ಕನ್ನಡಮ್ಮ ಸುದ್ದಿ-ಚನ್ನಮ್ಮನ ಕಿತ್ತೂರ : ಭಾರತ ಜೈನರ ದೇಶ ಇದು ರಾಮಾಯಣದ ಭರತ ಭಾರತ ಅಲ್ಲ ಇದು ಭರತ ಬಾಹುಬಲಿಯ ಭಾರತ ದೇಶ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು. ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ನಡೆದ ಪಂಚಕಲ್ಯಾಣ ಮಹಾಮಹೋತ್ಸದ ಕೇವಲ ಜ್ಞಾನ ಕಲ್ಯಾಣ ಕಾರ್ಯಕ್ರಮದ ಸಾನಿಧ್ಯತ ವಹಿಸಿ ಮಾತನಾಡಿದ ಅವರು, ಇಸ್ಲಾಂ ಧರ್ಮದವರು ನಮಾಜ ಮಾಡುವದು ದೇವರನ್ನು ಕಾಣುವದಕ್ಕೆ ಕೈಯಲ್ಲಿ ಬದುಕು ಹಿಡಿಯುವದಕ್ಕಾಗಿ ಅಲ್ಲ ಶಾಂತಿ ಕಾಪಾಡುವದಕ್ಕಾಗಿ ಎಂಬುದನ್ನು ಅರಿತುಕೊಳ್ಳಬೇಕು.
ಜೈನ ಮುನಿಗಳು ಹಾಗೂ ಮಾತಾಜಿಗಳ ಜೀವನ ಹೆಜ್ಜೆ ಹೆಜ್ಜೆಗೂ ತ್ಯಾಗ ಮಾಡುತ್ತಾರೆ ಎಲ್ಲರು ನೀರಿನ ಮಹತ್ವ ಅರಿಯಬೇಕು ಇಲ್ಲವಾದರೆ ನೀರಿಗಾಗಿ ಯುದ್ದ ಮಾಡುವ ಕಾಲ ಬರುತ್ತದೆ ಆದ ಕಾರಣ ರೈತರು ಹೊಲ ಗದ್ದೆಗಳಲ್ಲಿ ಗುಂಡಿಗಳನ್ನು ತೆಗೆದು ನೀರು ಶೇಖರಿಸುವ ವ್ಯವಸ್ಥೆ ಮಾಡಿ ಅಂತರ ಜಲ ಮಟ್ಟ ಹೆಚ್ಚುತ್ತದೆ. ಮಹಿಳೆಯರು ನೀರನ್ನು ಅವಶ್ಯವಿದಷ್ಟು ಬಳಸುವದನ್ನು ಕಲಿತುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಶ್ರೀ 108 ಚಿನ್ಮಯ ಸಾಗರ ಮುನಿಮಹಾರಾಜ ಮಾತನಾಡಿ, ಅಜ್ಞಾನದಿಂದ ಅಧೋಗತಿಗಿಳಿದಿರುವ ಸಮಾಜವನ್ನು ತಿದ್ದಿ ತೀಡಿ ಸರಿದಾರಿಗೆ ತಂದು ಎಲ್ಲರ ಬಾಳಿಗೆ ಬೆಳಕು ನೀಡುವ ಶಕ್ತಿಯನ್ನು ಮುನಿಗಳು, ಸ್ವಾಮೀಜಿಗಳು ಹೊಂದಿದ್ದಾರೆ ಭಾರತೀಯ ಆದರ್ಶ ಸಂಸ್ಕøತಿಯನ್ನು ಉಳಿಸಿಬೆಳೆಸಬೇಕು ಎಂದು ಹೇಳಿದರು. ಜನವಾಡದ ಅಲ್ಲಮ ಪ್ರಭು ಆಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಉತ್ತಮ ಸಮಾಜವನ್ನು ಕಟ್ಟುವ ಕಾರ್ಯದಲ್ಲಿ ತೊಡಗಿರುವದು ಶ್ಲಾಘನೀಯ. ಸುಸಂಸ್ಕøತ, ಆದರ್ಶ ರಾಷ್ಟ್ರ ನಿರ್ಮಾಣವಾಗಲು ಬಾಲ್ಯಾವಸ್ಥೆಯಿಂದಲೇ ಮಕ್ಕಳಲ್ಲಿ ವೀರರು, ಶರಣ, ಸಂತರು ಮತ್ತು ಮಹಾತ್ಮರ ಆದರ್ಶಗಳನ್ನು ಮಕ್ಕಳ ಮನದಲ್ಲಿ ತುಂಬಬೇಕು ಎಂದು ಹೇಳಿದರು.
ಶಾಂತಮೂರ್ತಿ ಬಾಲಾಚಾರ್ಯ ಶ್ರೀ 108 ಸಿದ್ದಸೇನ ಮುನಿ ಮಹಾರಾಜರು, ಮುನಿ ಶ್ರೀ 108 ಪುಣ್ಯ ಸಾಗರ ಮಹಾರಾಜ, ಮುನಿಶ್ರೀ ಯಸ ಮಹಾರಾಜ, ವಿಶ್ವ ಯಶಂ ಸಾಗರ ಮಹಾರಾಜ, ಅರಿತಾ ರತ್ನ 105 ಜೀನವಾಣಿ ಮಾತಾಜಿ, ಇವರು ಸಾನಿಧ್ಯ ವಹಿದರು. ಸೋಮದೇವ ಭಯ್ಯಾಜಿ ಪ್ರವಚನ ನೀಡಿದರು. ಪದ್ಮಲತಾ ನಿರಂಜನಕುಮಾರ, ವಿದ್ಯಾಸಾಗರ ಉಪಾಧ್ಯೆ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ, ಅಷ್ಪಾಕ ಹವಾಲ್ದಾರ, ಗುಂಡುಗೌಡ ಪಾಟೀಲ, ದೇವುಗೌಡ ಪಾಟೀಲ, ಬಸವರಾಜ ಶಿರಗಾಪೂರ, ನಿಂಗಪ್ಪ ಹಳೆಮನಿ, ತವಣ್ಣಪ್ಪ ಹಿತ್ತಲಕೇರಿ, ಪಾರಿಸ್ ಹುಕ್ಕೇರಿ, ರವಿ ತರಾಟಿ, ಬಾಹುಬಲಿ ಪಾಟೀಲ, ದಶರಥ ಹಿತ್ತಲಕೇರಿ, ಸೇರಿದಂತೆ ಇತರರು ಇದ್ದರು.

loading...