ನೀರಿಗಾಗಿ ಮತ್ತೇ ಬಂಡಾಯದ ಎಚ್ಚರಿಕೆ ನೀಡಿದ ರೈತರು

0
28

ಕನ್ನಡಮ್ಮ ಸುದ್ದಿ-ಗದಗ: ಜನಪ್ರತಿನಿಧಿ ಸರ್ಕಾರದ ವಿರುದ್ಧ ಮೊಳಗಿದ ದೇಶದ ಪ್ರಪ್ರಥಮ ರೈತ ಚಳುವಳಿಗೆ ಶನಿವಾರಕ್ಕೆ 38 ವರ್ಷ ತುಂಬಿದ್ದು ಅಂದು ನೀರಿನ ಕರವಸೂಲಿಯ ವಿರುದ್ಧ ನಡೆದ ಬಂಡಾಯ ಇಂದು ಅದೇ ನೀರಿಗಾಗಿ ನಡೆಸುತ್ತಿರುವ ರೈತ ಚಳುವಳಿಗಳು ಮತ್ತೊಂದು ಬಂಡಾಯ ಸಾರುವ ಮೊದಲು ಆಡಳಿತಾರೂಢ ಸರ್ಕಾರಗಳು ಎಚ್ಚೆತ್ತುಕೊಂಡು ಮಹದಾಯಿ ಅನುಷ್ಠಾನಕ್ಕಾಗಿ ಮುಂದಾಗಬೇಕೆಂದು ಒತ್ತಾಯಿಸಿ ಶನಿವಾರ ರೈತ ಹುತಾತ್ಮ ದಿನ ಗದಗ ನಗರದ ಮಹಾತ್ಮಾಗಾಂಧಿ ವೃತ್ತದಲ್ಲಿ ಹೆಚ್‌. ಶಿವರಾಮೇಗೌಡರ ಬಣದ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಜೈ ಭೀಮ ಸೇನಾ ಸಂಘಟನೆ ಜಂಟಿಯಾಗಿ ಆಡಳಿತರೂಢ ಸರ್ಕಾರದ ವಿರುದ್ಧ ಸಿಟಿ ಊದುವ ಮೂಲಕ ಮೈಮೇಲೆ ನೀರು ಸುರಿದುಕೊಂಡು ರಸ್ತೆ ತಡೆ ನಡೆಸಿ ಬೃಹತ್‌ ಪ್ರತಿಭಟನೆ ಮಾಡಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಗದಗ ಜಿಲ್ಲಾಧ್ಯಕ್ಷ ಮಂಜುನಾಥ ಪರ್ವತಗೌಡರ ಮಾತನಾಡಿ, 38 ವರ್ಷಗಳ ಹಿಂದೆ ಅಂದು ಆಡಳಿತಾರೂಢ ಸರ್ಕಾರ ತಂದ ನೀರಿನ ಕರ ವಸೂಲಿ ಕಾಯ್ದೆಯ ವಿರುದ್ಧ ಕ್ರಾಂತಿ ಮೊಳಗಿಸಿ ಹುತಾತ್ಮರಾದ ವೀರಪ್ಪ ಕಡ್ಲಿಕೊಪ್ಪ ಮತ್ತು ಬಸಪ್ಪ ಲಕ್ಕುಂಡಿ ರೈತರ ಸ್ಮರಣಾರ್ಥವಾಗಿ ಇಂದು ರೈತ ಹುತಾತ್ಮ ದಿನವೆಂದು ಪ್ರತಿವರ್ಷ ಆಚರಿಸಲಾಗುತ್ತಿದ್ದು, ಅಂದು ನಡೆದ ಸ್ವಾಭಿಮಾನಿ ಗಂಡು ಮೆಟ್ಟಿನ ನಾಡಿನ ರೈತರ ಸ್ವಾಭಿಮಾನದ ಬಂಡಾಯ ಹೋರಾಟ ಮಹದಾಯಿ ಅನುಷ್ಠಾನಕ್ಕಾಗಿ ಮತ್ತೊಂದು ಸಾರಿ ಬಂಡಾಯ ಮರುಕಳಿಸದಂತೆ ಆಡಳಿತರೂಢ ಸರ್ಕಾರಗಳು, ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಈ ಕೂಡಲೇ ಮಹದಾಯಿ ಅನುಷ್ಠಾನಕ್ಕೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಅಂದು ನೀರಿನ ಕರವಸೂಲಿಗಾಗಿ ನಡೆದ ಬಂಡಾಯ ಇಂದು ಅದೇ ನೀರಿಗಾಗಿ ಮತ್ತೊಂದು ಬಂಡಾಯ ನಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಬಂಡಾಯದಲ್ಲಿ ಈ ಭಾಗದ ರೈತರು ತಮ್ಮ ಪ್ರಾಣತ್ಯಾಗಕ್ಕೂ ಸಿದ್ಧರಾಗಿರುತ್ತಾರೆಂದು ಆಡಳಿತರೂಢ ಸರ್ಕಾರಗಳು ಮತ್ತು ಜನಪ್ರತಿ£ಧಿಗಳಿಗೆ ಎಚ್ಚರಿಕೆ ನೀಡಿದರು.
