ನಿಚ್ಚಣಕಿ ಶ್ರೀಗಳಿಗೆ ಡಿಸಿ ನೋಟಿಸ್ ಗ್ರಾಮಸ್ಥರ ಆಕ್ರೋಶ

0
39

 

ಚನ್ನಮ್ಮ ಕಿತ್ತೂರು ಃ ದಿ.24 ರಂದು ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ನಿಚ್ಚಣಕಿ ಪಂಚಾಕ್ಷರಿ ಸ್ವಾಮೀಜಿ ಎಂಎಲ್‍ಸಿ ಅವರ ರೂ 4 ಲಕ್ಷ ಅನುದಾನ ಪಡೆದುಕೊಳ್ಳಲು 25 ಸಾವಿರ ಕರ್ಚಾಗಿದೆ ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎನ್.ಜಯರಾಂ ಶ್ರೀಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಇದನ್ನು ಖಂಡಿಸಿ ಗ್ರಾಮದ ಪ್ರಮುಖರು ಪತ್ರಿಕಾ ಗೋಷ್ಠಿ ನಡೆಸಿದರು. ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರು ನಿಚ್ಚಣಕಿ ಶ್ರೀಗುರು ಮಡಿವಾಳೇಶ್ವರ ಮಠಕ್ಕೆ ರೂ.4 ಲಕ್ಷ ಅನುದಾನವನ್ನು ನೀಡಿರುವ ಕುರಿತು ಆದೇಶ ಪತ್ರ ನೀಡಿದ್ದರು ಅದರಂತೆ ಕಳೆದು ಮೂರು ವರ್ಷಗಳಿಂದ ಹಲವಾರು ಭಾರಿ ಜಿಲ್ಲಾಧಿಕಾರಿ ಅವರ ಕಚೇರಿಗೆ ಅಲೇದಾಡಲು 25 ಸಾವಿರ ಖರ್ಚಾಗೆದೆ ಎಂದು ಕಿತ್ತೂರು ಉತ್ಸವದಲ್ಲಿ ನಮ್ಮ ಶ್ರೀಗಳು ಹೇಳಿಕೆ ನೀಡಿರುವದು ಸತ್ಯ ಆದರೆ ಶ್ರೀಗಳು ಲಂಚ ಎಂದಿಲ್ಲ ಆದರೆ ಜಿಲ್ಲಾಧಿಕಾರಿಗಳು ಶ್ರೀಗಳಿಗೆ ನೋಟಸ್ ನೀಡಿರುವದು ಖಂಡನೀಯ. ಅನುದಾನವನ್ನು ಮೂಂಜುರಾತಿ ಪಡೆಲು ನಿಮ್ಮ ಕಚೇರಿಯ ಅಧಿಕಾರಿಗಳೆ ಕಳೆದ ಮೂರು ವರ್ಷಗಳಿಂದ ಅಲೆದಾಡಿಸುತ್ತಿದ್ದಾರೆ. ಕೆಲಸ ವಿಳಂಬವಾಗಿದ್ದಕ್ಕೆ ಶ್ರೀಗಳು ನ್ಯಾಯ ಕೇಳಿದ್ದಾರೆ ವಿಳಂಬವಾಗಿದ್ದಕ್ಕೆ ಅಧಿಕಾರಿಗಳಿಗೆ ನೋಟಿಸ್ ನೀಡಬೇಕಾಗಿದ್ದ ಜಿಲ್ಲಾಧಿಕಾರಿಗಳು ನ್ಯಾಯ ಕೇಳಿದಕ್ಕಾಗಿ ಶ್ರೀಗಳಿಗೆ ನೋಟಿಸ್ ನೀಡಿರುವದು ಯಾವ ನ್ಯಾಯ ಎಂದು ಸಕ್ಕರಗೌಡ ಪಾಟೀಲ, ಅಶೋಕ ದಳವಾಯಿ, ಮಡಿವಾಳಪ್ಪ ವರಗನ್ನವರ, ಅಪ್ಪೇಶಿ ದಳವಾಯಿ, ಬಸವನಗೌಡ ಪಾಟೀಲ, ಈರಣ್ಣ ವರಗನ್ನವರ ಅಸಮಾದಾನ ವ್ಯಕ್ತಪಡಿಸಿದರು.

ನಿಚ್ಚಣಕಿ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ನಾನು ಲಂಚ ಎಂದು ಹೇಳಿಲ್ಲ ಅನುದಾನ ಪಡೆಯಲು ಸಾಕಷ್ಟು ಭಾರಿ ಅಲೆದಾಡಲು 25 ಸಾವಿರ ಹಣ ಖರ್ಚಾಗಿದೆ ಎಂದು ಹೇಳಿದೆ ಈ ಕುರಿತು ಜಿಲ್ಲಾಧಿಕಾರಿಗಳು ವಿವರಣೆ ಕೇಳೀದರು ಈ ಕುರಿತು ಲಿಕಿತ ಹೇಳಿಕೆ ನೀಡಿದ್ದರು ಜಿಲ್ಲಾಧಿಕಾರಿಗಳು ನೋಟಿಸ್ ಜಾರಿ ಮಾಡಿರುವದು ಸರಿಯಲ್ಲ ವಿಳಂಬ ಮಾಡಿದು ಯಾವ ಕಾರಣಕ್ಕೆ ಎಂದು ತಮ್ಮ ಕೇಳಗಿನ ಅಧಿಕಾರಿಗಳಿಗೆ ಕಾರಣ ಕೆಳ ಬೇಕಾಗಿತ್ತು ಆದರೆ ನ್ಯಾಯ ಕೇಳಿರುವವರಿಗೆ ನೋಟಿಸ್ ನೀಡಿದ್ದು, ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

loading...

LEAVE A REPLY

Please enter your comment!
Please enter your name here