ನಿವೇಶನ ಹಂಚಿಕೆ ವ್ಯವಹಾರದಲ್ಲಿ ಅಕ್ರಮ ಮೌನ ವಹಿಸಿದ ಅಧಿಕಾರಿಗಳು

0
11

ಕನ್ನೆಡಮ್ಮ ಸುದ್ದಿ-ಕುಮಟಾ: ರೈತರ ಕೃಷಿಕರ ಹಿತ ಕಾಪಾಡುವ ಕುಮಟಾ ಎಪಿಎಂಸಿಯಲ್ಲಿ ಕೆಲವು ಎಪಿಎಂಸಿ ಸದಸ್ಯರಿಂದ ಸಂಭಂದಿಸಿರುವ ನಿವೇಶನ ಹಂಚಿಕೆ ವ್ಯವಹಾರದಲ್ಲಿ ಅಕ್ರಮ ಹಾಗೂ ಭೃಷ್ಟಾಚಾರ ನಡೆದಿರುವ ಹಲವಾರು ಸಂಗತಿಗಳು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ಇದ್ದರೂ ಸಹಿತ ಯಾವುದೇ ಕ್ರಮ ತೆಗೆದುಕೊಳ್ಳದೇ ಮೌನ ವಹಿಸಿರುವುದನ್ನು ನೋಡಿದರೆ ಮೇಲಾಧಿಕಾರಿಗಳೂ ಸಹ ಈ ಅಕ್ರಮದಲ್ಲಿ ಭಾಗೀದಾರರೇ ಎನ್ನುವ ಸಂಶಯ ಕಾಡುತ್ತಿದೆ ಎಂದು ಎಪಿಎಂಸಿ ಸದಸ್ಯ ರಾಮಚಂದ್ರ ಎಚ್ ನಾಯ್ಕ ಆರೋಪೊಸೊದ್ದಾರೆ.
ಅವರು ಪತ್ರಕರ್ತರೊಂದಿಗೆ ಮಾತನಾಡಿ, 2017ರ ಜನೆವರಿ ತಿಂಗಳಲ್ಲಿ ಎಪಿಎಂಸಿ ಸದಸ್ಯನಾಗಿ ಆಯ್ಕೆ ಆಗಿರುವ ನಾನು, ಈ ಅಕ್ರಮದ ಕುರಿತು ಎಪಿಎಂಸಿ ಸಮಿತಿ ಸಭೆಯಲ್ಲಿ ಸಂಭಂದಿಸಿದ ಈ ವಿಷಗಳನ್ನಿಟ್ಟು ಚರ್ಚಿಸುವಂತೇ ಹಲವಾರು ಭಾರಿ ಕೋರಿಕೊಂಡಾಗಲೂ ಸಹ ಈ ಕುರಿತು ಯಾವುದೇ ಕ್ರಮ ತೆಗೆದುಕೊಳ್ಳದೇ ವಿಳಂಭ ನೀತಿ ಅನುಸರಿಸುತ್ತಿರುವುದರಿಂದ, ಮಾಧ್ಯಮದ ಮೂಲಕ ಈ ವಿಷಯವನ್ನು ಬಹಿರಂಗಪಡಿಸುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ವಿವಿಧ ನಾಲ್ಕು ವಿಭಾಗಗಳಿಂದ ಒಟ್ಟು 14 ಜನರನ್ನು ಎಪಿಎಂಸಿ ಆಡಳಿತ ಸಮಿತಿಯ ಸದಸ್ಯರುಗಳನ್ನಾಗಿ ಆಯ್ಕೆ ಮಾಡಬೇಕಿರುವುದು ನಿಯಮ. ಈ ನಿಯಮದ ಪ್ರಕಾರ ತಾಲ್ಲೂಕಿನ (1) ಎಪಿಎಂಸಿಯ ಕೃಷಿಕರ ಕ್ಷೇತ್ರದ ವಿಭಾಗಗಳಿಂದ 11 ಜನ ರನ್ನು, (2) ಎಪಿಎಂಸಿಯ ಸಹಕಾರ ಸಂಸ್ಕರಣ ಸಂಘಗಳ ವಿಭಾಗಗಳಿಂದ ಒಬ್ಬರನ್ನು, (3) ಎಪಿಎಂಸಿಯ ವರ್ತಕರು ಕ್ಷೇತ್ರದ ವಿಭಾಗಗಳಿಂದ ಒಬ್ಬರನ್ನು, ಮತ್ತು (4) ಎಪಿಎಂಸಿಯ ಎಲ್ಲಾ ಸಹಕಾರಿ ಸಂಘಗಳ ಕ್ಷೇತ್ರದ ವಿಭಾಗಗಳಿಂದ ಒಬ್ಬರನ್ನು, ಹೀಗೇ ಒಟ್ಟು 14 ಜನರನ್ನು ಆಯ್ಕೆ ಮಾಡಬೇಕಿದೆ. ಹೀಗೆ ಆಯ್ಕೆ ಆಗುವ ಸಂಧರ್ಭದಲ್ಲಿ ಒಂದು ವಿಭಾಗಗಳ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ದಿಸ ಬಯಸುವವನ ಹಸರು ಇನ್ನೊಂದು ವಿಭಾಗದ ಮತದಾರರ ಯಾದಿಯಲ್ಲಿ ಇರಕೂಡದೆಂಬ ನಿಯಮವಿದೆ. ಆದರೆ, ಪ್ರಸ್ತುತ ಸಹಕಾರ ಸಂಸ್ಕರಣ ಸಂಘಗಳ ಆಡಳಿತ ಸಮಿತಿಯಲ್ಲಿರುವ ಮೂವರು ಮತದಾರರಲ್ಲಿ ಓರ್ವರು ವರ್ತಕರುಗಳ ಕ್ಷೇತದಿಂದ ಚುನಾವಣೆಗೆ ಸ್ಪರ್ದಿಸಿ ಆಯ್ಕೆ ಆಗಿರುತ್ತಾರೆ. ಇನ್ನೀರ್ವರು ಕೃಷಿಕರ ಕ್ಷೇತ್ರ ದಿಂದ ಚುನಾವಣೆಗೆ ಸ್ಪರ್ದಿಸಿ ಆಯ್ಕೆ ಆಗುವುದರ ಮುಖಾಂತರ ಕೃಷಿಕರಿಗೆ ಅನ್ಯಾಯವೆಸಗಿರುತ್ತಾರೆ.ಈ ರೀತಿ ಅಕ್ರಮವಾಗಿ ಎಪಿಎಂಸಿ ಸದಸ್ಯರಾಗಿದ್ದುಕೊಂಡು ಕುಮಟ ಎಪಿಎಂಸಿ ಮಾರುಕಟ್ಟೆ ವ್ಯಾಪ್ತಿಯಲ್ಲಿರುವ 6 ಎಕರೆ 14 ಗುಂಟೆ ಜಾಗದಲ್ಲಿ 42 ನಿವೇಶನಗಳನ್ನು ಸೃಷ್ಠಿಸಿ ಹಂಚಿಕೆ ಮಾಡುವ ಸಂಧರ್ಬದಲ್ಲಿ ಸಂಪೂರ್ಣವಾಗಿ ಕಾನೂನನ್ನು ಗಾಳಿಗೆ ತೂರಿರುವುದು ಕಂಡುಬರುತ್ತದೆ. ಈ ಅವ್ಯವಹಾರದಲ್ಲಿ ಹಿರಿಯ ಅಧಿಕಾರಿಗಳೂ ಸಹ ಭಾಗೀದಾರರಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದ್ದರಿಂದ ಈ ಎಲ್ಲ ನಿಯಮ ಬಾಹಿರ ವ್ಯವಹಾರವನ್ನು ತನಿಕೆ ಮಾಡಿಸಿ ಕೃಷಿಕರಿಗೆ ಹಾಗೂ ರೈತರಿಗಾಗಿರುವ ಅನ್ಯಾಯವನ್ನು ಸರಿಪಡಿಸುವಂತೇ ನಮ್ಮ ಜಿಲ್ಲೆಯ ಉಸ್ತುವಾರಿ ಮಂತ್ರಿಗಳಾದ ಆರ್ ವಿ ದೇಶಪಾಂಡೆ ಅವರಲ್ಲಿ ಹಾಗೂ ಜಿಲ್ಲಾಧಿಕಾರಿಗಳಲ್ಲಿ ನಿವೇದಿಸಿಕೊಳ್ಳುತ್ತೇನೆ. ಇಲ್ಲವಾದಲ್ಲಿ ಈ ಕುರಿತು ರೈತರಿಗೆ ನ್ಯಾಯ ಒದಗಿಸಿಕೊಡಲು ರೈತರೆಲ್ಲರನ್ನು ಸೇರಿಸಿ ಉಘ್ರ ಹೋರಾಟಮಾಡಲಾಗುವುದು. ಅಲ್ಲದೇ ಈ ಹೋರಾಟ ಮಾಡುವ ಸಂಧರ್ಬದಲ್ಲಿ ಅಕ್ರಮವೆಸಗಿರುವವರು ವಯಕ್ತಿಕವಾಗಿ ನನಗೆ ತೊಂದರೆ ಕೊಡುವ ಸಾಧ್ಯತೆ ಇರುವುದರಿಂದ ಮಾನ್ಯ ಪೋಲೀಸ ಇಲ್ಲಾಖೆಯವರೂ ಸಹ ಈ ಅಕ್ರಮ ಬಯಲಿಗೆಳೆಯಲು ನನಗೆ ಸಹಕಾರ ನೀಡುವಂತೇ ಮಾಧ್ಯಮದವರ ಮೂಲಕ ವಿನಂತಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.

loading...