ನೀರು ಪೂರೈಕೆಗಾಗಿ ರಸ್ತೆ ತಡೆ ನಡೆಸಿ ಪ್ರತಿಭಟನೆ

0
30

ಕನ್ನಡಮ್ಮ ಸುದ್ದಿ- ರೋಣ: ನೀರಿಗಾಗಿ ದಿನನಿತ್ಯ ನರಕಯಾತನೆ ಅನುಭವಿಸುತ್ತಲಿದ್ದು, ಅಧಿಕಾರಿಗಳು ಮೌನ ವಹಿಸುತ್ತಿದ್ದಾರೆ. ತಿಂಗಳು ಕಳೆದರೂ ನೀರು ದೊರೆಯದಂತಿದೆ. ಇದಕ್ಕೆ ಪುರಸಭೆಯ ಅಧಿಕಾರಿಗಳು ಕಾರ್ಯವೈಫಲ್ಯವೇ ಪ್ರಮುಖ ಕಾರಣವಾಗಿದೆ ಎಂದು 18ನೇ ವಾರ್ಡ್‌ನ ನಿವಾಸಿಗಳು ನೇರವಾಗಿ ಪುರಸಭೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಮುಲ್ಲನಭಾವಿ ಕ್ರಾಸ್‌ನಲ್ಲಿ 18ನೇ ವಾರ್ಡ್‌ನ ನಿವಾಸಿಗಳು ನಿತ್ಯವೂ ನೀರಿಲ್ಲದೇ ಪರಿತಪಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ್ದರಿಂದ ರಸ್ಥೆ ತಡೆ ನಡೆಸಿ ಇಲ್ಲಿನ ನಿವಾಸಿಗಳು ಪ್ರತಿಭಟಣೆ ಮಾಡಿದರು.
18ನೇ ವಾರ್ಡ್‌ನ ಪುರಸಭೆ ಸದಸ್ಯ ಅಜೀಜ ಎಲಿಗಾರ ಮಾತನಾಡಿ, ಇದಕ್ಕೂ ಪೂರ್ವದಲ್ಲಿ ಇಲ್ಲಿನ ನಿವಾಸಿಗಳಿಗೆ ತಿಂಗಳ ಗತಿಸಿದರೂ ನೀರಿಲ್ಲ. ಅಧಿಕಾರಿಗಳು ಸಮಸ್ಯೆ ಬಗೆಹರಿಸದಿದ್ದರಿಂದ ನಿವಾಸಿಗಳು ಪ್ರತಿಭಟನೆ ಕೈಗೊಂಡಿದ್ದಾರೆ ಎಂದರು.
ನಿವಾಸಿ ಮುದಿಯಪ್ಪ ನದಾಫ ಮಾತನಾಡಿ, ತಿಂಗಳೂ ಗತಿಸಿದರೂ ನೀರು ದೊರೆಯದಂತಾಗಿದ್ದು, ಪುರಸಭೆಯಧಿಕಾರಿಗಳು ನೀರು ಸರಬರಾಜು ಮಾಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿನ ನಿವಾಸಿಗಳ ಸಮಸ್ಯೆ ಅಧಿಕಾರಿಗಳಿಗೆ ತಿಳಿಯುವುದಾದರೂ ಯಾವಾಗ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ತಡೆನಿಲ್ಲಿಸಿದ್ದರ ಪರಿಣಾಮ ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಗುರುವಾರ ಸಂತೆಯ ದಿನವಾದ್ದರಿಂದ ಸಾರ್ವಜನಿಕರು ಪರದಾಡುವಂತಾಯಿತು.
ಈ ಸಂದರ್ಭದಲ್ಲಿ ದಾವಲಸಾಬ್‌ ನರಗುಂದ, ಯಲ್ಲಪ್ಪ ಗಂಜಾಳ, ಹುಸೇನಸಾಬ್‌ ನದಾಫ್‌, ಸೌರಭಿ ನದಾಫ್‌, ಮಲ್ಲವ್ವ ಶಾಡ್ಲಗೇರಿ, ಪಾರವ್ವ ಹೊಂಬಳ, ಸೇರಿದಂತೆ 18ನೇ ವಾರ್ಡ್‌ನ ನಿವಾಸಿಗಳು ಇದ್ದರು.

loading...