ನಿಜಾಮ ಮ್ಯೂಸಿಯಂನಲ್ಲಿ ಕಳ್ಳತನ

0
8

ನವದೆಹಲಿ:ಹೈದರಾಬಾದ್ ನಗರದ ಮ್ಯೂಸಿಯಂವೊಂದಲ್ಲಿ ಕಳ್ಳತನ ನಡೆದಿದೆ. ಭದ್ರತೆ, ಸಿಸಿಟಿವಿ ಎಲ್ಲ ಇದ್ದರೂ ಖದೀಮರು ಕೋಟ್ಯಂತರ ರೂಪಾಯಿ ಬೆಲೆಬಾಳುವ ಚಿನ್ನದ ಟಿಫಿನ್ ಬಾಕ್ಸ್ ಸೇರಿದಂತೆ ಇನ್ನಿತರ ಐತಿಹಾಸಿಕ ವಸ್ತುಗಳನ್ನು ಕದ್ದೊಯ್ದಿದ್ದಾರೆ.
ನಿಜಾಮ ಏರಿಯಾದಲ್ಲಿರುವ ನಿಜಾಮ ಮ್ಯೂಸಿಯಂನಲ್ಲಿ ಎಂದಿನಂತೆ ಪಹರೆ ಕಾಯುತ್ತಿದ್ದ ಸೆಕ್ಯುರಿಟ್ ಗಾಡ್ರ್ಸ್ ಬೆಚ್ಚಿಬಿದ್ದಿದ್ದರು. ಕಾರಣ ಅತ್ಯಂತ ಬೆಲೆಬಾಳುವಚಿನ್ನದ ಟಿಫಿನ್‍ಬಾಕ್ಸ್ ಹಾಗೂ ವಜ್ರಾಲಂಕೃತ ಕಪ್ ಮತ್ತು ಸಾಸರ್ ಮಂಗಮಾಯವಾಗಿರುವುದು ಬೆಳಕಿಗೆ ಬಂದಿತ್ತು.
ನಿಜಾಮ ಕಾಲದ ಅತ್ಯಂತ ಬೆಲೆಬಾಳುವ 2ಕೆಜಿ ತೂಕದ ಚಿನ್ನದ ಟಿಫಿನ್ ಬಾಕ್ಸ್ ಹಾಗೂ ವಜ್ರ, ಮಾಣಿಕ್ಯ,ಪಚ್ಚೆ ಅಲಂಕೃತ ಅತಿ ದುಬಾರಿ ಕಪ್ ಹಾಗೂ ಸಾಸರ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಹೈದರಾಬಾದ್‍ನ ಪುರಾನಿ ಹವೇಲಿಯಲ್ಲಿರುವ ಮ್ಯೂಸಿಯಂನಲ್ಲಿ ಬಿಗಿ ಭದ್ರತೆಯಿದ್ದರೂ ದರೋಡಕೋರರು ಕೈಚಳಕ ತೋರಿಸಿದ್ದಾರೆ.
ಭಾನುವಾರರಾತ್ರಿ ಕಟ್ಟಡದ ಮೊದಲ ಮಹಡಿಯ ಬಾಗಿಲು ಒಡೆದು ಹಗ್ಗ ಬಳಸಿ ಮ್ಯೂಸಿಯಂ ಒಳಗೆ ನುಗ್ಗಿದ್ದ ಕಳ್ಳರು, ಚಿನ್ನದ ಟಿಫಿನ್ ಬಾಕ್ಸ್, ಕಪ್ ಹಾಗೂ ಸಾಸರ್‍ನ್ನು ಕದ್ದೊಯ್ದಿದ್ದಾರೆ ಎಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.
ಸ್ಥಳಕ್ಕೆ ಹೈದರಾಬಾದ್ ಪೊಲೀಸ್ ಕಮೀಷನರ್ ಅಂಜನಿ ಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಖತರ್ನಾಕ್ ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಏಳನೇ ನಿಜಾಮ ಮಿರ್‍ಒಸ್ಮಾನ್ ಅಲಿಖಾನ್ ಬಹದ್ದೂರ್ ಕಾಲದ ಈ ಪುರಾತನ ವಸ್ತುಗಳೊಂದಿಗೆ,ಆತನಿಗೆ ಉಡುಗೊರೆಯಾಗಿ ಬಂದ ಇತರ ವಸ್ತುಗಳನ್ನೂ ಸಂಗ್ರಹಿಸಲಾಗಿದೆ.ಸದ್ಯ ಪೊಲೀಸರು ಸಿಸಿಟಿವಿ ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

loading...