಪಾಟೀಲ ಹೇಳಿದ ಅಭ್ಯರ್ಥಿ ಮಹಾಪೌರರಾಗಬೇಕೆಂಬ ಹಟದಿಂದ ಅವರದೊಂದು ಗುಂಪಾಗಿದೆ. ಇನ್ನು ಕಿರಣ ಸಾಯನಾಕ ಅವರು ಹೇಳಿದ ಅಭ್ಯರ್ಥಿ ಅಧಿಕಾರದ ಗದ್ದುಗೆ ಹಿಡಿಯಬೇಕೆಂದು ಈಗಾಗಲೇ ಬೆಳಗಾವಿ ಅಭಿವೃದ್ಧಿ ವೇದಿಕೆಯ ಹೆಸರಿನಡಿ ಗುಂಪು ಕಟ್ಟಿಕೊಂಡು ರೇಸಾರ್ಟ ರಾಜಕಾರಣ ನಡೆಸುತ್ತಿದ್ದಾರೆ.
ಈ ಬಾರಿ ಮಹಾಪೌರ ಹುದ್ದೆಗೆ ಸಾಮಾನ್ಯ ಮಹಿಳೆಗೆ ಎಂದು ತಿಳಿದ ಹಿನ್ನೆಯಲ್ಲಿ ಕನ್ನಡ ನಗರ ಸೇವಕಿ ಜಯಶ್ರೀ ಮಾಳಗಿ ಅವರನ್ನು ಕಣದಲ್ಲಿ ನಿಲ್ಲಿಸಲು 26 ಕನ್ನಡ ನಗರ ಸೇವಕರು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಮನಸ್ಸು ಮಾಡಿ ಎಲ್ಲ ಜನಪ್ರತಿನಿಧಿಗಳು ಸೇರಿಕೊಂಡು ಕನ್ನಡಿಗರ ಮಹಾಪೌರರಾಗಬೇಕೆಂದು ಸೂಚನೆ ನೀಡಿದರೇ ಕನ್ನಡಿಗರಿಗೆ ಈ ಬಾರಿಯ ಮಹಾಪೌರ ಪಟ್ಟ ಶತಸಿದ್ದ.
ಆದರೆ ಎಮ್‍ಇಎಸ್ ಪಾಳೆಯಲ್ಲಿ ಮೂರು ಪಂಗಡಗಳಾಗಿದ್ದರಿಂದ ಈ ಬಾರಿಯ ಬಹುತೇಕ ಕನ್ನಡಿಗರ ಮಹಾಪೌರ ಸ್ಥಾನ ಸಿಗುವುದು ಎರಡು ಮಾತ್ತಿಲ್ಲ. ಆದರೆ ಸಚಿವ ಜಾರಕಿಹೊಳಿ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯವಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಹೇಳುವಂತೆ ಪಾಲಿಕೆಯ ಮಹಾಪೌರ ಹಾಗೂ ಉಪಮಹಾಪೌರರಾಗಲು ಭಾಷೆ ಬರುವುದರಿಲ್ಲ. ನಗರದ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡುವವರು ಆಯ್ಕೆಯಾಗುತ್ತಾರೆ ಎಂದಿದ್ದಾರೆ. ಹಾಲಿ ಮಹಾಪೌರ ಕಿರಣ ಸಾಯನಾಕ ಅವರು ಬೆಳಗಾವಿ ಅಭಿವೃದ್ಧಿ ವೇದಿಕೆ ಎಂದು ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಎಮ್‍ಇಎಸ್‍ನಲ್ಲಿ ಪಂಗಡವಾಗಿರುವುದರಿಂದ ಬಹುತೇಕ ಸಾಯನಾಕ ಬಣದವರಿಗೆ ಈ ಬಾರಿಯ ಮಹಾಪೌರ ಸ್ಥಾನ ಲಭಿಸುವುದು ಅಲ್ಲಗಳೆಯುವಂತಿಲ್ಲ.
ಜಿಲ್ಲೆಯಲ್ಲಿ ನಡೆಯುವ ಎಲ್ಲ ಚುನಾವಣೆಗಳು ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಪಾಲಿಕೆಯ ಮಹಾಪೌರ ಹಾಗೂ ಉಪಮಹಾಪೌರದ ಅಧಿಕಾರವನ್ನು ಎಮ್‍ಇಎಸ್ ಪಾಲಿಗೆ ನೀಡಿ ಮುಂಬರುವ ವಿಧಾನ ಸಭಾ ಚುನಾವಣೆಯ ಹಾದಿಯನ್ನು ಪ್ರತಿಷ್ಠಿತ ರಾಜಕಾರಣಿಗಳು ಸುಲಭ ಮಾಡಿಕೊಳ್ಳುತ್ತಿದ್ದಾರೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.
ಪಾಲಿಕೆಯ ಮಹಾಪೌರ ಹಾಗೂ ಉಪಮಹಾಪೌರ ಚುನಾವಣೆಯಲ್ಲಿ ಬಹತೇಕ ಎಮ್‍ಇಎಸ್ ನಗರ ಸೇವಕರ ಸಂಖ್ಯಾ ಬಲ ಹೆಚ್ಚಿಗೆ ಇರುವುದರಿಂದ ಇವರಲ್ಲಿರುವ ಒಬ್ಬರಿಗೆ ಮಹಾಪೌರ ಮತ್ತು ಉಪಮಹಾಪೌರ ಸ್ಥಾನ ಅಲಂಕರಿಸುವುದು ಖಚಿತವಾಗಿದೆ. ಕನ್ನಡಿಗರು ಅಧಿಕಾರ ಚುಕ್ಕಾಣಿ ಹಿಡಿದರೇ ಪಾಲಿಕೆಯ ಯಾವುದೇ ಸಭೆಯಲ್ಲಿ ಸ್ಪಷ್ಟವಾದ ನಿಲುವನ್ನು ಪಡೆದಕೊಳ್ಳಲು ಎಮ್‍ಇಎಸ್ ನಗರ ಸೇವಕರು ಬಿಡುವುದಿಲ್ಲ ಎಂಬುದು ಈ ಹಿಂದೆ ಶಿದ್ದನಗೌಡ ಪಾಟೀಲರು ಮಹಾಪೌರರಾದ ಸಂದರ್ಭದಲ್ಲಿ ತಿಳಿದಿದೆ.
ಈ ನಿಟ್ಟಿನಲ್ಲಿ ಎಮ್‍ಇಎಸ್‍ನಲ್ಲಿ ಮೂರು ಪಂಗಡದವರ ನಿಲುವನ್ನು ತಿಳಿದುಕೊಂಡು ಶುಕ್ರವಾರದಂದು ನಡೆಯುವ ಪಾಲಿಕೆ ಚುನಾವಣೆಯಲ್ಲಿ ಒಬ್ಬ ವ್ಯಕ್ತಿಯನ್ನು ಅಖಾಡಕ್ಕೆ ಇಳಿಸಲು ನಿರ್ಧರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಬಾಕ್ಸ್
ನಗರದ ಸಮಗ್ರ ಅಭಿವೃದ್ಧಿ ಪರ ವಿಚಾರ ಮಾಡುವ ಅಭ್ಯರ್ಥಿಯನ್ನು ಮಹಾಪೌರ ಸ್ಥಾನ ಸಿಗಲಿದೆ. ಮಹಾನಗರ ಪಾಲಿಕೆಯಲ್ಲಿ ಭಾಷೆ, ಜಾತಿ ಬರುವುದಿಲ್ಲ ಅಭಿವೃದ್ಧಿಯೊಂದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ಬಾಕ್ಸ್
“ಜಿಲ್ಲೆಯಲ್ಲಿ ನಡೆಯುವ ಎಲ್ಲ ಚುನಾವಣೆಗಳು ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಪಾಲಿಕೆಯ ಮಹಾಪೌರ ಹಾಗೂ ಉಪಮಹಾಪೌರದ ಅಧಿಕಾರವನ್ನು ಎಮ್‍ಇಎಸ್ ಪಾಲಿಗೆ ನೀಡಿ ಮುಂಬರುವ ವಿಧಾನ ಸಭಾ ಚುನಾವಣೆಯ ಹಾದಿಯನ್ನು ಪ್ರತಿಷ್ಠಿತ ರಾಜಕಾರಣಿಗಳು ಸುಲಭ ಮಾಡಿಕೊಳ್ಳುತ್ತಿದ್ದಾರೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

loading...

LEAVE A REPLY

Please enter your comment!
Please enter your name here