ಜೈ ಭೀಮ ಸೇನಾ ಸಂಘಟನೆಯ ಜಿಲ್ಲಾಧ್ಯಕ್ಷ ಗಣೇಶ ಹುಬ್ಬಳ್ಳಿ ಮಾತನಾಡಿ, ನರಗುಂದದಲ್ಲಿ ಅಂದು ನಡೆದ ಬಂಡಾದದಲ್ಲಿ ಹುತಾತ್ಮರಾದ ರೈತರ ವೀರಗಲ್ಲಿಗೆ ರೈತ ಸಂಘಗಳಿಂದ ಹಿಡಿದು ಆಡಳಿತರೂಢ ಪಕ್ಷಗಳ ಮುಖಂಡರುಗಳು ಮತ್ತು ಜನಪ್ರತಿನಿಧಿಗಳು ಹಾಗೂ ಸಚಿವರುಗಳಿಂದ ಮಾಲಾರ್ಪಣೆ ಮಾಡಿ ಆಣೆ ಪ್ರಮಾಣಗಳು ಕಳೆದ 38 ವರ್ಷಗಳಿಂದ ಕೇಳಿ ಸಾಕಾಗಿದೆ ಹೊರತು ಅದು ಕಾರ್ಯರೂಪಕ್ಕೆ ಬರುತ್ತಿಲ್ಲ. ಆದರೆ ಅಂದು ಹುತಾತ್ಮರಾದ ರೈತರ ವೀರಗಲ್ಲು ಇಂದು ಕೂಡಾ ಕಗ್ಗತ್ತಲ್ಲಿ ಒಂಟಿಯಾಗಿದೆ.
ಬಂಡಾಯದಲ್ಲಿ ಹುತಾತ್ಮರಾದ ರೈತರ ಸ್ಮಾರಕ ನಿರ್ಮಾಣದ ಕನಸು ಕನಸಾಗಿದೆ ಉಳಿದಿದೆ. ಕಾರಣ ಈ ಭಾಗದ ಆಡಳಿತರೂಢ ಸರ್ಕಾರಗಳು ಹಾಗೂ ಜನಪ್ರತಿ£ಧಿಗಳು ಆಶ್ವಾಸನೆಗಳನ್ನು ನೀಡದೆ ಆಣೆ ಪ್ರಮಾಣಗಳನ್ನು ಮಾಡದೆ ಈ ಕೂಡಲೇ ಮುತುವರ್ಜಿ ವಹಿಸಿ ಹುತಾತ್ಮರಾದ ರೈತರ ಸ್ಮಾರಕ ನಿರ್ಮಾಣ ಮಾಡಬೇಕು. ಅದೇ ರೀತಿ ಮಹದಾಯಿ ಯೋಜನೆ ಅನುಷ್ಠಾನವನ್ನು ಈ ಕೂಡಲೆ ಜಾರಿಗೆಯಾಗುವಂತೆ ಪ್ರತಿಯೊಬ್ಬ ಜನಪ್ರತಿನಿಧಿಗಳು ಆಡಳಿತರೂಢ ಪಕ್ಷಗಳಿಗೆ ಒತ್ತಡಗಳನ್ನು ಹೇರಿ ಅನುಷ್ಠಾನವನ್ನು ಜಾರಿಗೆ ತರಬೇಕು ಇಲ್ಲದಿದ್ದಲ್ಲಿ ಹುತಾತ್ಮರಾದ ರೈತರ ವೀರಗಲ್ಲಿನ ಹತ್ತಿರ ನಾವು ಕೂಡಾ ಸಮಾಧಿಯಾಗುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಗಳ ಕಾರ್ಯಕರ್ತರಾದ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಮುಳ್ಳಾಳ, ಜೈ ಭೀಮ ಸೇನಾ ಸಂಘಟನೆಯ ರಾಜ್ಯ ಉಪಾಧ್ಯಕ್ಷ ರಾಘವೇಂದ್ರ ಪರಾಪೂರ, ಕರವೇ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಹುಣಶೀಮರದ, ಜೈ ಭೀಮ ಸೇನಾ ಸಂಘಟನೆಯ ಚಂದ್ರು ಚವ್ಹಾಣ, ಮಂಜುನಾಥ ಥೌಜಲ್‌, ರಾಷ್ಟ್ರೀಯನ ಜೋಸೇಫ್‌. ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಫಿಲೋಮೀನಾ ಜೋಸೆಫ್‌, ಗದಗ ತಾಲೂಕ ಅಧ್ಯಕ್ಷ ಮಂಜುಳಾ ಕೊರಕನವರ, ಸಂತೋಷ ಕುಂಬಾರ, ಶ್ರೀನಿವಾಸÀ ಬಳ್ಳಾರಿ, ಬಸಯ್ಯ ಗುಡ್ಡಿಮಠ, ಪ್ರಶಾಂತ ಗೌಡರ, ಅಲ್ಲಾಭಕ್ಷ ದುಂದೂರ, ಸಂತೋಷ ಕೊಣ್ಣೂರ, ಮಂಜುನಾಥ ಕುರ್ತಕೋಟಿ, ಶರಣಪ್ಪ ಪೂಜಾರ, ಕಾಳೇಶ ಪತ್ತಾರ, ಮುತ್ತಣ್ಣ ರೊಟ್ಟಿ, ರವಿಕುಮಾರ ಪೂಜಾರ, ಪ್ರೇಮ ಹುಬ್ಬಳ್ಳಿ, ಪರಶುರಾಮ ಸಂಗಾಪೂರ, ವಿರುಪಾಕ್ಷಿ ಸಂಗಾಪೂರ, ಬಸವರಾಜ ಬದಾಮಿ, ಶ್ರೀಧರ ಜಕ್ಕಲಿ ಮುಂತಾದವರಿದ್ದರು.

loading...